ವ್ಯಾಟ್ಸಾಪ್ ವೆಬ್ ಬಳಕೆದಾರರು ಇದೀಗ ಆ್ಯಪ್ ಡೌನ್ಲೋಡ್ ಮಾಡಬೇಕಾದ ಅಗತ್ಯವಿಲ್ಲ. ಇದೀಗ ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಬಂಪರ್ ಫೀಚರ್ ನೀಡಲಾಗಿದೆ. ಹೊಸದಾಗಿ ಪರಿಚಯಿಸಲಾದ ಫೀಚರ್ ಯಾವುದು?
ಮೆಟಾ ಮಾಲೀಕತ್ವದ ವ್ಯಾಟ್ಸಾಪ್ ವಿಶ್ವದ ಅತೀ ದೊಡ್ಡ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿ ಹೊರಹೊಮ್ಮಿದೆ. ವಿಶೇಷ ಅಂದರೆ ವ್ಯಾಟ್ಸಾಪ್ ಕೇವಲ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿ ಉಳಿದಿಲ್ಲ. ವಿಡಿಯೋ, ಆಡಿಯೋ ಕಾಲ್, ಫೈಲ್ ಟ್ರಾನ್ಸ್‌ಫರ್ ಸೇರಿದಂತೆ ಹತ್ತು ಹಲವು ಫೀಚರ್ ಪ್ರತಿ ದಿನ ಬಳೆಕೆಯಾಗುತ್ತಿದೆ. ಇದೀಗ ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಬಂಪರ್ ಫೀಚರ್ ನೀಡಲಾಗಿದೆ.
26
ವ್ಯಾಟ್ಸಾಪ್ ವೆಬ್‌ನಲ್ಲಿ ಗ್ರೂಪ್ ವಿಡಿಯೋ ಕಾಲ್
ವ್ಯಾಟ್ಸಾಪ್ ವೆಬ್ ಬಳಕೆದಾರರು ಡೆಸ್ಕ್‌ಟಾಪ್ ಆ್ಯಪ್ ಡೌನ್‌ಲೋಡ್ ಮಾಡದೇ ನೇರವಾಗಿ ವೆಬ್ ಬ್ರೌಸರ್ ಮೂಲಕ ಗ್ರೂಪ್ ವಿಡಿಯೋ ಕಾಲ್ ಹಾಗೂ ವಾಯ್ಸ್ ಕಾಲ್ ಮಾಡುವ ಫೀಚರ್ ನೀಡಲಾಗಿದೆ. ಮೊಬೈಲ್ ಆ್ಯಪ್, ಡೆಸ್ಕ್‌ಟಾಪ್ ಆ್ಯಪ್‌ಗೆ ಸೀಮಿತವಾಗಿದ್ದ ಈ ಫೀಚರ್ ಇದೀಗ ವ್ಯಾಟ್ಸಾಪ್ ವೆಬ್ ಬ್ರೌಸರ್ ಮಾಡೋ ಬಳಕೆದಾರರಿಗೂ ಲಭ್ಯವಾಗಿದೆ.
36
ಏಕಕಾಲಕ್ಕೆ 32 ಮಂದಿ ಜೊತೆ ಗ್ರೂಪ್ ಕಾಲ್
ವ್ಯಾಟ್ಸಾಪ್ ವೆಬ್ ಹೊಸ ಫೀಚರ್‌ನ ವಿಡಿಯೋ ಹಾಗೂ ವಾಯ್ಸ್ ಗ್ರೂಪ್ ಕಾಲ್‌ನಲ್ಲಿ ಗರಿಷ್ಠ 32 ಮಂದಿ ಸೇರಿಕೊಳ್ಳಬಹುದು. ಏಕಕಾಲಕ್ಕೆ 32 ಮಂದಿ ಗ್ರೂಪ್ ವಿಡಿಯೋ ಅಥವಾ ವಾಯ್ಸ್ ಕಾಲ್ ಮೂಲಕ ಮಾತನಾಡಲು ಸಾಧ್ಯವಿದೆ. ಇಷ್ಟೇ ಅಲ್ಲ ಮೀಟಿಂಗ್ ಮಾಡುತ್ತಿದ್ದರೆ ಸ್ಕ್ರೀನ್ ಶೇರಿಂಗ್ ಆಯ್ಕೆಯನ್ನು ನೀಡಲಾಗಿದೆ. ಇದರಿಂದ ಪ್ರಸೆಂಟೇಶನ್ ಸೇರಿದಂತೆ ಮೀಟಿಂಗ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.
