ಫೋಟೋಗಳನ್ನ ಕಂಪ್ರೆಸ್ ಮಾಡಿ:
* ಇದಕ್ಕಾಗಿ ಮೊದಲಿಗೆ ಬ್ರೌಸರ್‌ನಲ್ಲಿ photos.google.com ಗೆ ಹೋಗಿ.
* ನಂತರ ಎಡಭಾಗದಲ್ಲಿರೋ ತ್ರಿ ಡಾಟ್ಸ್‌ನ್ನ ಕ್ಲಿಕ್ ಮಾಡಿ ಕೊನೆಯಲ್ಲಿ ಕಾಣುವ ಸ್ಟೋರೇಜ್ ಆಪ್ಷನ್ ಸೆಲೆಕ್ಟ್ ಮಾಡಿ.
* ಆಮೇಲೆ ಸ್ವಲ್ಪ ಕೆಳಗೆ ಸ್ಕ್ರೋಲ್ ಮಾಡಿದ್ರೆ ರಿಕವರಿ ಸ್ಟೋರೇಜ್ ಅಂತ ಆಪ್ಷನ್ ಕಾಣುತ್ತೆ. ಅದರ ಕೆಳಗಡೆ ಕಾಣುವ ಲರ್ನ್ ಮೋರ್ ಆಪ್ಷನ್ ಸೆಲೆಕ್ಟ್ ಮಾಡಿ.
* ತಕ್ಷಣ ರಿಕವರಿ ಸ್ಟೋರೇಜ್ ಪೇಜ್ ಓಪನ್ ಆಗುತ್ತೆ. ಇದರಲ್ಲಿ ಕೊನೆಯಲ್ಲಿ ಕಾಣುವ 'ಐ ಅಂಡರ್‌ಸ್ಟಾಂಡ್' ಅನ್ನೋ ಟಿಕ್ ಬಾಕ್ಸ್ ಕ್ಲಿಕ್ ಮಾಡಿ 'ಕಂಪ್ರೆಸ್ ಎಕ್ಸಿಸ್ಟಿಂಗ್ ಫೋಟೋಸ್ ಅಂಡ್ ವೀಡಿಯೋಸ್' ಮೇಲೆ ಕ್ಲಿಕ್ ಮಾಡಿ.
* ಇದರಿಂದ ಗೂಗಲ್ ಫೋಟೋಸ್‌ನಲ್ಲಿರೋ ಫೋಟೋಗಳು, ವೀಡಿಯೋಗಳು ಕಂಪ್ರೆಸ್ ಆಗಿ ಮೆಮೊರಿ ಜಾಸ್ತಿಯಾಗುತ್ತೆ.