ನಂಬರ್ ಸೇವ್ ಮಾಡದೆ ವ್ಯಾಟ್ಸಾಪ್ ಮೂಲಕ ಫೋಟೋ ಸೆಂಡ್ ಮಾಡುವುದು ಹೇಗೆ?

Published : Feb 23, 2025, 02:58 PM ISTUpdated : Feb 23, 2025, 03:06 PM IST

ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ದೇ ಇರುವವರಿಗೆ ವಾಟ್ಸಾಪ್‌ನಲ್ಲಿ ಫೋಟೋ, ವಿಡಿಯೋ, ಮೆಸೇಜ್ ಕಳಿಸೋದು ಹೇಗೆ ಗೊತ್ತಾ? ಅವರ ನಂಬರ್ ಸೇವ್ ಮಾಡ್ಕೊಳ್ಳೋ ಅವಶ್ಯಕತೆ ಇಲ್ಲ್ದೆ ಹೇಗೆ ಕಳಿಸೋದು ಅಂತ ನೋಡೋಣ ಬನ್ನಿ.

PREV
14
ನಂಬರ್ ಸೇವ್ ಮಾಡದೆ ವ್ಯಾಟ್ಸಾಪ್ ಮೂಲಕ ಫೋಟೋ ಸೆಂಡ್ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಇಲ್ಲಿಯವರೆಗೆ ಫೋಟೋ, ವಿಡಿಯೋ, ಇತರ ಮಾಹಿತಿನ ಕೇವಲ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇರೋರಿಗೆ ಮಾತ್ರ ಕಳಿಸೋಕೆ ಆಗುತ್ತಿತ್ತು. ಒಂದು ವೇಳೆ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ದೇ ಇರೋರಿಗೆ ಕಳಿಸಬೇಕು ಅಂದ್ರೆ ಕಡ್ಡಾಯವಾಗಿ ಅವರ ನಂಬರ್ ಸೇವ್ ಮಾಡ್ಕೋಬೇಕಿತ್ತು. ಆಮೇಲೆ ಮಾತ್ರ ಆ ನಂಬರ್‌ಗೆ ವಾಟ್ಸಾಪ್ ಓಪನ್ ಆಗುತ್ತಿತ್ತು.

ಆದರೆ ನಂಬರ್ ಸೇವ್ ಮಾಡದೆಯೂ ಫೋಟೋ, ವಿಡಿಯೋ, ಸಂದೇಶ ಕಳುಹಿಸಲು ಸಾಧ್ಯವಿದೆ.  ಸರಳ ವಿಧಾನದ ಮೂಲಕ ಈ ರೀತಿ ಸಂದೇಶ ಕಳುಹಿಸಬಹುದು. 

24

ಸಾಮಾನ್ಯವಾಗಿ ಯಾವುದಾದರೂ ಮಾಹಿತಿನ ಬೇರೆಯವರಿಗೆ ಶೇರ್ ಮಾಡೋಕೆ ಅಂತ ಸ್ಪೆಷಲ್ ಆಪ್ಸ್ ಇದಾವೆ. ಅಥವಾ ಶೇರ್ ಆಪ್ಷನ್ ಉಪಯೋಗಿಸಿ ಫೋಟೋ, ವಿಡಿಯೋ ಕಳಿಸ್ತೀವಿ ಅಲ್ವಾ.. ಅದೇ ರೀತಿ ಯಾವುದಾದರೂ ಜೆರಾಕ್ಸ್ ಅಂಗಡಿಗೆ ಹೋದಾಗ ವಾಟ್ಸಾಪ್‌ನಲ್ಲಿ ಇರೋ ಡಾಕ್ಯುಮೆಂಟ್ಸ್, ಫೋಟೋಗಳನ್ನ ಅಂಗಡಿ ಮಾಲೀಕರಿಗೆ ಶೇರ್ ಮಾಡಿದ್ರೆ ಅವರು ಜೆರಾಕ್ಸ್ ತೆಗೆದು ಕೊಡ್ತಾರೆ ಅಲ್ವಾ.. ಹಾಗಾದ್ರೆ ಅಂಗಡಿ ಮಾಲೀಕರ ನಂಬರ್ ಸೇವ್ ಮಾಡ್ಕೊಂಡ್ರೆ ಮಾತ್ರ ಡಾಕ್ಯುಮೆಂಟ್ಸ್, ಫೋಟೋ ಕಳಿಸೋಕೆ ಸಾಧ್ಯವಾಗುತ್ತೆ.
 

