ಇಂಟರ್‌ನೆಟ್‌ ಇಲ್ಲದೇ ಯುಟ್ಯೂಬ್‌ನಲ್ಲಿ ವಿಡಿಯೋ ನೋಡುವ ಸೂಪರ್‌ ಟ್ರಿಕ್ಸ್

Published : Feb 16, 2025, 04:27 PM ISTUpdated : Feb 16, 2025, 04:30 PM IST

ಇಂಟರ್ನೆಟ್ ಇಲ್ಲದೆ YouTube ವಿಡಿಯೋಗಳನ್ನು ವೀಕ್ಷಿಸಲು, YouTube ನ 'Offline Save' ಫೀಚರ್ ಬಳಸಿ ಅಥವಾ YouTube Premium ಮೂಲಕ ಡೌನ್‌ಲೋಡ್ ಮಾಡಿ. ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿ, ಗುಣಮಟ್ಟ ಆಯ್ಕೆ ಮಾಡಿ ಮತ್ತು ಲೈಬ್ರರಿಯಲ್ಲಿ ವೀಕ್ಷಿಸಿ.

PREV
16
ಇಂಟರ್‌ನೆಟ್‌ ಇಲ್ಲದೇ ಯುಟ್ಯೂಬ್‌ನಲ್ಲಿ ವಿಡಿಯೋ ನೋಡುವ ಸೂಪರ್‌ ಟ್ರಿಕ್ಸ್

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲರ ಕೈಯಲ್ಲಿಯೂ ಮೊಬೈಲ್ ಇದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯುಟ್ಯೂಬ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ವೇದಿಕೆಗಳಿವೆ.  ಆದ್ರೆ ಈ ಎಲ್ಲಾ ಪ್ಲಾಟ್‌ಫಾರಂನಲ್ಲಿ ವಿಡಿಯೋ ನೋಡಬೇಕಾದ್ರೆ ಇಂಟರ್‌ನೆಟ್ ಇರೋದು ಕಡ್ಡಾಯ.

26

ಇಂಟರ್‌ನೆಟ್ ಸ್ಪೀಡ್ ಸ್ವಲ್ಪ ಕಡಿಮೆಯಾದ್ರೂ ವಿಡಿಯೋ ಲೋಡ್ ಆಗಲ್ಲ. ಇನ್ನು ಹಲವು ಬಾರಿ ಪ್ರಯಾಣ ಮಾಡುವ ಸಂದರ್ಭದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಯಾವುದೇ ವಿಡಿಯೋ ಸ್ಟ್ರೀಮ್ ಆಗಲ್ಲ. ಆದ್ರೆ ಬಹುತೇಕರಿಗೆ ಇಂಟರ್‌ನೆಟ್‌ ಇಲ್ಲದೇ ಯುಟ್ಯೂಬ್‌ನಲ್ಲಿ ವಿಡಿಯೋ ನೋಡಬಹುದು ಎಂಬ ವಿಷಯ ಬಹುತೇಕರಿಗೆ ಗೊತ್ತಿಲ್ಲ. ಈ ಲೇಖನದಲ್ಲಿ ಇಂಟರ್‌ನೆಟ್ ಇಲ್ಲದೇ ವಿಡಿಯೋ ನೋಡುವ ಸೂಪರ್ ಟ್ರಿಕ್ಸ್ ಇಲ್ಲಿದೆ.

36

ಇಂಟರ್‌ನೆಟ್ ಇಲ್ಲದೇ ಯುಟ್ಯೂಬ್  ವಿಡಿಯೋಗಳನ್ನು ವೀಕ್ಷಿಸಸಲು ಕೆಲವು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ನೀವು ಯುಟ್ಯೂಬ್‌ನಲ್ಲಿ "Offline Save" ಫೀಚರ್ ಬಳಸಬಹುದು. ಯುಟ್ಯೂಬ್ ತನ್ನ ಅಫಿಷಿಯಲ್ ಅಪ್ಲಿಕೇಶನ್‌ನಲ್ಲಿ ವಿಡಿಯೋ ಡೌನ್‌ಲೋಡ್ ಮಾಡುವ ಆಯ್ಕೆ ನೀಡಲಾಗಿದೆ. ಇಲ್ಲಿ ನೀವು ವಿಡಿಯೋ ಡೌನ್‌ಲೋಡ್ ಮಾಡಿಕೊಂಡಿದ್ರೆ ಇಂಟರ್‌ನೆಟ್ ಇಲ್ಲದಿರೋ ಸಂದರ್ಭದಲ್ಲಿಯೂ ವಿಡಿಯೋಗಳನ್ನು ನೋಡಬಹುದು. 

46

ಹೇಗೆ ಡೌನ್‌ಲೋಡ್ ಮಾಡೋದು?
ಇದಕ್ಕಾಗಿ ನೀವು YouTube ಅಪ್ಲಿಕೇಶನ್ ಓಪನ್ ಮಾಡಿ. ಇಲ್ಲಿ ನಿಮಗೆ ಬೇಕಾದ ವಿಡಿಯೋ ಸರ್ಚ್ ಮಾಡಿ. ವಿಡಿಯೋ ಪ್ಲೇ ಮಾಡಿದಾಗ ಕೆಳಗಡೆ ನೀಡಲಾಗಿರುವ ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಬೇಕಾದ ಕ್ವಾಲಿಟಿಯ ವಿಡಿಯೋ  ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ  ವಿಡಿಯೋ ಲ್ರೈಬ್ರರಿಯಲ್ಲಿ ಸೇವ್ ಆಗಿರುತ್ತದೆ. ಲೈಬ್ರರಿಗೆ ಹೋಗಿ ನಿಮ್ಮಿಷ್ಟದ  ವಿಡಿಯೋ ವೀಕ್ಷಿಸಿ.

56

ನೀವು ಯುಟ್ಯೂಬ್‌ನಲ್ಲಿ ಪ್ರೀಮಿಯಂ ಬಳಕೆದಾರರಾಗಿದ್ದರೆ ಜಾಹೀರಾತು-ಮುಕ್ತ ವೀಡಿಯೊ ಸ್ಟ್ರೀಮಿಂಗ್ ಮತ್ತು ಆಫ್‌ಲೈನ್ ಡೌನ್‌ಲೋಡ್‌ಗಳ ಆಯ್ಕೆ ಲಭ್ಯವಾಗುತ್ತದೆ. ಪ್ರೀಮಿಯಂ ಬಳಕೆದಾರರು ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು. 

66

ನೀವು ಬೇರೆ ವೆಬ್‌ಸೈಟ್ ಅಥವಾ ಪ್ಲಾಟ್‌ಫಾರಂ ಮೂಲಕ ಯುಟ್ಯೂಬ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡಕೊಳ್ಳಬಹುದು. ಆದರೆ ಇದು YouTube ನೀತಿಗೆ ವಿರುದ್ಧವಾಗಿದೆ ಮತ್ತು ನಿಮ್ಮ ಖಾತೆಯನ್ನು ನಿರ್ಬಂಧಿಸಬಹುದು. ಸ್ಮಾಲ್ ಕಂಟೆಂಟ್ ವಿಡಿಯೋಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ನೀವು ಬಳಸಬಹುದು.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories