ವ್ಯಾಟ್ಸಾಪ್‌ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದ್ದಾರ? ತಿಳಿದುಕೊಳ್ಳಲು ಇಲ್ಲಿದೆ ಸುಲಭ ಟಿಪ್ಸ್!

First Published | Sep 2, 2024, 4:35 PM IST

ವ್ಯಾಟ್ಸಾಪ್‌ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದ್ದಾರಾ ಅನ್ನೋದು ತಿಳಿದುಕೊಳ್ಳುವುದು ಹೇಗೆ? ವ್ಯಾಟ್ಸಾಪ್ ನೀಡವ ಕೆಲ ಸಿಗ್ನಲ್, ಸೂಚನೆಯಲ್ಲಿ ಬ್ಲಾಕ್ ಮಾಹಿತಿ ತಿಳಿಯಲಿದೆ.

ಸತತ ಫಾರ್ವರ್ಡ್ ಮೆಸೇಜ್, ಜಾಹೀರಾತು, ಕಳುಹಿಸುವವರಿಗೆ ಇಷ್ಟವಿಲ್ಲದ ಸಂದೇಶ, ಸಿದ್ಧಾಂತಗಳಿಂದ ಹಲವು ಬಾರಿ ಸದ್ದಿಲ್ಲದೆ ಕೆಲವರನ್ನು ವ್ಯಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಲಾಗುತ್ತದೆ. ಕೆಲವೊಮ್ಮೆ ಸಿಟ್ಟಿನಲ್ಲಿ ಕೆಲವರ ನಂಬರ್‌ನ್ನು ವ್ಯಾಟ್ಸಾಪ್‌ನಲ್ಲಿ ಬ್ಲಾಕ್ ಮಾಡುತ್ತಾರೆ. ಬ್ಲಾಕ್ ಆಗಿದೆ ಎಂದು ವ್ಯಾಟ್ಸಾಪ್ ನೋಟಿಫಿಕೇಶನ್ ಕಳುಹಿಸುವುದಿಲ್ಲ. 

ವ್ಯಾಟ್ಸಾಪ್‌ನಲ್ಲಿ ಯಾರು ಬ್ಲಾಕ್ ಮಾಡಿದ್ದಾರೆ ಅನ್ನೋದು ತಿಳಿದುಕೊಳ್ಳಲು ಕೆಲ ವಿಧಾನಗಳಿವೆ. ವ್ಯಾಟ್ಸಾಪ್ ನೀಡುವ ಕೆಲ ಸಿಗ್ನಲ್ ಮೂಲಕ ಬ್ಲಾಕ್ ಮಾಡಿರುವ ಸಾಧ್ಯತೆಯನ್ನು ತಿಳಿಸುತ್ತಿದೆ. ಇದರಿಂದ ಬಳಕೆದಾರರು ಬಹುತೇಕ ನಂಬರ್ ಬ್ಲಾಕ್ ಮಾಹಿತಿ ಪಡೆಯಬಹುದು. 

Tap to resize

ಪ್ರೊಫೈಲ್ ಫೋಟೋ: ನೀವು ಸೇವ್ ಮಾಡಿರುವ ಕಾಂಟಾಕ್ಟ್‌ನಲ್ಲಿ ಅವರ ವ್ಯಾಟ್ಸಾಪ್ ಪ್ರೊಫೈಲ್ ಅಪ್‌ಡೇಟ್ ಆಗದಿದ್ದರೆ ನಿಮ್ಮ ನಂಬರ್ ಬ್ಲಾಕ್ ಮಾಡಿರುವ ಸಾಧ್ಯತೆ ಇದೆ. ಇನ್ನು ಆನ್‌ಲೈನ್ ಸ್ಟೇಟಸ್ ಕೂಡ ಕೆಲ ಸೂಚನೆ ನೀಡುತ್ತದೆ. ಹಲವು ದಿನಗಳಿಂದ ನಿಮಗೆ ವ್ಯಕ್ತಿಯ ಸ್ಟೇಟಸ್ ಅಪ್‌ಡೇಟ್ ಕಾಣದಿದ್ದರೆ, ಅಥವಾ ಸ್ಟೇಟಸ್ ಕಾಣದಿದ್ದರೆ, ಲಾಸ್ಟ್ ಸೀನ್ ಕೂಡ ಕಾಣದಿದ್ದರೆ ನಿಮ್ಮ ನಂಬರ್ ಬ್ಲಾಕ್ ಮಾಡಿರುವ ಸಾಧ್ಯತೆ ಇದೆ.