34

ಆದರೂ ಒಂದು ಸಾರಿ ಮಾತ್ರ ಬೇಕಾಗಿರೋ ವ್ಯಕ್ತಿಗಳ ನಂಬರ್ ಸೇವ್ ಮಾಡ್ಕೊಳ್ಳೋದ್ರಿಂದ ಆಮೇಲೆ ಉಪಯೋಗ ಇರೋದಿಲ್ಲ. ನಂಬರ್ ಸೇವ್ ಮಾಡ್ಕೊಳ್ತಾ ಹೋದ್ರೆ ಕಾಂಟ್ಯಾಕ್ಟ್ ಲಿಸ್ಟ್ ಕೂಡ ಬೆಳೆದುಬಿಡುತ್ತೆ. ಈ ರೀತಿ ನಂಬರ್ ಸೇವ್ ಮಾಡೋದು ಬೇಡ ಡೈರೆಕ್ಟ್ ಆಗಿ ನಂಬರ್ ಟೈಪ್ ಮಾಡಿ ಮಾಹಿತಿನ ಕಳಿಸಬಹುದು. ಆ ಪ್ರಾಸೆಸ್ ಬಗ್ಗೆ ಕ್ಲಿಯರ್ ಆಗಿ ಇಲ್ಲಿ ತಿಳ್ಕೊಳ್ಳೋಣ ಬನ್ನಿ.
 

44

ವಾಟ್ಸಾಪ್ ಓಪನ್ ಮಾಡಿ.
ಕೆಳಗಡೆ ರೈಟ್ ಸೈಡ್ ಕೊನೆಯಲ್ಲಿ "ಕಾಲ್" ಆಪ್ಷನ್ ಇರುತ್ತೆ. ಅದರ ಮೇಲೆ ಕ್ಲಿಕ್ ಮಾಡಿ.
ಮತ್ತೆ ಕೆಳಗಡೆ ರೈಟ್ ಸೈಡ್ "ಕಾಲ್+" ಸಿಂಬಲ್ ಕಾಣಿಸುತ್ತೆ. ಅದನ್ನ ಕ್ಲಿಕ್ ಮಾಡಿ.
ಅಲ್ಲಿ ಫಸ್ಟ್ ಕಾಣಿಸೋ ಮೂರು ಆಪ್ಷನ್ಸ್‌ನಲ್ಲಿ "ಕಾಲ್ ಎ ನಂಬರ್" ಮೇಲೆ ಕ್ಲಿಕ್ ಮಾಡಿ.
ಈಗ ಡಯಲ್ ಪ್ಯಾಡ್ ಓಪನ್ ಆಗುತ್ತೆ.
ಫೋನ್ ನಂಬರ್ ಎಂಟರ್ ಮಾಡಿ.
ಈಗ ಕಾಲ್ ಮಾಡಬೇಕು ಅಂದ್ರೆ ಕೆಳಗಡೆ "ಕಾಲ್" ಸಿಂಬಲ್ ಮೇಲೆ ಕ್ಲಿಕ್ ಮಾಡಿ ಕಾಲ್ ಮಾಡಬಹುದು.
ಒಂದು ವೇಳೆ ಅವರಿಗೆ ಮೆಸೇಜ್, ಫೋಟೋ, ವಿಡಿಯೋ, ಇತರ ಡೇಟಾ ಏನಾದರೂ ಕಳಿಸಬೇಕು ಅಂದ್ರೆ ಕೆಳಗಡೆ ಕಾಲ್ ಸಿಂಬಲ್ ಪಕ್ಕದಲ್ಲೇ ಮೆಸೇಜ್ ಸಿಂಬಲ್ ಕಾಣಿಸುತ್ತೆ. ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ಅವಶ್ಯಕತೆ ಇರೋ ಮಾಹಿತಿನ ಕಳಿಸಿ.

Read more Photos on
click me!

Recommended Stories