ಅಮ್ಮ ಮರಿಯಾನೆಗೆ ಜನ್ಮ ನೀಡಿದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾದಾಗ!

First Published | Mar 5, 2020, 5:43 PM IST

ವಾವ್, ಮಗುವಿಗೆ ಅಮ್ಮ ಜನ್ಮ ನೀಡುವ ಕ್ಷಣ ಕೇವಲ ಮನುಷ್ಯನಿಗೆ ಮಾತ್ರವಲ್ಲ, ಪ್ರತಿಯೊಂದೂ ಜೀವಿಗೂ ಅದ್ಭುತವೇ. ಇಂಥ ಅದ್ಭುತ ಕ್ಷಣವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂಗ್ಲೆಂಡ್‌ನ ಚೆಸ್ಟರ್ ಮೃಗಾಲಯದಲ್ಲಿ ತಾಯಿಯಾನೆ ಕೇವಲ 20 ನಿಮಿಷಗಳ ಪ್ರಸವ ವೇದನೆ ಅನುಭವಿಸಿ, ಮರಿಗೆ ಜನ್ಮ ನೀಡಿದೆ. ಈ ಅಮ್ಮನಿಗೆ ಇತರೆ ಆನೆಗಳು ಸಾಥ್ ನೀಡಿರುವ ದೃಶ್ಯವೂ ಮನ ಕಲಕುವಂತಿದೆ.

ಇಂಗ್ಲೆಂಡ್‌ನ ಝೂನಲ್ಲಿ ಸುಂದರ ಹೈ ವೇ ಎಂಬ ಆನೆ ಮರಿಗೆ ಜನ್ಮ ನೀಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೇವಲ 20 ನಿಮಿಷ ಪ್ರಸವ ವೇದನೆ ಅನುಭವಿಸಿದ ಈ ಆನೆಗೆ ಉಳಿದ ಆನೆಗಳು ಸಾಥ್ ನೀಡಿವೆ.
Tap to resize

ಮರಿ ಹೊಟ್ಟೆಯಿಂದ ಬರುತ್ತಲೇ, ಕೆಳಗೆ ಬಿದ್ದಿದೆ.
ಅಬ್ಬಾ, ಮಗು ಹುಟ್ಟಿದ ಕೂಡಲೇ ತಾಯಿಯ ಮುಖದಲ್ಲಿ ಮಂದಹಾಸ. ತಾಯಿ ಆನೆಯ ಸಂತೋಷ ಸೆರೆಯಾಗಿದ್ದು, ಅದ್ಭುತ ಎನಿಸುತ್ತದೆ.
ಅಮ್ಮನಿಗೆ ಪ್ರಸವ ವೇದನೆ ಆರಂಭವಾಗುತ್ತಿದ್ದಂತೆ, ಸುಂದರಾಳ ದೊಡ್ಡ ಮಕ್ಕಳೂ ಸುತ್ತು ವರೆದವು.
ಇದೀಗ ಹೆಣ್ಣು ಮರಿಗೆ ಜನ್ಮ ನೀಡಿದ್ದು, ತಾಯಿ-ಮರಿ ಆರೋಗ್ಯದಿಂದ ಇದ್ದಾವೆಂದು ಜೂ ಮೂಲಗಳು ಸ್ಪಷ್ಟಪಡಿಸಿವೆ.
ಈ ತಾಯಿ ಆನೆಗೆ ಈಗಾಗಲೇ ಒಂದು ಗಂಡು ಹಾಗೂ ಹೆಣ್ಣು ಮರಿಗಳಿವೆ. ಅಮ್ಮನ ನೋವಿನಲ್ಲಿ ಅವೂ ಸಹಕರಿಸಿದ್ದವು.
ಸಿಸಿಟಿವಿಯಲ್ಲಿ ಸೆರೆಯಾದ ಈ ಆನೆ ಪ್ರಸವ ದೃಶ್ಯ ವೈರಲ್ ಆಗುತ್ತಿದೆ.
ಮರಿ ಜನಿಸಿದ ಕೂಡಲೇ ತಾಯಿ, ತನ್ನ ಮಗುವನ್ನು ಮುದ್ದಾಡಿತು.
ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ ಏಷ್ಯನ್ ಆನೆ ಅವನತಿ ಅಂಚಿನಲ್ಲಿದೆ ಎಂದು ಹೇಳಿದೆ.

Latest Videos

click me!