ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಮುಂದಿನ ತಿಂಗಳಿಂದ ಕೆಲವು ಆಂಡ್ರಾಯ್ಡ್ ಫೋನ್‌ಗಳು ಮತ್ತು ಐಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ ಎಂದು ವರದಿಯಾಗಿದೆ. ಅಕ್ಟೋಬರ್ 24, 2023 ರಿಂದ ಕೆಲವು ಹಳೆಯ ಸ್ಮಾರ್ಟ್‌ಫೋನ್ ಮಾಡೆಲ್‌ಗಳಿಗೆ ವಾಟ್ಸಾಪ್ ಬೆಂಬಲವನ್ನು ಕೊನೆಗೊಳಿಸುತ್ತಿದೆ.
ಹಳೆಯ ಸ್ಮಾರ್ಟ್‌ಫೋನ್‌ಗಳ ಪಟ್ಟಿಯು Samsung, LG ಮತ್ತು ಇತರ 18 ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ ಎಂದು ಹಲವು ಆನ್‌ಲೈನ್ ವರದಿಗಳು ಹೇಳುತ್ತಿದೆ. ಈ ಪೈಕಿ ಅಕ್ಟೋಬರ್ 24, 2023 ರಿಂದ, Android OS ಆವೃತ್ತಿ 5.0 ಮತ್ತು ಹೊಸದನ್ನು ಮಾತ್ರ ಬೆಂಬಲಿಸಲಾಗುತ್ತದೆ" ಎಂದು WhatsApp ತನ್ನ ಸಪೋರ್ಟ್ ಪೇಜ್‌ನಲ್ಲಿ ಉಲ್ಲೇಖಿಸಿದೆ.
“ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಯನ್ನು ಮುಂದುವರಿಸಲು, ಇತ್ತೀಚಿನದನ್ನು ಬೆಂಬಲಿಸಲು ನಮ್ಮ ಸಂಪನ್ಮೂಲಗಳನ್ನು ಸೂಚಿಸಲು ನಾವು ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳನ್ನು ಬೆಂಬಲಿಸುವುದನ್ನು ವಾಡಿಕೆಯಂತೆ ನಿಲ್ಲಿಸುತ್ತೇವೆ. ನಿಮ್ಮ ಆಪರೇಟಿಂಗ್ ಸಿಸ್ಟಂ ಅನ್ನು ನಾವು ಬೆಂಬಲಿಸುವುದನ್ನು ನಿಲ್ಲಿಸಿದರೆ, ವಾಟ್ಸಾಪ್ ಬಳಸುವುದನ್ನು ಮುಂದುವರಿಸಲು ನಿಮ್ಮ ಸಾಧನವನ್ನು ಅಪ್‌ಗ್ರೇಡ್ ಮಾಡಲು ನಿಮಗೆ ಸೂಚನೆ ನೀಡಲಾಗುತ್ತದೆ ಮತ್ತು ಕೆಲವು ಬಾರಿ ನೆನಪಿಸಲಾಗುತ್ತದೆ. ನಾವು ಬೆಂಬಲಿಸುವ ಇತ್ತೀಚಿನ ಆಂಡ್ರಾಯ್ಡ್ ವರ್ಷನ್ ಅನ್ನು ಇಲ್ಲಿ ಪಟ್ಟಿ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಈ ಪುಟವನ್ನು ನಿಯಮಿತವಾಗಿ ನವೀಕರಿಸುತ್ತೇವೆ, ”ಎಂದು ವಾಟ್ಸಾಪ್ ಸೇರಿಸಲಾಗಿದೆ.
ಇನ್ನು, ಯಾವ್ಯಾವ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್ ತನ್ನ ಬೆಂಬಲವನ್ನು ನಿಲ್ಲಿಸಲಿದೆ ಗೊತ್ತಾ..? 18 ಸ್ಮಾರ್ಟ್‌ಫೋನ್‌ಗಳ ಪಟ್ಟಿ ಹೀಗಿದೆ..
