ವಿಶ್ವದ ಮೊದಲ ಕೊರೋನಾ ಚುಚ್ಚುಮದ್ದು ಸಿದ್ಧ, ರಷ್ಯಾದಿಂದ ಅಧಿಕೃತ!

First Published | Jul 12, 2020, 7:52 PM IST

ಮಾಸ್ಕೋ(ಜು. 12) ಕೊರೋನಾ ಆರಂಭವಾದಾಗಿನಿಂದ ಲಸಿಕೆ ಹುಡುಕುವ ಕೆಲಸಗಳು  ವಿಶ್ವದ ಅನೇಕ ರಾಷ್ಟ್ರಗಳಲ್ಲಿ ನಡೆಯುತ್ತಲೇ ಇದೆ. ಇದೀಗ ರಷ್ಯಾ ಮಹತ್ವದ ಸುದ್ದಿಯೊಂದನ್ನು ಜಗತ್ತಿಗೆ ತಿಳಿಸಿದೆ.

ನಾವು ಕೊರೋನಾಕ್ಕೆ ಲಸಿಕೆ ಸಂಶೋಧನೆ ಮಾಡಿದ್ದು. ಅದರ ಕ್ಲಿನಿಕಲ್​ ಪ್ರಯೋಗದ ಎಲ್ಲ ಹಂತಗಳೂ ಪೂರ್ಣಗೊಂಡಿವೆ ಎಂದು ರಷ್ಯಾ ಹೇಳಿದೆ.
undefined
ರಷ್ಯಾದ ಗಮಾಲಿ ಇನ್ಸ್ಟಿಟ್ಯೂಟ್​ ಆಫ್​ ಎಪಿಡೆಮಿಯಾಲಜಿ ಆ್ಯಂಡ್​ ಮೈಕ್ರೋಬಯಾಲಜಿ ಲಸಿಕೆ ತಯಾರಿಸಿದೆ. ಇನ್ಸ್ಟಿಟ್ಯೂಟ್​ ಫಾರ್​ ಟ್ರಾನ್ಸ್ಲೇಶನ್​ ಮೆಡಿಕಲ್​ ಆ್ಯಂಡ್​ ಬಯೋಟೆಕ್ನಾಲಜಿಯ ನಿರ್ದೇಶಕ ವಾದಿಮ್​ ತಾರಾಸೊವ್​ ಮಾಹಿತಿ ನೀಡಿದ್ದಾರೆ.
undefined

Latest Videos


ಲಸಿಕೆ ಪ್ರಯೋಗದಲ್ಲಿ ಸೆಚೋವ್​ ಯೂನಿವರ್ಸಿಟಿಯ ಸ್ವಯಂಸೇವಕರನ್ನು ಒಳಗೊಳ್ಳಲಾಗಿತ್ತು. ಅವರ ಮೇಲೆ ನಡೆಸಿದ ಕ್ಲಿನಿಕಲ್​ ಟ್ರಯಲ್​ ಯಶಸ್ವಿಯಾಗಿದೆ ಎಂದಿದ್ದಾರೆ.
undefined
ಜುನ್ 18 ರಿಂದ ಟ್ರಯಲ್ ಆರಂಭ ಮಾಡಲಾಗಿತ್ತು.
undefined
ಮನುಷ್ಯನ ಆರೋಗ್ಯದ ಮೇಲೆ ಈ ಚುಚ್ಚುಮದ್ದು ಯಾವ ಪರಿಣಾಮ ಬೀರಲಿದೆ ಎಂಬುವದನ್ನು ಪರಿಗಣಿಸಲಾಗಿದೆ ಎಂದು ಮೆಡಿಕಲ್ ವಿಭಾಗದ ನಿರ್ದೇಶಕ ಅಲೆಗ್ಸಾಂಡರ್ ಲಕ್ಷುವ್ ತಿಳಿಸಿದ್ದಾರೆ.
undefined
ಮನುಷ್ಯನ ದೇಹಕ್ಕೆ ಈ ಲಸಿಕೆ ಎಷ್ಟು ಸುರಕ್ಷಿತ ಎಂಬುದನ್ನು ಪರೀಕ್ಷೆ ಮಾಡಲಾಗಿದೆ. ಲಸಿಕೆಯ ಪ್ರಯೋಗ ಯಶಸ್ವಿಯಾಗಿದೆ. ಲಸಿಕೆಯಿಂದ ಯಾವುದೇ ಸಮಸ್ಯೆಯಿಲ್ಲ ಎಂಬುದು ಸಾಬೀತಾಗಿದೆ ಎಂದು ಯೂನಿವರ್ಸಿಟಿ ತಿಳಿಸಿದೆ.
undefined
ಇಡೀ ಪ್ರಪಂಚ ಕೊರೋನಾದಿಂದ ತತ್ತರಿಸಿಹೋಗಿದ್ದು ಎಲ್ಲರೂ ಲಸಿಕೆ ಎದುರು ನೋಡುತ್ತಲೇ ಇದ್ದಾರೆ. ಚೀನಾದಲ್ಲಿ ಹುಟ್ಟಿದ ವೈರಸ್ ಇಡೀ ಜಗತ್ತನ್ನು ವ್ಯಾಪಿಸುತ್ತಲೇ ಇದೆ.
undefined
click me!