ಏರ್ ಇಂಡಿಯಾ ದುರಂತ ಬೆನ್ನಲ್ಲೇ ಬೋಯಿಂಗ್‌ನ ಮತ್ತೊಂದು ವಿಮಾನ ಅಪಘಾತ

Published : Jun 21, 2025, 02:06 PM IST

ಏರ್ ಇಂಡಿಯಾ ವಿಮಾನ ದುರಂತದ ಸಾವು ನೋವು ಇನ್ನು ಕಣ್ಣಮುಂದಿದೆ. ಇದರ ಬೆನ್ನಲ್ಲೇ ಬೊಯಿಂಗ್ ಸಂಸ್ಥೆಯ ಮತ್ತೊದು ವಿಮಾನ ಅಪಘಾತಕ್ಕೀಡಾಗಿದೆ. ಇದರೊಂದಿಗೆ ಬೋಯಿಂಗ್ ವಿಮಾನ ಸುರಕ್ಷತೆ ಮೇಲೆ ಅನುಮಾನ ಮತ್ತಷ್ಟು ಹೆಚ್ಚಾಗಿದೆ.

PREV
16

ಅಹಮ್ಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 290ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಬೋಯಿಂಗ್ ಸಂಸ್ಥೆಯ 787-8 ಡ್ರೀಮ್‌ಲೈನರ್ ವಿಮಾನ ಇದಾಗಿತ್ತು. ಅತ್ಯಂತ ಸುರಕ್ಷಿತ ವಿಮಾನ ಎಂದೇ ಪರಿಗಣಿಸಲಾಗಿತ್ತು. ಆದರೆ ಏರ್ ಇಂಡಿಯಾ ವಿಮಾನ ದುರಂತದಿಂದ ಈ ವಿಮಾನದ ಸುರಕ್ಷತೆ ಬಗ್ಗೆ ಅನುಮಾನ ಮೂಡುತ್ತಿದೆ. ಈ ದುರಂದ ಬೆನ್ನಲ್ಲೇ ಇದೀಗ ಬೋಯಿಂಗ್ ಸಂಸ್ಥೆಯ ಮತ್ತೊಂದು ವಿಮಾನ ಅಪಘಾತಕ್ಕೀಡಾಗಿದೆ. ಇದೀಗ ಬೋಯಿಂಗ್ 737 ವಿಮಾನ ಅಪಘಾತಕ್ಕೀಡಾಗಿದೆ.

26

ಐರ್ಲೆಂಡ್ ಒಡೆತನದನ ರೈನ್ಏರ್ ವಿಮಾನ ಲಂಡನ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಗ್ರೀಸ್‌ನ ಕಲಮಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಹೊರಟ ವಿಮಾನ, ಲ್ಯಾಡಿಂಗ್ ವೇಳೆ ಅಪಘಾತಕ್ಕೀಡಾಗಿದೆ. ಲ್ಯಾಂಡಿಂಗ್ ವೇಳೆ ವಿಮಾನದ ರೆಕ್ಕೆಗಳು ಬ್ಯಾರಿಯರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ತೀವ್ರ ಆತಂಕದ ಪರಿಸ್ಥಿತಿ ಎದುರಿಸಿತ್ತು. ವಿಮಾನ ನಿಲ್ದಾಣದ ಫೆನ್ಸಿಂಗ್‌ಗೆ ರೆಕ್ಕೆಗಳು ಡಿಕ್ಕಿಯಾಗಿ ವಿಮಾನ ಹಾನಿಯಾಗಿದೆ. ಈ ಘಟನೆಯಲ್ಲಿ ಎಲ್ಲಾ ಪ್ರಯಾಣಿಕರು, ಸಿಬ್ಬಂಧಿಗಳು ಸುರಕ್ಷಿತವಾಗಿದ್ದಾರೆ.

36

ಏರ್ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ ಇದೀಗ ಬೋಯಿಂಗ್ ಸಂಸ್ಥೆಯ ಮತ್ತೊಂದು ವಿಮಾನ ಅಪಘಾತಕ್ಕೀಡಾಗಿರುವುದು ಸುರಕ್ಷತೆ ಬಗ್ಗೆ ಮತ್ತಷ್ಟು ಅನುಮಾನ ಮೂಡುವಂತೆ ಮಾಡಿದೆ. ಸದ್ಯ ರೈನ್ಏರ್ ವಿಮಾನದ ರೆಕ್ಕೆಗಳು ಡಿಕ್ಕಿಯಾಗಲು ಕಾರಣವೇನು? ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ತಾಂತ್ರಿಕ ಕಾರಣ, ವಿಮಾನದಲ್ಲಿ ಇತರ ಸಮಸ್ಯೆಗಳಿತ್ತಾ ಅನ್ನೋ ಕುರಿತು ಪರಿಶೀಲನೆ ನಡೆಯುತ್ತಿದೆ.

46

ಒಂದೇ ತಿಂಗಳಲ್ಲಿ ರೈನ್ಏರ್ ವಿಮಾನಯಾನದ 2ನೇ ವಿಮಾನ ಆತಂಕದ ಪರಿಸ್ಥಿತಿ ಎದುರಿಸಿದೆ. ಟರ್ಬುಲೆನ್ಸ್ ಕಾರಣದಿಂದ ಇತ್ತೀಚೆಗೆ ರೈನ್ಏರ್ ವಿಮಾನ ಜರ್ಮನಿಯಲ್ಲಿ ತುರ್ತು ಭೂಸ್ವರ್ಶ ಮಾಡಿತ್ತು. ಜೂನ್ ನಾಲ್ಕರಂದು ಪೈಲೆಟ್ ತುರ್ತು ಭೂಸ್ಪರ್ಶ ಮಾಡಿದ್ದರು. ಇದೀಗ ರೈನ್ ಏರ್ ವಿಮಾನ ಡಿಕ್ಕಿಯಾಗಿ ಭಾರಿ ಆತಂಕ ಎದುರಿಸಿದೆ.

