ಕೊರೋನಾ ಬರಬರುತ್ತಾ ಎಂಡಮಿಕ್ ಆಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಾ. ಮೈಕಲ್ ರಯಾನ್ ತಿಳಿಸಿದ್ದಾರೆ.
undefined
ಇದಕ್ಕೆ ಲಸಿಕೆ ಕಂಡುಹಿಡಿಯಲು ಸಾಧ್ಯವಾಗದಿದ್ದರೆ ನಮ್ಮಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡಿಕೊಳ್ಳುವುದೊಂದೆ ಪರಿಹಾರ ಎಂಬ ಮಾತನ್ನು ರಯಾನ್ ಹೇಳಿದ್ದಾರೆ.
undefined
ಎಚ್‌ಐವಿ ವಿರುದ್ಧ ಪರಿಣಾಮಕಾರಿ ಚಿಕಿತ್ಸೆಯನ್ನು ನಾವು ಕಂಡುಹಿಡಿದಿದ್ದೇವೆ. ಕೊರೋನಾ ವಿರುದ್ಧವೂ ಅದೇ ತೆರನಾದ ಕೆಲಸ ಚಾಲ್ತಿಯಲ್ಲಿದೆ ಎಂದು ತಿಳಿಸಿದ್ದಾರೆ.
undefined
ವಿಶ್ವದ ಹಲವು ದೇಶಗಳು ಲಾಕ್ ಡೌನ್ ಸಡಿಲಿಕೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ಹೊರಬಂದಿದೆ.
undefined
ಕೊರೋನಾ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ದೇಶಗಳು ಅರ್ಥ ವ್ಯವಸ್ಥೆಯನ್ನು ಸರಿದೂಗಿಸಲು ಹೆಣಗಾಡುತ್ತಿವೆ.
undefined
ಕೊರೋನಾ ಸೋಂಕು ತಡೆ, ಸೆಕಂಡರಿ ಸೋಂಕು ತಡೆಗೆ ನಿರಂತರ ಕ್ರಮಗಳನ್ನು ಜಾರಿ ಮಾಡುತ್ತಲೇ ಇವೆ.
undefined
ಪ್ರವಾಸೋದ್ಯಮ ಕ್ಷೇತ್ರ ಸಹ ನೆಲಕಚ್ಚಿದ್ದು ಯುರೋಪಿನ ರಾಷ್ಟ್ರಗಳು ಘೋರ ಪರಿಣಾಮ ಎದುರಿಸಬೇಕಾಗಿ ಬಂದಿದೆ.
undefined
ಕೊರೋನಾ ಇದೀಗ ಗಂಭೀರ ವಿಚಾರವಾಗಿದ್ದು ಅದರೊಂದಿಗೆ ಬಾಳಬೇಕಾದ ಅನಿವಾರ್ಯ ಸೃಷ್ಟಿ ಮಾಡಿ ಇಟ್ಟಿದೆ.
undefined
ನಾವು ಕೊರೋನಾವನ್ನು ಸಂಪೂರ್ಣವಾಗಿ ನಿವಾರಿಸುವ ಔಷಧಿ ಕಂಡು ಹಿಡಿದರೆ ಅದನ್ನು ಪ್ರಪಂಚದ ಎಲ್ಲಾ ಅಗತ್ಯವಿರುವ ಜನರಿಗೆ ಪೂರೈಕೆ ಮಾಡಿದರೆ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರಬಹುದು
undefined
ವಿಶ್ವದ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಮುಂದುವರೆಸಿರುವ ಮಾರಕ ಕೊರೋನಾ ಸೋಂಕಿನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 290,269 ಹಾಗೂ ಸೋಂಕಿತರ ಸಂಖ್ಯೆ 4,238,703ಕ್ಕೆ ಏರಿಕೆಯಾಗಿದ್ದು ಅಟ್ಟಹಾಸ ಮುಂದುವರಿದೇ ಇದೆ.
undefined