ಸುಂದರಿಯಾಗಲು 2 ವರ್ಷದಲ್ಲಿ 20 ಸರ್ಜರಿ: 22ರ ಯುವತಿ ಮುಖವೀಗ ವಿಕಾರ!
First Published | May 5, 2020, 3:53 PM ISTವಿಶ್ವದಲ್ಲಿ ಚಿತ್ರ ವಿಚಿತ್ರ ಬಗೆಯ ಆಸೆ ಆಕಾಂಕ್ಷೆಗಳಿದದವರು ಇರುತ್ತಾರೆ. ಕೆಲವರಿಗೆ ಕೂದಲು ಚೆನ್ನಾಗಿರಬೇಕೆಂಬ ಆಸೆಯಾದರೆ, ಇನ್ನು ಕೆಲವರಿಗೆ ಉಗುರು. ಇನ್ನು ಕೆಲವರು ಪ್ಲಾಸ್ಟಿಕ್ ಸರ್ಜರಿಯ ಬಗೆಯೂ ಹೆಚ್ಚು ಒಲವು ಇಟ್ಟುಕೊಂಡಿರುತ್ತಾರೆ. ಬುಲ್ಗೇರಿಯಾದ 22 ವರ್ಷದ ಆಂಡ್ರಿಯಾ ಎಮಿಲೋವಾ ಇವಾನೋಲಾಗೆ ತನ್ನ ತುಟಿಗಳು ದೊಡ್ಡದಾಗಿ, ದಪ್ಪವಾಗಿರಬೇಕೆಂಬ ಆಸೆ ಇತ್ತು. ಇದಕ್ಕಾಗಿ ಆಕೆ ನೀರಿನಂತೆ ಹಣ ವ್ಯಯಿಸಿದ್ದಾಳೆ. ಈವರೆಗೂ ಆಕೆ ತಾನಂದುಕೊಂಡಂತೆ ತುಟಿಗಳು ಇರೇಕೆನ್ನುವ ಹುಚ್ಚಿಗೆ ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾಳೆ. ಕೇವಲ ಎರಡು ವರ್ಷದಲ್ಲಿ ಇಪ್ಪತ್ತು ಸರ್ಜರಿಗಳನ್ನು ಮಾಡಿಸಿಕೊಂಡಿರುವ ಆಕೆ, ತನ್ನ ತುಟಿಗಳನ್ನು ದಪ್ಪ ಹಾಗೂ ದೊಡ್ಡದಾಗಿಸಿಕೊಂಡಿದ್ದಾಳೆ. ಇಷ್ಟಾದರೂ ಆಂಡ್ರಿಯಾ ಸಂತೋಷವಾಗಿಲ್ಲ. ಆಕೆಗೆ ಇನ್ನೂ ದೊಡ್ಡ ತುಟಿಗಳು ಬೇಕಂತೆ. ಇದಕ್ಕಾಗಿ ಮುಂದೆಯೂ ಸರ್ಜರಿ ಮಾಡಿಸಿಕೊಳ್ಳುವ ಯೋಚನೆಯಲ್ಲಿದ್ದಾಳೆ. ಎರಡು ವರ್ಷದಲ್ಲಿ ಆಂಡ್ರಿಯಾ ಲುಕ್ ಹೇಗೆ ಬದಲಾಗಿದೆ? ಇಲ್ಲಿದೆ ಒಂದು ಝಲಕ್