56

ವಿಮಾನಯಾನ ಇತಿಹಾಸದಲ್ಲಿ ಅತಿ ಹೆಚ್ಚು ಸಾವುನೋವುಗಳನ್ನು ಪಡೆದ ಏರ್ ಇಂಡಿಯಾ ಪತನದ ಬೆನ್ನಲ್ಲೇ ಇದೀಗ ರೈನ್ಏರ್ ವಿಮಾನ ಅಪಘಾತ ಬೋಯಿಂಗ್ ವಿಮಾನದ ಮೇಲಿನ ಆತಂಕ ಹೆಚ್ಚಿಸಿದೆ. ಜೂನ್ 2023ರಲ್ಲಿ ಏರ್ ಇಂಡಿಯಾ ವಿಮಾನ ತಪಾಸಣೆ ನಡೆದಿತ್ತು. ಡಿಸೆಂಬರ್ 2025ರ ವರೆಗೆ ಯಾವುದೇ ತಪಾಸಣೆ ಅಗತ್ಯವಿಲ್ಲ ಎಂದು ಬೋಯಿಂಗ್ ಸರ್ಟಿಫಿಕೇಟ್ ನೀಡಿತ್ತು. ಆದರೆ ಇದಕ್ಕೂ ಮುನ್ನವೇ ಏರ್ ಇಂಡಿಯಾ ಪತನಗೊಂಡು ಬಹುದೊಡ್ಡ ದುರಂತ ಸಂಭವಿಸಿತ್ತು.ಪತನಗೊಂಡ ಏರ್ ಇಂಡಿಯಾದ ಏರಡೂ ಎಂಜಿನ್ ಸುಸ್ಥಿತಿಯಲ್ಲಿತ್ತು. ಅಷ್ಟೇ ಉತ್ತಮವಾಗಿ ನಿರ್ವಹಣೆ ಮಾಡಲಾಗಿತ್ತು ಎಂದು ಟಾಟಾ ಸನ್ಸ್ ಚೇರ್ಮೆನ್ ಎನ್ ಚಂದ್ರಶೇಖರನ್ ಹೇಳಿದ್ದಾರೆ. ಆದರೆ ಇದೀಗ ಬೋಯಿಂಗ್ ಸಂಸ್ಥೆ ವಿಮಾನಗಳ ಸುರಕ್ಷತೆ ಪದೇ ಪದೇ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಭಾರತದಲ್ಲಿ ಮಾರಣಾಂತಿಕ ಡ್ರೀಮ್‌ಲೈನರ್ ಪತನ ಮತ್ತು ಗ್ರೀಸ್‌ನಲ್ಲಿ ರೈನೇರ್ ಡಿಕ್ಕಿ ಒಳಗೊಂಡ ಇತ್ತೀಚಿನ ಘಟನೆಗಳು ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದೆ.

66

ಆಂತರಿಕ ಲೆಕ್ಕಪರಿಶೋಧನೆಗಳು ಮತ್ತು ಸಾರ್ವಜನಿಕ ಭರವಸೆಗಳ ಹೊರತಾಗಿಯೂ, ಪುನರಾವರ್ತಿತ ತಾಂತ್ರಿಕ ದೋಷಗಳು ಮತ್ತು ಕಾರ್ಯಾಚರಣೆಯ ನಿರ್ಲಕ್ಷ್ಯಗಳು ಬೋಯಿಂಗ್‌ನ ವ್ಯವಸ್ಥೆಯಲ್ಲಿನ ಬಿರುಕುಗಳನ್ನು ಬಹಿರಂಗಪಡಿಸಿವೆ. ಮತ್ತು ಹಾರ್ಡ್‌ವೇರ್‌ನಲ್ಲಿ ಮಾತ್ರವಲ್ಲ, ಕಂಪನಿಯ ಪ್ರತಿಕ್ರಿಯೆ ಕಾರ್ಯವಿಧಾನದಲ್ಲಿಯೂ ಸಹ. ಒಂದು ವರ್ಷದೊಳಗೆ ಬಹು ತಪಾಸಣೆಗೆ ಒಳಗಾದ ಏರ್ ಇಂಡಿಯಾ ಪತನವು ನಿರ್ವಹಣೆಯ ನಂತರ ವಿಮಾನದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ರೈನೇರ್ ಪ್ರಕರಣವು ಕಡಿಮೆ ವಿನಾಶಕಾರಿಯಾಗಿದ್ದರೂ, ತಯಾರಿಕಾ ಸಮಸ್ಯೆಗಳು ಮತ್ತು ವಿತರಣೆಯ ನಂತರದ ಮೇಲ್ವಿಚಾರಣೆಯ ಮೇಲೆ ಮತ್ತೊಮ್ಮೆ ಬೆಳಕು ಚೆಲ್ಲಿದೆ. ಸಾರ್ವಜನಿಕ ಮತ್ತು ವಿಮಾನಯಾನ ವಿಶ್ವಾಸ ಕ್ಷೀಣಿಸುತ್ತಿದೆ.

Read more Photos on
click me!

Recommended Stories