ಏರ್‌ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, ಕ್ಲೌಡ್ ಸುರಕ್ಷತೆ, ಸ್ಟೋರೇಜ್‌ಗಾಗಿ ಐಬಿಎಂ ಜೊತೆ ಪಾಲುದಾರಿಕೆ

Published : Oct 18, 2025, 11:03 PM IST

ಏರ್‌ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, ಕ್ಲೌಡ್ ಸುರಕ್ಷತೆ, ಸ್ಟೋರೇಜ್‌ಗಾಗಿ ಐಬಿಎಂ ಜೊತೆ ಪಾಲುದಾರಿಕೆ, ಕ್ಲೌಡ್ ಸುರಕ್ಷತೆ, ಸಾಮರ್ಥ್ಯ ಹೆಚ್ಚಳ, ವರ್ಕ್‌ಲೋಡ್ ಸೇರಿದಂತೆ ಹಲವು ತಾಂತ್ರಿಕ ಸಂಬಂಧ ಈ ಒಪ್ಪಂದ ಭಾರಿ ಮಹತ್ವ ಪಡೆದಿದೆ

PREV
15
ಐಬಿಎಂ ಜೊತೆ ಸಹಭಾಗಿತ್ವ ಯಾಕೆ?

ಐಬಿಎಂ ಜೊತೆ ಸಹಭಾಗಿತ್ವ ಯಾಕೆ?

ಭಾರ್ತಿ ಏರ್‌ಟೆಲ್ ಕ್ಲೌಡ್ ಅಭಿವೃದ್ಧಿಪಡಿಸಲು ಐಬಿಎಂ (NYSE:IBM) ಜೊತೆ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಒಪ್ಪಂದ ಮಾಡಿಕೊಂಡಿದೆ. ಈ ಸಹಭಾಗಿತ್ವದ ಮೂಲಕ ಏರ್‌ಟೆಲ್ ಕ್ಲೌಡ್‌ನ ಟೆಲ್ಕೋ-ಗ್ರೇಡ್ ವಿಶ್ವಾಸಾರ್ಹತೆ, ಉನ್ನತ ಮಟ್ಟದಸುರಕ್ಷತೆ ಮತ್ತು ಡೇಟಾ ರೆಸಿಡೆನ್ಸಿ ಸಾಮರ್ಥ್ಯವನ್ನು ಐಬಿಎಂನ ಕ್ಲೌಡ್ ಉತ್ಪನ್ನಗಳಲ್ಲಿನ ಪರಿಣತಿ, ಸುಧಾರಿತ ಮೂಲಸೌಕರ್ಯ ಮತ್ತು ಎಐ ಇನ್‌ಫರೆನ್ಸಿಂಗ್‌ಗಾಗಿ ವಿನ್ಯಾಸಗೊಳಿಸಲಾದ ಸಾಫ್ಟ್‌ ವೇರ್ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಲಾಗುತ್ತದೆ.

25
ಲೋಡ್ ಹೆಚ್ಚಿಸಲು ಒಪ್ಪಂದ

ಲೋಡ್ ಹೆಚ್ಚಿಸಲು ಒಪ್ಪಂದ

ಏರ್‌ಟೆಲ್ ಮತ್ತು ಐಬಿಎಂ ಜೊತೆಯಾಗಿ ನಿಯಂತ್ರಿತ ಎಂಟರ್‌ಪ್ರೈಸ್ ಗಳಲ್ಲಿನ ಸಂಸ್ಥೆಗಳಿಗೆ ಆನ್-ಪ್ರಿಮೈಸ್, ಕ್ಲೌಡ್, ಮಲ್ಟಿಪಲ್ ಕ್ಲೌಡ್‌ ಮತ್ತು ಎಡ್ಜ್‌ ವಿಭಾಗಗಳಲ್ಲಿ ಇಂಟರ್‌ಆಪರೇಬಿಲಿಟಿಯನ್ನು ಒದಗಿಸುವ ಮೂಲಕ ಎಐ ವರ್ಕ್‌ಲೋಡ್‌ಗಳನ್ನು ಹೆಚ್ಚು ದಕ್ಷತೆಯಿಂದ ನಿರ್ವಹಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿವೆ.

35
ಉಪಯೋಗವೇನು?

ಉಪಯೋಗವೇನು?