ಜೂಮ್, ಗೂಗಲ್ ಮೀಟ್‌ಗಳಲ್ಲಿ ಆನ್‌ಲೈನ್ ಅಥವಾ ವರ್ಚುವಲ್ ಮೀಟಿಂಗ್ ಮಾಡಲು ಮೊದಲೇ ಲಿಂಕ್ ಕ್ರಿಯೇಟ್ ಮಾಡಿ ಸಿಬ್ಬಂದಿಗಳಿಗೆ, ಉದ್ಯೋಗಿಗಳಿಗೆ ಕಳುಹಿಸಲಾಗುತ್ತದೆ. ಇದೇ ರೀತೀಯ ಫೀಚರ್ಸ್ ಇದೀಗ ವ್ಯಾಟ್ಸಾಪ್ ವೆಬ್‌ನಲ್ಲೂ ನೀಡಲಾಗುತ್ತಿದೆ. ಒಮ್ಮೆ ಕ್ರಿಯೇಟ್ ಮಾಡಿದ ಲಿಂಕ್ 30 ದಿನ ಸಕ್ರಿಯವಾಗಿರುತ್ತದೆ.
56
ಆಯ್ದ ಸದಸ್ಯರಿಗೆ ಮಾತ್ರ ಕರೆ ಫೀಚರ್
ಗ್ರೂಪ್‌ನಲ್ಲಿ ಹಲವು ಸದಸ್ಯರಿದ್ದು, ಅದರೆ ಕೆಲವರಿಗೆ ಮಾತ್ರ ಕರೆ ಮಾಡಬೇಕು ಎಂದರೂ ಆಯ್ಕೆ ನೀಡಲಾಗಿದೆ. ತಮಗೆ ಬೇಕಾದ ಸದಸ್ಯರನ್ನು ಆಯ್ಕೆ ಮಾಡಿಕೊಂಡು ಮಾತ್ರ ಕಾಲ್ ಮಾಡುವ ಲಿಬರಲ್ ಕಂಟ್ರೋಲ್ ಹಾಗೂ ವೇಟಿಂಗ್ ರೂಂ ಆಯ್ಕೆ ನೀಡಲಾಗಿದೆ. ವಾಟ್ಸಾಪ್‌ನ ಎಂದಿನ ನಿಯಮದಂತೆ ಈ ವೆಬ್ ಗ್ರೂಪ್ ಕರೆಗಳು ಕೂಡ ಸಂಪೂರ್ಣವಾಗಿ 'ಎಂಡ್-ಟು-ಎಂಡ್ ಎನ್‌ಕ್ರಿಪ್ಟ್' (End-to-End Encrypted) ಆಗಿರುತ್ತವೆ. ಅಂದರೆ ನಿಮ್ಮ ಸಂಭಾಷಣೆಯನ್ನು ವಾಟ್ಸಾಪ್ ಅಥವಾ ಅದರ ಮಾತೃಸಂಸ್ಥೆಯಾದ ಮೆಟಾ (Meta) ಕೂಡ ಕಣ್ಣಿಡಲು ಸಾಧ್ಯವಿಲ್ಲ.
66
ಬೀಟಾ ವರ್ಶನ್‌ನಲ್ಲಿ ಹೊಸ ಫೀಚರ್
ಈ ಹೊಸ ಫೀಚರ್ ಬೀಟಾ ವರ್ಶನ್‌ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಹೊಸ ಫೀಚರ್ ಲಭ್ಯವಾಗಲಿದೆ. ಬ್ರೌಸರ್ ಆಧಾರಿತ ಅಪ್‌ಡೇಟ್‌ನಿಂದಾಗಿ ಲಿನಕ್ಸ್ ಬಳಕೆದಾರರು ಇನ್ನು ಮುಂದೆ ಯಾವುದೇ ತೊಂದರೆಯಿಲ್ಲದೆ ಕಂಪ್ಯೂಟರ್‌ನಲ್ಲೇ ಆಫೀಸ್ ಮೀಟಿಂಗ್ ಹಾಗೂ ಗ್ರೂಪ್ ಕಾಲ್‌ಗಳಲ್ಲಿ ಭಾಗವಹಿಸಬಹುದಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.