1)ನೆಕ್ಸಸ್ 7 (Android 4.2 ಗೆ ಅಪ್‌ಗ್ರೇಡ್ ಮಾಡಬಹುದು)
2) ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2
3) ಎಚ್‌ಟಿಸಿ ಒನ್
4) ಸೋನಿ ಎಕ್ಸ್‌ಪೀರಿಯಾ Z
5) ಎಲ್‌ಜಿ ಆಪ್ಟಿಮಸ್ G ಪ್ರೋ
6) ಸ್ಯಾಮ್ಸಂಗ್ ಗ್ಯಾಲಕ್ಸಿ S2
7) ಸ್ಯಾಮ್ಸಂಗ್ ಗ್ಯಾಲಕ್ಸಿ ನೆಕ್ಸಸ್
8) ಎಚ್‌ಟಿಸಿ ಸೆನ್ಸೇಶನ್
9) ಮೋಟೋರೊಲಾ ಡ್ರಾಯ್ಡ್ Razr
10) ಸೋನಿ ಎಕ್ಸ್‌ಪೀರಿಯಾ S2
11) ಮೋಟೋರೊಲಾ Xoom
12) ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 10.1
13) ಏಸಸ್ Eee ಪ್ಯಾಡ್ ಟ್ರಾನ್ಸ್‌ಫಾರ್ಮರ್
14) ಏಸರ್ ಐಕೋನಿಯಾ ಟ್ಯಾಬ್ A5003
15) ಸ್ಯಾಮ್ಸಂಗ್ ಗ್ಯಾಲಕ್ಸಿ S
16) ಎಚ್‌ಟಿಸಿ ಡಿಸೈರ್ HD
17)ಎಲ್‌ಜಿ ಆಪ್ಟಿಮಸ್ 2X
18) ಸೋನಿ ಎರಿಕ್ಸನ್ ಎಕ್ಸ್‌ಪೀರಿಯಾ Arc3
ಮೇಲೆ ತಿಳಿಸಿದ ಸ್ಮಾರ್ಟ್‌ಫೋನ್‌ಗಳಲ್ಲಿ ನೆಕ್ಸಸ್ 7 ಮಾತ್ರ ಭಾರತದಲ್ಲಿ ಲಭ್ಯವಿದೆ ಎಂಬುದನ್ನು ಗಮನಿಸುವುದು ಮುಖ್ಯ. ಆದ್ದರಿಂದ, Nexus 7 ಸ್ಮಾರ್ಟ್‌ಫೋನ್ ಬಳಕೆದಾರರು ವಾಟ್ಸಾಪ್ ಬೆಂಬಲವನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿಸಬೇಕಾಗುತ್ತದೆ. ಎಚ್‌ಟಿಸಿ, ಸೋನಿ ಮತ್ತು ಎಲ್‌ಜಿ ಯಂತಹ ಕಂಪನಿಗಳು ಈಗ ಭಾರತದಲ್ಲಿ ಸ್ಮಾರ್ಟ್‌ಫೋನ್ ವ್ಯವಹಾರ ಅಷ್ಟಾಗಿ ನಡೆಸುತ್ತಿಲ್ಲ.
ನಿಮ್ಮ ಆಪರೇಟಿಂಗ್ ಸಿಸ್ಟಮ್ ಇನ್ನು ಮುಂದೆ ಬೆಂಬಲಿಸದಿದ್ದರೆ ಏನಾಗುತ್ತದೆ
ಇನ್ನು, ನಿಮ್ಮ ಆಪರೇಟಿಂಗ್ ಸಿಸ್ಟಮ್‌ಗೆ ಬೆಂಬಲವನ್ನು ನಿಲ್ಲಿಸುವ ಮೊದಲು, ನೀವು ಮುಂಚಿತವಾಗಿ ವಾಟ್ಸಾಪ್ ಮೂಲಕ ನೇರ ಅಧಿಸೂಚನೆಗಳನ್ನು ಸ್ವೀಕರಿಸುತ್ತೀರಿ ಮತ್ತು ಅಪ್‌ಗ್ರೇಡ್‌ನೊಂದಿಗೆ ಮುಂದುವರಿಯಲು ಹಲವು ಬಾರಿ ನಿಮಗೆ ನೆನಪಿಸಲಾಗುವುದು.