ಇದಕ್ಕೆ ಪೂರಕ ಎಂಬಂತೆ ಈಗ ಪ್ರಿನ್ಸ್ ವಿಲಿಯಂ ತನ್ನ ದಿವಂಗತ ತಾಯಿ ಪ್ರಿನ್ಸೆಸ್ ಡಯಾನಾ ಅವರ ವಿಚ್ಛೇದನ ವಕೀಲರನ್ನು ನೇಮಕ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ಟನ್ ಅವರ ವಿಚ್ಛೇದನದ ವದಂತಿಗಳ ಬಗ್ಗೆ ತಿಂಗಳುಗಳ ಕಾಲ ಊಹಾಪೋಹಗಳಿದ್ದು, ಈಗ ನಡೆದಿರುವ ವಕೀಲರ ನೇಮಕ ಇದಕ್ಕೆ ಪುಷ್ಠಿ ನೀಡುವಂತಿದೆ. ರಾಜಮನೆತನಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಈ ಸುದ್ದಿ ಆಘಾತ ನೀಡಿದೆ. ವರದಿಗಳ ಪ್ರಕಾರ, ಪ್ರಿನ್ಸ್ ವಿಲಿಯಂ ಕಿಂಗ್ ಚಾರ್ಲ್ಸ್ ಅವರ ವಕೀಲರಾದ ಹಾರ್ಬಾಟಲ್ ಮತ್ತು ಲೂಯಿಸ್ ಅವರನ್ನು ತೊರೆದು ಈಗ ಮಿಶ್ಕಾನ್ ಡಿ ರೇಯಾ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. 1996 ರಲ್ಲಿ ಆಗಿನ ಪ್ರಿನ್ಸ್ ಚಾರ್ಲ್ಸ್ ಅವರಿಂದ ವಿಚ್ಛೇದನ ಪಡೆದಾಗ ರಾಜಕುಮಾರಿ ಡಯಾನಾಳ ಪರ ವಕಾಲತ್ತು ವಹಿಸಿದ್ದ ಲಂಡನ್ ಮೂಲದ ಸಂಸ್ಥೆಗೆ ತಮ್ಮ ಮತ್ತು ಅವರ ಕುಟುಂಬದ ಪರವಾಗಿ ಕಾರ್ಯನಿರ್ವಹಿಸಲು ಸೂಚಿಸಿದ್ದಾರೆ.