ಜಗತ್ತಿನ ಟಾಪ್‌ 10 Instagram ಫಾಲೋವರ್‌ಗಳನ್ನು ಹೊಂದಿರುವ ಸೆಲೆಬ್ರಿಟಿಗಳು ಇವರೇ..

First Published | Nov 22, 2022, 2:16 PM IST

ಪ್ರಖ್ಯಾತ ಫುಟ್ಬಾಲ್‌ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಇತ್ತೀಚೆಗಷ್ಟೇ 50 ಕೋಟಿ ಇನ್ಸ್ಟಾಗ್ರಾಮ್‌ ಫಾಲೋವರ್‌ಗಳನ್ನು ಹೊಂದಿದ ಜಗತ್ತಿನ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಹೌದು, 50 ಕೋಟಿ ಜನ ಇವರನ್ನು ಫಾಲೋ ಮಾಡುತ್ತಾರೆ ಅಂದರೆ ಸುಮ್ನೆಯೇ. ಇದೇ ರೀತಿ, ಜಗತ್ತಿನ ಇನ್ಸ್ಟಾಗ್ರಾಮ್ ಬಳಕೆದಾರರಲ್ಲಿ ಟಾಪ್‌ 10 ಫಾಲೋವರ್ಸ್‌ಗಳನ್ನು ಹೊಂದಿರುವವರ ವಿವರ ಇಲ್ಲಿದೆ ನೋಡಿ. ಅಂದ ಹಾಗೆ, ರೊನಾಲ್ಡೋ ಇನ್ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ ಮೊದಲ ವ್ಯಕ್ತಿ ಎನಿಸಿದರೂ, ಈ ಪಟ್ಟಿಯಲ್ಲಿ ಇವರಿಗೆ ಎರಡನೇ ಸ್ಥಾನ ದೊರಕಿದೆ. ಏಕೆಂದರೆ, ಕ್ರಿಶ್ಚಿಯಾನೋ ರೊನಾಲ್ಡೋ ಅವರಿಗಿಂತ ಇನ್ಸ್ಟಾಗ್ರಾಮ್‌ನ ಅಧಿಕೃತ ಖಾತೆಯನ್ನು ಹೆಚ್ಚು ಜನ ಫಾಲೋ ಮಾಡ್ತಾರೆ. ಆದರೆ, ಇದು ವೈಯಕ್ತಿಕ ಬಳಕೆದಾರರ ಸಾಲಿಗೆ ಸೇರುವುದಿಲ್ಲವಾದ್ದರಿಂದ ಹೆಚ್ಚು ಫಾಲೋವರ್‌ಗಳನ್ನು ಫುಟ್ಬಾಲ್‌ ಆಟಗಾರ ಹೊಂದಿದ್ದಾರೆ. ಜಗತ್ತಿನ ಟಾಪ್‌ 10 ಇನ್ಸಾಗ್ರಾಮ್‌ ಫಾಲೋವರ್ಸ್‌ಗಳ ವಿವರ ಹೀಗಿದೆ ನೋಡಿ..

ಇನ್ಸ್ಟಾಗ್ರಾಮ್‌ (Instagram)

569 ಮಿಲಿಯನ್‌ ಅಂದರೆ 56.9 ಕೋಟಿ ಫಾಲೋವರ್ಸ್‌ ಹೊಂದಿರುವ ಇನ್ಸ್ಟಾಗ್ರಾಮ್‌ ಜಗತ್ತಿನ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಅಕೌಂಟ್‌ ಆಗಿದೆ. ಈವರೆಗೆ 7 ಸಾವಿರಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಈ ಖಾತೆಯಲ್ಲಿ ಮಾಡಲಾಗಿದ್ದು, ಇದಕ್ಕೆ ಸಿಕ್ಕಾಪಟ್ಟೆ ಲೈಕ್‌ಗಳು ಸಿಗುತ್ತದೆ. 

ಕ್ರಿಶ್ಚಿಯಾನೋ ರೊನಾಲ್ಡೋ (Cristiano Ronaldo)

500 ಮಿಲಿಯನ್ ಅಂದರೆ 50 ಕೋಟಿ ಫಾಲೋವರ್‌ಗಳನ್ನು ಇತ್ತೀಚೆಗೆ ಪಡೆದುಕೊಂಡ ಪೋರ್ಚುಗೀಸ್‌ ಮೂಲದ ಫುಟ್ಬಾಲ್‌ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ, ಇನ್ಸ್ಟಾಗ್ರಾಮ್‌ನಲ್ಲಿ ಜಗತ್ತಿನಲ್ಲೇ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ. 

