ವಾಟ್ಸಪ್ ಗ್ರೂಪ್ ಮಾಡೋದು ತುಂಬಾ ಸುಲಭ. ಆದ್ರೆ ವಾಟ್ಸಪ್ ಗ್ರೂಪ್‌ಗಳಲ್ಲಿ ಕೆಲವೊಂದು ಕಾನೂನು ಬಾಹಿರ ಸಂದೇಶಗಳು ಬಂದ್ರೆ ಅದರ ಅಡ್ಮಿನ್ ಹೊಣೆಗಾರ ಎಂದು ಹೇಳಲಾಗುತ್ತದೆ. ಈ ಮಾತು ಎಷ್ಟು ಸತ್ಯ ಎಂಬುದರ ಮಾಹಿತಿ ಇಲ್ಲಿದೆ.
ವಾಟ್ಸಪ್ ಗ್ರೂಪ್‌ನಲ್ಲಿನ ಸದಸ್ಯರು ಹಾಕುವ ಯಾವುದೇ ಸಂದೇಶಗಳಿಗೆ ಅಡ್ಮಿನ್ ಹೊಣೆಗಾರರಾಗಲ್ಲ. ಆದರೆ ಆ ಸಂದೇಶಗಳನ್ನ ಒಪ್ಪಿ, ಅವುಗಳಿಗೆ ಪ್ರತಿಕ್ರಿಯೆ ನೀಡುವ ಅಡ್ಮಿನ್ ಹೊಣೆಗಾರನಾಗುತ್ತಾನೆ ಮತ್ತು ಶಿಕ್ಷೆಗೂ ಗುರಿಯಾಗುತ್ತಾನೆ.
ಕೇಂದ್ರ ಸರ್ಕಾರ 2020ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವಾಟ್ಸಪ್ ಗ್ರೂಪ್ ಅಡ್ಮಿನ್‌ಗಳನ್ನೇ ಹೊಣೆ ಮಾಡಲು ಅವಕಾಶ ನೀಡಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಪ್ರಕಾರ, ವಾಟ್ಸಪ್ ಗ್ರೂಪ್ ಅಡ್ಮಿನ್‌ಗಳನ್ನೇ 'ಮಧ್ಯಸ್ಥಿಕೆದಾರ' ಎಂದು ವ್ಯಾಖ್ಯಾನ ಮಾಡಿತ್ತು.
ಒಂದು ವೇಳೆ ವಾಟ್ಸಪ್ ಗ್ರೂಪ್ ಸದಸ್ಯರು, ಅವಹೇಳನಕಾರಿ ಸಂದೇಶ, ದ್ವೇಷ ಪ್ರಚೋಚನೆ, ದೇಶದ್ರೋಹ, ಅನುಮತಿ ಇಲ್ಲದ ವ್ಯಕ್ತಿಗಳ ಖಾಸಗಿ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಂಡ್ರೆ ಅಡ್ಮಿನ್ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿತ್ತು. ಈ ವ್ಯಾಖ್ಯಾನದ ಬಳಿಕ ದೇಶದ ಹಲವೆಡೆ ವಾಟ್ಸಪ್ ಅಡ್ಮಿನ್‌ಗಳ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು.
2020ರಲ್ಲಿ 'ಮ್ಯಾನುಯಲ್ ವರ್ಸಸ್ ಕೇರಳ ಸರ್ಕರ' ಪ್ರಕರಣ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಎಲ್ಲಾ ಸಂದೇಶಗಳಿಗೂ ವಾಟ್ಸಪ್ ಗ್ರೂಪ್ ಅಡ್ಮಿನ್‌ಗಳನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಸ್ವತಃ ಅಡ್ಮಿನ್ ಈ ರೀತಿಯ ಮೆಸೇಜ್ ಹಾಕಿದ್ರೆ ಅಥವಾ ಅವುಗಳಿಗೆ ಪ್ರತಿಕ್ರಿಯಿಸಿದ್ರೆ ಅಡ್ಮಿನ್ ಹೊಣೆಗಾರನಾಗುತ್ತಾನೆ ಎಂದು ನ್ಯಾಯಾಲಯ ಹೇಳಿದೆ.
ಯಾವ ಪ್ರಕರಣದಲ್ಲಿ ಅಡ್ಮಿನ್ ತಪ್ಪಿತಸ್ಥ?
*ಅವಹೇಳನಕಾರಿ ಸಂದೇಶ, ದ್ವೇಷ ಪ್ರಚೋಚನೆ, ದೇಶದ್ರೋಹ, ಅನುಮತಿ ಇಲ್ಲದ ವ್ಯಕ್ತಿಗಳ ಖಾಸಗಿ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಂಡ್ರೆ ಅಡ್ಮಿನ್ ಅವರಿಗೆ ಎಚ್ಚರಿಕೆ ನೀಡಬೇಕು.
*ಸದಸ್ಯರಿಗೆ ಪ್ರಚೋದನಕಾರಿ/ತಿರುಚಿದ ವಿಡಿಯೋ ಅಥವಾ ಫೋಟೋ ಹಾಕಲು ಸೂಚಿಸಿದರೆ ಅಡ್ಮಿನ್ ಹೊಣೆಗಾರನಾಗುತ್ತಾನೆ.
ಯಾವ ಪ್ರಕರಣದಲ್ಲಿ ಅಡ್ಮಿನ್ ತಪ್ಪಿತಸ್ಥ?
*ಆಕ್ಷೇಪಾರ್ಹ ಸಂದೇಶ ಅಥವಾ ವಿಡಿಯೋ ಅಥವಾ ಫೋಟೋಗಳಿಗೆ ಅಡ್ಮಿನ್ ಲೈಕ್ ಅಥವಾ ಅವುಗಳ ಪರವಾಗಿ ಪ್ರತಿಕ್ರಿಯಿಸಿದ್ರೆ ನೇರ ಹೊಣೆಗಾರನಾಗುತ್ತಾನೆ.
*ತಮ್ಮ ಗ್ರೂಪ್‌ನಲ್ಲಿ ಬಂದ ಸಂದೇಶಗಳ ವಿರುದ್ಧ ದೂರು ದಾಖಲಾದ ಬಳಿಕ ಅವುಗಳನ್ನು ಡಿಲೀಟ್ ಮಾಡಿದ್ರೆ ಮತ್ತು ಸದಸ್ಯರನ್ನು ರಿಮೂವ್ ಮಾಡಿದ್ರೆ ಅಥವಾ ಇಡೀ ಗ್ರೂಪ್ ಡಿಲೀಸ್ ಮಾಡಿದ್ರೆ ಅಡ್ಮಿನ್ ಜವಾಬ್ದಾರನಾಗುತ್ತಾನೆ.