ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕುವವರಿಗೆ ಗುಡ್ ನ್ಯೂಸ್, ಇನ್‌ಸ್ಟಾಗ್ರಾಂ ರೀತಿ ಫೀಚರ್!

First Published | Nov 9, 2024, 5:23 PM IST

ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಇದೀಗ ಹೊಸ ಫೀಚರ್ ಬರುತ್ತಿದೆ. ಇನ್‌ಸ್ಟಾಗ್ರಾಂನಲ್ಲಿರುವಂತ ಫೀಚರ್, ಆದರೆ ಅದಕ್ಕಿಂತ ಅಡ್ವಾನ್ಸ್ ಫೀಚರ್ ಇದು. ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕುವ ಪ್ರಿಯರಿಗೆ ಇದು ಸೂಪರ್ ಫೀಚರ್.

ವ್ಯಾಟ್ಸ್ಆ್ಯಪ್ ಬಳಕೆದಾರರ ಅನುಕೂಲ, ಬೇಡಿಕಗೆ ತಕ್ಕಂತೆ ಹೊಸ ಹೊಸ ಫೀಚರ್ ನೀಡುತ್ತಿದೆ. ಈ ಮೂಲಕ ವ್ಯಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚಿಸಿಕೊಂಡಿದೆ. ಇಷ್ಟೇ ಅಲ್ಲ ಎಲ್ಲಾ ಬಳಕೆದಾರರು ವ್ಯಾಟ್ಸ್ಆ್ಯಪ್ ಬಳಕೆಯಿಂದ ತೃಪ್ತಿಯಾಗುವಂತೆ ಮಾಡಿದೆ. ಈಗಾಗಲೇ ವ್ಯಾಟ್ಸ್ಆ್ಯಪ್ ಹಲವು ಹೊಸ ಫೀಚರ್ ಪರಿಚಯಿಸಿದೆ. ಇದೀಗ ವ್ಯಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಇನ್‌ಸ್ಟಾಗ್ರಾಂ ರೀತಿಯ ಫೀಚರ್ ಪರಿಚಯಿಸುತ್ತಿದೆ.
 

ಸದ್ಯ ವ್ಯಾಟ್ಸ್ಆ್ಯಪ್ ಬೀಟಾ ವರ್ಶನ್‌ನಲ್ಲಿ ಹೊಸ ಫೀಚರ್ ಪ್ರಯೋಗ ಮಾಡಲಾಗಿದೆ. ಹೊಸ ಫೀಚರ್ ವ್ಯಾಟ್ಸ್ಆ್ಯಪ್ ಸ್ಟೇಟಸ್‌ಗೆ ಸಂಬಂಧಿಸಿದ್ದಾಗಿದೆ. ಎಲ್ಲರೂ ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕಲು ಹೆಚ್ಚು ಇಷ್ಟಪಡುತ್ತಾರೆ. ಗೆಳೆಯರು, ಆಪ್ತರು, ಕುಟುಂಬಸ್ಥರು ಹಾಕಿದ ಸ್ಟೇಟಸ್‌ಗೆ ಪ್ರತಿಕ್ರಿಯೆ ನೀಡುತ್ತಾರೆ. ಇದೀಗ ಈ ವ್ಯಾಟ್ಸ್ಆ್ಯಪ್ ಸ್ಟೇಟಸ್‌ನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಹೊಸ ಫೀಚರ್ ತರಲಾಗುತ್ತಿದೆ. 

Latest Videos


ಏನಿದು ವ್ಯಾಟ್ಸ್ಆ್ಯಪ್ ಇಂಟರಾಕ್ಟೀವ್ ಸ್ಟೇಟಸ್ ಫೀಚರ್?
ಇಲ್ಲಿ ಎರಡು ಫೀಚರ್‌ನ್ನು ವ್ಯಾಟ್ಸ್ಆ್ಯಪ್ ಸ್ಟೇಟಸ್ ಮೂಲಕ ನೀಡಿದೆ. ಇದೀಗ ಇನ್‌ಸ್ಟಾಗ್ರಾಂ ರೀತಿ ನಿಮ್ಮ ವ್ಯಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಸ್ಟಿಕ್ಕರ್ ಪೋಸ್ಟ್ ಮಾಡಲು ಸಾಧ್ಯವಿದೆ. ಅಂದರೆ ನೀವು ಸ್ಟಿಕ್ಕರ್ ಮೂಲಕ ನಿಮ್ಮ ದಿನ ಸಂತೋಷ, ಹಂಚಿಕೊಳ್ಳುವ ವಿಚಾರವನ್ನು ಹೇಳಲು ಸಾಧ್ಯವಿದೆ. ಹಾಗಂತ ಇದು ಕೇವಲ ಸ್ಟಿಕ್ಕರ್‌ಗೆ ಸೀಮಿವಲ್ಲ.

ಸ್ಟೇಟಸ್ ಮೂಲಕ ನೀವು ಪೋಲ್ ಹಾಕಬಹುದು, ಸರಿಯೋ ತಪ್ಪೋ ಸೇರಿದಂತೆ ಯಾವುದೇ ರೀತಿ ಮತಕ್ಕೆ ಹಾಕುವ ಪ್ರಕ್ರಿಯೆಯನ್ನು ಸ್ಟೇಟಸ್‌ನಲ್ಲಿ ಹಾಕಿಕೊಳ್ಳಬಹುದು. ಇದರ ಜೊತೆಗೆ ನೀವು ಯಾರಿಗೆ ಟ್ಯಾಗ್ ಮಾಡತ್ತೀರೋ, ಅವರಿಗೆ ನೋಟಿಫಿಕೇಶನ್ ಹೋಗಲಿದೆ. ಇದರಿಂದ ಟ್ಯಾಗ್ ಮಾಡಿದ ವ್ಯಕ್ತಿಗಳಿಗೂ ಸ್ಟೇಟಸ್ ಸಿಗಲಿದೆ. ಇದರಿಂದ ಹೆತ್ತು ಕೆನಕ್ಟ್ ಆಗಲು ಸಾಧ್ಯವಿದೆ. ಇನ್‌ಸ್ಟಾಗ್ರಾಂನಲ್ಲಿರುವ ಟ್ಯಾಗ್ ಫೀಚರ್ ಇದೀಗ ವ್ಯಾಟ್ಸ್ಆ್ಯಪ್ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಲು ನಿರ್ಧರಿಸಿದೆ.
 

ಟ್ಯಾಗ್ ಮಾಡಿದ ವ್ಯಕ್ತಿಗಳು ಕೂಡ ನಿಮ್ಮ ಸ್ಟೇಟಸ್ ಶೇರ್ ಮಾಡಿಕೊಳ್ಳಲು ಅಥವಾ ಹಾಕಿಕೊಳ್ಳಲು ಸಾಧ್ಯವಾಗಲಿದೆ. ಈ ಮೂಲಕ ವ್ಯಾಟ್ಸ್ಆ್ಯಪ್ ಸ್ಟೇಟಸ್ ಇದೀಗ ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ಸಂವಹನವಾಗಿ ಬಳಕೆಯಾಗಲಿದೆ. ಹೊಸ ಫೀಚರ್ ಸದ್ಯ ಬೀಟಾ ವರ್ಶನ್‌ನಲ್ಲಿ ಲಭ್ಯವಿದೆ. 
 

click me!