ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಸರಣಿ
ಇತರ ಬೈಕ್‌ಗಳಿಗೆ ಹೋಲಿಸಿದರೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಸ್ಲಿಮ್ ಬಾಡಿಯೊಂದಿಗೆ ಬರಬಹುದು. ಈ EV ನಗರವಾಸಿಗಳಿಗೆ ಹೇಳಿ ಮಾಡಿಸಿದಂತಿರಲಿದೆ.ಸ್ಥಳೀಯವಾಗಿ ಓಡಾಡುವ ವಾಹನ ಸವಾರರಿಗೆ ಉತ್ತಮ ಆಯ್ಕೆಯಾಗಬಹುದು. ರಾಯಲ್ ಎನ್‌ಫೀಲ್ಡ್‌ನ ಇತರ ಬೈಕ್‌ಗಳಿಗೆ ಹೋಲಿಸಿದರೆ ಈ ಮೋಟಾರ್‌ಸೈಕಲ್‌ನ ನೋಟವು ವಿಭಿನ್ನವಾಗಿದೆ. ರಾಯಲ್ ಎನ್‌ಫೀಲ್ಡ್‌ನ ಈ ಎಲೆಕ್ಟ್ರಿಕ್ ಬೈಕ್‌ನ ವ್ಯಾಪ್ತಿಯು 100 ರಿಂದ 160 ಕಿಲೋಮೀಟರ್‌ಗಳ ನಡುವೆ ಇರಬಹುದು ಎಂದು ಊಹಿಸಲಾಗಿದೆ.
ಇವಿ ರಾಯಲ್ ಎನ್‌ಫೀಲ್ಡ್ ಬೆಲೆ ಎಷ್ಟು?
ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್‌ನ ಪವರ್‌ಟ್ರೇನ್ ಮತ್ತು ಅದರ ಮಾಡೆಲ್ ವಾಹನದ ಬೆಲೆಯನ್ನು ಹೆಚ್ಚಿಸಬಹುದು. ಈ EV ಯ ಬೆಲೆ ಸಾಂಪ್ರದಾಯಿಕ ಬೈಕ್‌ಗಿಂತ ಹೆಚ್ಚಿರಬಹುದು. ಆದರೆ ಮೊದಲಿನಂತಿರದೆ ಇವಿ ಬೈಕ್‌ನಲ್ಲಿ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ, ಇದು ರೈಡಿಂಗ್ ಮೋಡ್‌ಗಳ ಜೊತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಒಳಗೊಂಡಿರುತ್ತದೆ. ಈ ಮೋಟಾರ್‌ಸೈಕಲ್‌ನಲ್ಲಿ ಅಲಾಯ್ ಚಕ್ರಗಳ ಜೊತೆಗೆ ಡಿಸ್ಕ್ ಬ್ರೇಕ್‌ಗಳನ್ನು ಸಹ ಕಾಣಬಹುದು.
ಮೊದಲನೆಯದಾಗಿ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದ ನಂತರ, ರಾಯಲ್ ಎನ್‌ಫೀಲ್ಡ್ ಇನ್ನಷ್ಟು ಹೆಚ್ಚಿನ ಮಾದರಿಗಳನ್ನು ಪರಿಚಯಿಸಬಹುದು. ಇದರ ನಂತರ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ನ ಎಲೆಕ್ಟ್ರಿಕ್ ಮಾದರಿಯನ್ನು ತರಬಹುದು ಎಂದು ನಿರೀಕ್ಷಿಸಲಾಗಿದೆ..