ಲಾಕ್‌ಡೌನ್ ಮಧ್ಯೆ ಮತ್ತೆ ಬಂದ 'ಬ್ಲೂ ವೇಲ್': 50 ಚಾಲೆಂಜ್ ಮಾಡಿಸಿ, ಜೀವ ಕಬಳಿಸುತ್ತೆ!

Published : Jul 18, 2020, 05:11 PM IST

ಕೆಲ ವರ್ಷಗಳ ಹಿಂದೆ ವಿಶ್ವಾದ್ಯಂತ ಅಚಾನಕ್ಕಾಗಿ ಬ್ಲೂ ವೇಲ್ ಎಂಬ ಗೇಮ್ ಭಾರೀ ಸದ್ದು ಮಾಡಿತ್ತು. ಈ ಒಂದು ಆಟದಿಂದ ವಿಶ್ವದಲ್ಲಿ ಅನೇಕ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ಆಟ ರಷ್ಯಾದಲ್ಲಿ ಆರಂಭವಾಗಿತ್ತು, ಬಳಿಕ ಇದು ಭಾರತಕ್ಕೂ ಲಗ್ಗೆ ಇಟ್ಟಿತ್ತು. ಬಳಿಕ ಅನೇಕ ಆತ್ಮಹತ್ಯೆ ಪ್ರಕರಣಗಳು ಸದ್ದು ಮಾಡಿದಾಗ ಇದನ್ನು ಬ್ಯಾನ್ ಮಾಡಲಾಗಿತ್ತು. ಬಳಿಕ ವಿಶ್ವಾದ್ಯಂತ ಪಬ್‌ ಜೀ ಗೇಮ್ ಭಾರೀ ಪ್ರಸಿದ್ಧಿ ಪಡೆದ ಪರಿಣಾಮ ಜನರು ಬ್ಲೂ ವೇಲ್ ಆಟ ಮರೆತಿದ್ದರು. ಆದರೀಗ ಲಾಕ್‌ಡೌನ್ ಮಧ್ಯೆ ಮತ್ತೆ ಈ ಬ್ಲೂ ಗೇಮ್ ಮಕ್ಕಳ ಮೊಬೈಲ್ ಫೋನ್‌ಗೆ ಲಗ್ಗೆ ಇಟ್ಟಿದೆ. ಈ ನಿಟ್ಟಿನಲ್ಲಿ ಎಚ್ಚರವಾಗಿರುವಂತೆ ರಷ್ಯಾದ ಪೊಲೀಸ್ ಇಲಾಖೆ ಪೋಷಕರಿಗೆ ಮನವಿ ಮಾಡಿಕೊಂಡಿದೆ. ಅಲ್ಲದೇ ಮಕ್ಕಳ ಮೇಲೆ ನಿಗಾ ಇಡುವಂತೆ ಸೂಚಿಸಿದೆ. ಯಾಕೆಂದರೆ ಈ ಸಂದರ್ಭದಲ್ಲಿ ಶಾಎಗಳು ಮುಚ್ಚಿರುವುದರಿಂದ ಆನ್‌ಲೈನ್ ಕ್ಲಾಸ್‌ಗಳು ಆರಂಭವಾಗಿದ್ದು, ಮೊಬೈಲ್ ಫೋನ್ ಮಕ್ಕಳ ಕೈಯ್ಯಲ್ಲೇ ಇರುತ್ತದೆ. ಹೀಗಿರುವಾಗ ಆನ್‌ಲೈನ್ ಗೇಮ್‌ಗಳು ಮಕ್ಕಳ ಗಮನ ಸೆಳೆದಿವೆ. ಅಷ್ಟಕ್ಕೂ ಈ ಬ್ಲೂ ವೇಲ್ ಗೇಮ್ ಅಂದ್ರೆ ಏನು? ಪ್ರಾಣ ಹೇಗೆ ಬಲಿ ಪಡೆಯುತ್ತೆ?

PREV
110
ಲಾಕ್‌ಡೌನ್ ಮಧ್ಯೆ ಮತ್ತೆ ಬಂದ 'ಬ್ಲೂ ವೇಲ್': 50 ಚಾಲೆಂಜ್ ಮಾಡಿಸಿ, ಜೀವ ಕಬಳಿಸುತ್ತೆ!

2016ರಲ್ಲಿ ರಷ್ಯಾದಿಂದ ಆರಮಭವಾದ ಈ ಆಟ ನೋಡ ನೋಡುತ್ತಿದ್ದಂತೆಯೇ ಅನೇಕ ರಾಷ್ಟ್ರಗಳಲ್ಲಿ ಹೆಜ್ಜೆ ಇಟ್ಟಿತ್ತು. ಭಾರತಕ್ಕೂ ಇದು ಪಾದಾರ್ಪಣೆ ಮಾಡಿತ್ತು. ಈ ಆಟದ ಅಂತ್ಯದಲ್ಲಿ ಜನರು ಆತ್ಮಹತ್ಯೆ ಮಾಡಿಕೊಳ್ಳಲೂ ಸಿದ್ಧರಿರುತ್ತಾರೆ. ಅಷಷ್ಟರವರೆಗೆ ಇದು ಪ್ರೇರೇಪಿಸುತ್ತದೆ.