ವ್ಯಾಟ್ಸಾಪ್ ಮೂಲಕ ನಿಮಗೆ ವ್ಯಕ್ತಿಗೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಬೇರೆ ನಂಬರ್‌ಗಳಿಗೆ ಕರೆ ಮಾಡಲು ಯಾವುದೇ ಸಮಸ್ಯೆ ಇಲ್ಲದಿದ್ದಾಗ, ಕೆಲ ಪ್ರಯತ್ನದ ಬಳಿಕವೂ ಕರೆ ಮಾಡಲು ಸಾಧ್ಯವಾಗಿಲ್ಲ ಎಂದಾದರೆ ಆತ ನಿನ್ಮ ನಂಬರ್ ಬ್ಲಾಕ್ ಮಾಡಿರುವ ಸಾಧ್ಯತೆ ಇದೆ. ಹಲವು ದಿನಗಳ ಪ್ರಯತ್ನದಲ್ಲಿ ವ್ಯಾಟ್ಸಾಪ್ ಕಾಲ್ ಕನೆಕ್ಟ್ ಆಗದೆ ಇದ್ದರೆ ನಂಬರ್ ಬ್ಲಾಕ್ ಆಗಿರುವ ಸಾಧ್ಯತೆಯನ್ನು ಹೇಳುತ್ತದೆ.
 

ವ್ಯಾಟ್ಸಾಪ್ ಗ್ರೂಪ್‌ನಲ್ಲಿ ನೀವು ಆಡ್ಮಿನ್ ಆಗಿದ್ದರೂ, ಕೆಲ ನಂಬರ್ ಗ್ರೂಪ್‌ಗೆ ಸೇರಿಸಲು ಸಾಧ್ಯವಾಗದಿದ್ದರೆ ಆತ ನಿಮ್ಮ ನಂಬರ್ ಬ್ಲಾಕ್ ಮಾಡಿರುವ ಸಾಧ್ಯತೆ ಇದೆ. ಗ್ರೂಪ್‌ಗೆ ಸೇರಿಸಿಕೊಳ್ಳುವಾಗ ನಂಬರ್ ಡಿಸೇಬಲ್ ಆಗಿದ್ದರೂ ಬ್ಲಾಕ್ ಮಾಡಿರುವ ಸಾಧ್ಯತೆಗಳಿವೆ.

ಇದು ವ್ಯಾಟ್ಸಾಪ್ ನೀಡುವ ಕೆಲ ಸೂಚನೆಗಳು ಮಾತ್ರ. ಈ ಸೂಚನೆಗಳ ಮೂಲಕ ನಂಬರ್ ಬ್ಲಾಕ್ ಮಾಹಿತಿ ಭಾಗಶಃ ತಿಳಿಯಲು ಸಾಧ್ಯವಿದೆ. ಆದರೆ ಇದು ನಿಖರ ಮಾಹಿತಿಯಲ್ಲ. ವ್ಯಾಟ್ಸಾಪ್ ಗೌಪ್ಯ ಡೇಟಾ ನೀತಿ ಪ್ರಕಾರ, ಯಾರು ನಂಬರ್ ಬ್ಲಾಕ್ ಮಾಡಿದ್ದಾರೆ ಅನ್ನೋ ಯಾವುದೇ ಮಾಹಿತಿಯನ್ನು ವ್ಯಾಟ್ಸಾಪ್ ನೀಡುವುದಿಲ್ಲ.

Latest Videos

click me!