ಈ ಸಹಭಾಗಿತ್ವದ ಮೂಲಕ ಏರ್‌ಟೆಲ್ ಕ್ಲೌಡ್ ಗ್ರಾಹಕರು ಬ್ಯಾಂಕಿಂಗ್, ವೈದ್ಯಕೀಯ ಕ್ಷೇತ್ರ, ಸರ್ಕಾರ ಮತ್ತು ಇತರ ಕ್ಷೇತ್ರಗಳಿಗೆ ಅತ್ಯಗತ್ಯವಾದ ವ್ಯವಸ್ಥೆಗಳಲ್ಲಿ ಅತ್ಯಾಧುನಿಕ ಐಬಿಎಂ ಪವರ್ 11ಅಟೋನಾಮಸ್, ಎಐ-ರೆಡಿ ಸರ್ವರ್‌ಗಳನ್ನು ಒಳಗೊಂಡಂತೆ ಐಬಿಎಂ ಪವರ್ ಸಿಸ್ಟಮ್ಸ್ ಪೋರ್ಟ್‌ಫೋಲಿಯೋವನ್ನು ಸರ್ವೀಸ್ ಆಗಿ ಬಳಸಿಕೊಳ್ಳಬಹುದು. ಪವರ್ 11 ಹೈಬ್ರಿಡ್ ಪ್ಲಾಟ್‌ಫಾರ್ಮ್, ಐಬಿಎಂ ಪವರ್ ಎಐಎಕ್ಸ್, ಐಬಿಎಂ ಐ, ಲಿನಕ್ಸ್ ಮತ್ತು ಸ್ಯಾಪ್ಕ್ಲೌಡ್ ಇ ಆರ್ ಪಿಸೇರಿದಂತೆ ಅತ್ಯಗತ್ಯ ಎಂಟರ್‌ಪ್ರೈಸ್ ವರ್ಕ್‌ಲೋಡ್‌ಗಳನ್ನು ಸಹ ಸಪೋರ್ಟ್ ಮಾಡುತ್ತದೆ. ಇದರ ಜೊತೆಗೆ, ಈ ಸಹಯೋಗವು ಐಬಿಎಂ ಪವರ್ ವರ್ಚುವಲ್ ಸರ್ವರ್‌ನಲ್ಲಿ ಸ್ಯಾಪ್ ಕ್ಲೌಡ್ ಇ ಆರ್ ಪಿಗೆ ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ರೂಪಾಂತರಕ್ಕೆ ಸ್ಯಾಪ್ ಗ್ರಾಹಕರಿಗೆ ಸಹಾಯ ಮಾಡುತ್ತದೆ.

45
ಐಬಿಎಂ-ಏರ್‌ಟೆಲ್ ವರ್ಕ್ ಫ್ಲೋ

ಐಬಿಎಂ-ಏರ್‌ಟೆಲ್ ವರ್ಕ್ ಫ್ಲೋ

ಐಬಿಎಂನ ಎಂಟರ್‌ಪ್ರೈಸ್-ಗ್ರೇಡ್ ಕ್ಲೌಡ್ ಪ್ಲಾಟ್‌ಫಾರ್ಮ್‌ನೊಂದಿಗೆ ಮತ್ತುವಿನೂತನಐಎಎಎಸ್ಮತ್ತು ಪಿಎಎಎಸ್ಉತ್ಪನ್ನಗಳು, ಜೊತೆಗೆ ಕೋರ್ ಎಂಟರ್‌ಪ್ರೈಸ್ ವರ್ಕ್‌ಫ್ಲೋಗಳಲ್ಲಿ ಜನರೇಟಿವ್ ಎಐಯ ಪರಿಣಾಮವನ್ನು ವೇಗವಾಗಿ ಹೆಚ್ಚಿಸಲು ವಿನ್ಯಾಸಗೊಳಿಸಲಾದ ಐಬಿಎಂನ ಆಟೊಮೇಷನ್ ಪೋರ್ಟ್‌ಫೋಲಿಯೋದೊಂದಿಗೆ ಸಂಯೋಜಿತಗೊಂಡಿವೆ.

55
ಎಐ ಬಳಸುವ ಅವಕಾಶ

ಎಐ ಬಳಸುವ ಅವಕಾಶ

ಗ್ರಾಹಕರು ರೆಡ್ ಹ್ಯಾಟ್‌ನ ಹೈಬ್ರಿಡ್ ಕ್ಲೌಡ್ ಪರಿಹಾರಗಳಾದ ರೆಡ್ ಹ್ಯಾಟ್ ಓಪನ್‌ಶಿಫ್ಟ್ ವರ್ಚುವಲೈಸೇಶನ್, ರೆಡ್ ಹ್ಯಾಟ್ ಓಪನ್‌ಶಿಫ್ಟ್ ಮತ್ತು ರೆಡ್ ಹ್ಯಾಟ್ ಎಐ ಬಳಸುವ ಅವಕಾಶ ಹೊಂದಿರುತ್ತಾರೆ. ಈ ಸಾಮರ್ಥ್ಯಗಳನ್ನು ಮೀರಿ, ಐಬಿಎಂನ ಹೈಬ್ರಿಡ್ ಕ್ಲೌಡ್ ಆರ್ಕಿಟೆಕ್ಚರ್ ಗ್ರಾಹಕರಿಗೆ ಎಐಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಭವಿಷ್ಯದ ಆವಿಷ್ಕಾರವನ್ನು ಹೊಂದಲು ಸಹಾಯ ಮಾಡಲಿದೆ.

Read more Photos on
click me!

Recommended Stories