210

ಇದು ಒಟ್ಟು ಐವತ್ತು ದಿನ ನಡೆಯುವ ಆಟ. ಈ ಐವತ್ತು ದಿನಗಳಲ್ಲಿ ಮಕ್ಕಳಿಗೆ ಐವತ್ತು ಸವಾಲುಗಳನ್ನು ಪೂರೈಸಲು ಹೇಳಲಾಗುತ್ತದೆ.

310

ಆರಂಭಿಕ ಸವಾಲುಗಳು ತುಂಬಾ ಸುಲಭವಾಗಿರುತ್ತವೆ. ಇದರಲ್ಲಿ ಹಾರರ್ ಸಿನಿಮಾ ನೋಡುವುದರಿಂದ ಹಿಡಿದು ರಾತ್ರಿ ವೇಳೆ ಎಚ್ಚರವಾಗಿರುವುದು ಕೂಡಾ ಶಾಮೀಲಾಗಿದೆ. ಹೀಗೆ ನಿಧಾನವಾಗಿ ಈ ಚಾಲೆಂಜ್ ಲೆವೆಲ್ ಹೆಚ್ಚುತ್ತದೆ.

410

ಐವತ್ತನೇ ದಿನದ ವೇಳೆಗೆ ಆಡುವವರು ಈ ಗೇಮ್‌ಗೆ ಅದೆಷ್ಟರ ಮಟ್ಟಿಗೆ ಒಗ್ಗಿಕೊಳ್ಳುತ್ತಾರೆಂದರೆ ಅವರು ಇದಕ್ಕಾಗಿ ಏನು ಬೇಕಾದ್ರೂ ಮಾಡಲು ಸಿದ್ಧರಿರುತ್ತಾರೆ. ಹೀಗಿರುವಾಗ ಚಾಲೆಂಜ್ ನೀಡುವವರು ಮಕ್ಕಳಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುತ್ತಾರೆ.

510

ಇನ್ನು ಈ ಚಾಲೆಂಜ್ ನೀಡುವ ವ್ಯಕ್ತಿ ಜೋಕರ್ ಧಿರಿಸಿನಲ್ಲಿರುತ್ತಾರೆನ್ನಲಾಗಿದೆ. ಈತನೇ ಮಕ್ಕಳಿಗೆ ಸೂಚನೆ ರವಾನಿಸುತ್ತಿರುತ್ತಾನೆ. ಆರಂಭದಲ್ಲಿ ಪ್ರೀತಿಯಿಂದ ಬಳಿಕ ಬ್ಲ್ಯಾಕ್‌ಮೇಲ್ ಕೂಡಾ ಮಾಡುತ್ತಾನೆ.

610

ಇಂತಹ ಖತರ್ನಾಕ್ ಗೇಮ್ ಈಗ ಮತ್ತೊಮ್ಮೆ ಆರಂಭವಾಗಿದೆ ಎಂದು ರಷ್ಯಾದ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹೀಗಿರುವಾಗ ಹಹೆತ್ತವರು ಮೊಬೈಲ್‌ನಲ್ಲಿ ಮುಳುಗಿರುವ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆಂದು ಅಗತ್ಯವಾಗಿ ಗಮನಿಸುತ್ತಿರಬೇಕು. 

710

ಇನ್ನು ಈ ಹಿಂದೆ ಈ ಗೇಮ್ ಬಂದಾಗ ಅನೇಕ ಮಕ್ಕಳು ಸೂಸೈಡ್ ಮಾಡಿದ್ದರು. ಇದನ್ನು ಆಡುವ ಮಕ್ಕಳು ತಮಗೆ ತಾವೇ ಹಾನಿಯುಂಟು ಮಾಡುತ್ತಾರೆ. ಇದರಲ್ಲಿ ಕೈ ಕತ್ತರಿಸುವ ಚಾಲೆಂಜ್ ಕೂಡಾ ಇದೆ.

810

ಈ ವಿಚಾರ ಬಹಿರಂಗಗೊಂಡ ಬೆನ್ನಲ್ಲೇ ತನಿಖೆ ನಡೆಸಿ ಕೆಲ ಯುವಕರನ್ನು ಬಂಧಿಸಲಾಗಿತ್ತು. ಇವರು ಗ್ಯಾಂಗ್ ತಯಾರಿಸಿ ಮಕ್ಕಳಿಂದ ಭಯಾನಕ ಕೆಲಸ ಮಾಡಿಸುತ್ತಿದ್ದರು.

910

ಪೊಲೀಸರು ಈ ಎಚ್ಚರಿಕೆ ನೀಡಿದಾಗಿನಿಂದ ಹೆತ್ತವರ ತಲೆನೋವು ಹೆಚ್ಚಿದೆ. ಆನ್‌ಲೈನ್‌ ಕ್ಲಾಸ್‌ ಇರುವುದರಿಂದ ಮಕ್ಕಳಿಗೆ ಫೋನ್‌ ನೀಡಲೇಬಬೇಕಾದ ಅನಿವಾರ್ಯತೆ ಪೋಷಕರಿಗಿದೆ.

1010

ಇಂತಹ ಪರಿಸ್ಥಿತಿಯಲ್ಲಿ ಈ ಗೇಮ್ ಮತ್ತೆ ವ್ಯಾಪಿಸಿದರೆ ಹೆಚ್ಚು ಮಕ್ಕಳು ಇದಕ್ಕೆ ಬಲಿಯಾಗುವ ಸಾಧ್ಯತೆಗಳಿವೆ.

click me!

Recommended Stories