Tap to resize

ಲಿಯೋನೆಲ್‌ ಮೆಸ್ಸಿ ( Lionel Messi)

ಇನ್ನು, ಮತ್ತೊಬ್ಬ ಖ್ಯಾತ ಫುಟ್ಬಾಲ್‌ ಆಟಗಾರ, ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ 2ನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇವರು 377 ಮಿಲಿಯನ್‌ ಅಂದರೆ 37.7 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಕೈಲಿ ಜೆನ್ನರ್ (Kylie Jenner)

ಖ್ಯಾತ ಮಾಡೆಲ್‌ ಹಾಗೂ ಕೈಲೀ ಕಾಸ್ಮೆಟಿಕ್ಸ್‌, ಕೈಲೀ ಸ್ಕಿನ್‌, ಕೈಲೀ ಸ್ವಿಮ್, ಕೈಲೀ ಬೇಬಿ - ಹೀಗೆ ಹಲವು ಕಂಪನಿಗಳ ಸ್ಥಾಪಕಿಯೂ ಆಗಿರುವ ಕೈಲೀ ಜೆನ್ನರ್‌ ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಪೈಕಿ ಟಾಪ್ 4 ಸ್ಥಾನದಲ್ಲಿದ್ದಾರೆ. ಅಲ್ಲದೆ,  ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಮೊದಲ ಮಹಿಳೆಯಾಗಿದ್ದು, ಇವರು ಕಾರ್ದಾಶಿಯನ್‌ ಕುಟುಂಬದ ಸದಸ್ಯರೂ ಹೌದು. 

ಸೆಲೆನಾ ಗೋಮ್ಜ್‌ (Selena Gomez)

358 ಮಿಲಿಯನ್‌ ಅಂದರೆ 35.8 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ಸೆಲೆನಾ ಗೋಮ್ಸ್‌ ಖ್ಯಾತ ಗಾಯಕಿ / ಮ್ಯೂಸಿಷಿಯನ್. ಇವರು 5ನೇ ಸ್ಥಾನದಲ್ಲಿದ್ದಾರೆ.

ಡ್ವೇಯ್ಸ್‌ ಜಾನ್ಸನ್ (ದಿ ರಾಕ್‌) (Dwayne “The Rock” Johnson )


ದಿ ರಾಕ್‌ ಎಂದೇ ಖ್ಯಾತಿಗೊಳಗಾಗಿರುವ ಡ್ವೇಯ್ನ್‌ ಜಾನ್ಸನ್‌ 34.8 ಕೋಟಿ ಅಂದರೆ 348 ಕೋಟಿ ಫಾಲೋವರ್‌ಗಳನ್ನು ಹೊಮದಿದ್ದು, 6 ನೇ ಸ್ಥಾನ ಹೊಂದಿದ್ದಾರೆ. 

ಅರಿಯಾನಾ ಗ್ರಾಂಡೆ (Ariana Grande)

ಖ್ಯಾತ ಗಾಯಕಿ ಅರಿಯಾನಾ ಗ್ರಾಂಡೆ ಈ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದು 340 ಮಿಲಿಯನ್ ಅಂದರೆ 34 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ. 

ಕಿಮ್‌ ಕಾರ್ದಶಿಯನ್‌ (Kim Kardashian)

334 ಮಿಲಿಯನ್ ಅಂದರೆ 33.4 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ಕಿಮ್ ಕಾರ್ದಶಿಯನ್ ಈ ಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಇವರು ಅಮೆರಿಕದ ನಟಿ ಹಾಗೂ ಮಾಡೆಲ್‌ ಸಹ ಹೌದು.  

ಬಿಯಾನ್ಸ್ ನೋಲ್ಸ್‌ (Beyonce Knowles)

ಅಮೆರಿಕದ ಖ್ಯಾತ ಗಾಯಕಿ ಬಿಯಾನ್ಸ್‌ ನೋಲ್ಸ್‌ ಈ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದ್ದಾರೆ. ಇವರು 283 ಮಿಲಿಯನ್ (28.3 ಕೋಟಿ) ಫಾಲೋವರ್‌ಗಳನ್ನು ಪಡೆದ ಖ್ಯಾತಿ ಹೊಂದಿದ್ದಾರೆ. 

ಖ್ಲೋಯ್‌ ಕಾರ್ದಶಿಯನ್ (Khloe Kardashian)

ಕಾರ್ದಶಿಯನ್‌ ಕುಟುಂಬದ ಮತ್ತೊಬ್ಬರು ಕುಡಿಯಾದ ಖ್ಲೋಯ್‌ ಕಾರ್ದಶಿಯನ್ ಖ್ಯಾತ ಸೋಷಿಯಲ್ ಮೀಡಿಯಾ ಸ್ಟಾರ್ ಸಹ ಹೌದು. ಇವರು 280 ಮಿಲಿಯನ್ (28 ಕೋಟಿ) ಫಾಲೋವರ್‌ಗಳನ್ನು ಹೊಂದಿದ್ದಾರೆ. 
 

Latest Videos

click me!