ಕೊರೋನಾ ತಾಂಡವ: ಎಲ್ಲಿ ನೋಡಿದ್ರೂ ಪ್ಲಾಸ್ಟಿಕ್ ನಲ್ಲಿ ಮುಚ್ಚಿಟ್ಟ ಹೆಣಗಳ ರಾಶಿ!

Published : Mar 06, 2020, 10:22 AM IST

ಚೀನಾದಿಂದ ಹಬ್ಬಿದ ಕೊರೋನಾ ವೈರಸ್ ಸದ್ಯ ಜಗತ್ತಿನೆಲ್ಲೆಡೆ ವ್ಯಾಪಿಸಿದೆ. ಚೀನಾ ಬಳಿಕ ಈಗ ಇರಾನ್ ಹಾಗೂ ದಕ್ಷಿಣ ಕೊರಿಯಾ ಹಾಗೂ ಇಟಲಿಯಲ್ಲಿ ಇದು ಅತ್ಯಂತ ವೇಗವಾಗಿ ವ್ಯಾಪಿಸಲಾರಂಭಿಸಿದೆ. ಕೊರೋನಾಗೆ ಬಲಿಯಾದವರ ಸಂಖ್ಯೆ ದಿನೇ ದಿನೇ ವೃದ್ಧಿಸುತ್ತಿದ್ದು, ಇದನ್ನು ನಿಯಂತ್ರಿಸುವುದು ಕಷ್ಟವಾಗಿದೆ. ಭಾರತಕ್ಕೂ ಇದು ಲಗ್ಗೆ ಇಟ್ಟಿದ್ದು, 30 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಸದ್ಯ ಇರಾನ್ ನಲ್ಲೂ ಕೊರೋನಾ ಮರಣ ಮೃದಂಗ ಬಾರಿಸಲಾರಂಭಿಸಿದ್ದು, ಚೀನಾದಂತೆ ಇಲ್ಲೂ ವಾಸ್ತವ ಮುಚ್ಚಿಡುವ ಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಇಲ್ಲಿನ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಹೆಣಗಳ ರಾಶಿಯೇ ಕಂಡು ಬಂದಿದೆ. ಆದರೆ ಈ ವಿಡಿಯೋ ಇರಾನ್ ನದ್ದೇ ಎಂದು ಸಾಬೀತಾಗಿಲ್ಲ. 

PREV
111
ಕೊರೋನಾ ತಾಂಡವ: ಎಲ್ಲಿ ನೋಡಿದ್ರೂ ಪ್ಲಾಸ್ಟಿಕ್ ನಲ್ಲಿ ಮುಚ್ಚಿಟ್ಟ ಹೆಣಗಳ ರಾಶಿ!
ಸೋಶಿಯಲ್ ಮಿಡಿಯಾದಲ್ಲಿ ಇರಾನ್ ದೇಶದ್ದು ಎನ್ನಲಾದ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ಈ ವಿಡಿಯೋ ಮ್ಯಾಕ್ಸ್ ಹೌರೌತೆ ಹೆಸರಿನ ವ್ಯಕ್ತಿ ಶೇರ್ ಮಾಡಿದ್ದಾರೆ.

211
ಈ ವಿಡಿಯೋ ಇರಾನ್ ನ ಉತ್ತರ ಪ್ರಾಂತ್ಯದಲ್ಲಿರುವ ಕೋಮ್ ಎಂಬ ನಗರದ ವಿಡಿಯೋ ಎನ್ನಲಾಗಿದೆ.

311
ವ್ಯಕ್ತಿಯೊಬ್ಬ ಇಲ್ಲಿನ ಆಸ್ಪತ್ರೆ ಪ್ಲಾಸ್ಟಿಕ್ ನಲ್ಲಿ ಮುಚ್ಚಿಟ್ಟ ರಾಶಿ ರಾಶಿ ಹೆಣಗಳ ವಿಡಿಯೋ ಚಿತ್ರೀಕರಿಸಿದ್ದಾನೆ. ಕೋಣೆಯ ಮೂಲೆ ಮೂಲೆಯಲ್ಲೂ ಹೆಣದ ರಾಶಿ ಬಿದ್ದಿರುವ ದೃಶ್ಯ ನೋಡುವುದು ಬಹಳ ಶಾಕ್ ಹುಟ್ಟಿಸುವಂತಿದೆ.

411
ಸ್ಥಳೀಯ ಪತ್ರಕರ್ತರ ಅನ್ವಯ ಸ್ಥಳದ ಅಭಾವವಿರುವುದರಿಂದ ಈ ಹೆಣಗಳನ್ನು ಸುಟ್ಟು ಹಾಕಿಲ್ಲ. ಹೀಗಾಗೇ ಇವುಗಳನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಡಲಾಗಿದೆ ಎನ್ನಲಾಗಿದೆ.

511
ಇನ್ನು ಸುಮಾರು 3 ಸಾವಿರ ಮಂದಿಗೆ ಈ ಸೋಂಕು ಹರಡಿದೆ ಎಂದು ಸರ್ಕಾರ ತಿಳಿಸಿದೆ.

611
ಆದರೀಗ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸರ್ಕಾರ ಬಹಿರಂಗಪಡಿಸಿದ ಈ ಸಂಖ್ಯೆಯನ್ನು ನಂಬಲು ಅಸಾಧ್ಯವಾಗಿದೆ.

711
ಈ ವಿಡಿಯೋವನ್ನು ಆಸ್ಪತ್ರೆಯ ಸಿಬ್ಬಂದಿಯೇ ರೆಕಾರ್ಡ್ ಮಾಡಿ ಶೇರ್ ಮಾಡಿದ್ದಾರೆನ್ನಲಾಗಿದೆ.

811

911
ಇಲ್ಲಿ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಾಮೂಹಿಕ ನಮಾಜ್ ಗೆ ನಿರ್ಬಂಧ ಹೇರಲಾಗಿದೆ.

1011
ಅಲ್ಲದೇ ಇಲ್ಲಿನ ಜೈಲುಗಳಲ್ಲಿರುವ ಕೈದಿಗಳನ್ನೂ ಬಿಡುಗಡೆಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಕೈದಿಗಳಿಗೆ ಕೊರೋನಾ ವೈರಸ್ ಹರಡದಂತೆ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

1111
ಇರಾನ್ ನಲ್ಲಿ ಫೆಬ್ರವರಿ 19 ರಂದು ಕೊರೋನಾ ವೈರಸ್ ಗೆ ಮೊದಲ ಬಲಿಯಾಗಿತ್ತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories