phone charging 100% ಬಹುತೇಕ ಜನರು ತಮ್ಮ ಮೊಬೈಲ್‌ನ್ನು ರಾತ್ರಿ ಪೂರ್ತಿ ಚಾರ್ಜ್‌ಗೆ ಹಾಕಿ ಬೆಳಿಗ್ಗೆ ಚಾರ್ಜ್ ಆಫ್ ಮಾಡ್ತಾರೆ. ಅದು 100% ಬ್ಯಾಟರಿ ಆಗಿರುತ್ತೆ, ಇದರಿಂದ ಮೊಬೈಲ್ ಹಾಳಾಗತ್ತಾ?
ಬಹುತೇಕ ಜನರು ತಮ್ಮ ಮೊಬೈಲ್‌ನ್ನು ರಾತ್ರಿ ಪೂರ್ತಿ ಚಾರ್ಜ್‌ಗೆ ಹಾಕಿ ಬೆಳಿಗ್ಗೆ ಚಾರ್ಜ್ ಆಫ್ ಮಾಡ್ತಾರೆ. ಅದು 100% ಬ್ಯಾಟರಿ ಆಗಿರುತ್ತೆ, ಫೋನ್ ಅನ್ನು ಪ್ರತಿದಿನ 100% ಚಾರ್ಜ್ ಮಾಡುವುದು ಬ್ಯಾಟರಿಗೆ ಹಾನಿಕಾರಕವೇ ಎಂಬ ಪ್ರಶ್ನೆ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ.
ತಜ್ಞರ ಪ್ರಕಾರ, ಲಿಥಿಯಂ-ಐಯಾನ್ ಬ್ಯಾಟರಿಗಳು ನಿರಂತರವಾಗಿ 100% ಚಾರ್ಜ್ ಸ್ಥಿತಿಯಲ್ಲಿ ಉಳಿದರೆ ಅವುಗಳ ರಾಸಾಯನಿಕ ಬಹಳ ದಿನಗಳವರೆಗೆ ಬರದೆ ಇರಬಹುದು. ಇದರಿಂದ ಬ್ಯಾಟರಿಯ ಸಾಮರ್ಥ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ಇದು ತಕ್ಷಣ ಪರಿಣಾಮ ಬಿರಲ್ಲ, ವರ್ಷಗಳ ನಂತರ ಕಾಣಿಸಬಹುದು.
24
100% ಚಾರ್ಜ್ ಮಾಡಬಾರದೇ?
ತಜ್ಞರು ಹೇಳುವಂತೆ, ಕೆಲವೊಮ್ಮೆ 100% ಚಾರ್ಜ್ ಮಾಡುವುದು ಸಮಸ್ಯೆಯಲ್ಲ. ಆದರೆ ಪ್ರತಿದಿನವೂ ಫೋನ್ ಅನ್ನು 100% ಮಾಡುವುದು ಬ್ಯಾಟರಿ ಮೇಲೆ ಒತ್ತಡ ಬಿಳಬಹುದು. ಆದ್ದರಿಂದ 20% ರಿಂದ 80% ಅಥವಾ 90% ನಡುವಿನ ಚಾರ್ಜ್ ಮಟ್ಟವನ್ನು ಕಾಪಾಡುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ.
34
ಬ್ಯಾಟರಿ ಬೇಗ ಹಾಳಾಗುವುದಕ್ಕೆ ಇನ್ನೇನು ಕಾರಣ?
100% ಚಾರ್ಜ್ ಮಾಡುವುದಕ್ಕಿಂತ ಹೆಚ್ಚಾಗಿ ಬ್ಯಾಟರಿಗೆ ಹಾನಿ ಮಾಡುವ ಅಂಶವೆಂದರೆ ಅತಿಯಾದ ಬಿಸಿ ಅಥವಾ ತಣ್ಣನೆಯ ತಾಪಮಾನ. ಫೋನ್ ಹೆಚ್ಚು ಬಿಸಿಯಾಗುವುದು, ದೀರ್ಘಕಾಲ ಫಾಸ್ಟ್ ಚಾರ್ಜಿಂಗ್ ಬಳಸುವುದು ಹಾಗೂ ಚಾರ್ಜ್ ವೇಳೆ ಗೇಮ್ ಆಡುವುದರಿಂದ ಬ್ಯಾಟರಿಯ ಆಯುಷ್ಯ ಕಡಿಮೆಯಾಗಬಹುದು.
44
ಆಧುನಿಕ ಫೋನ್‌ಗಳಲ್ಲಿ ಪರಿಹಾರವಿದೆ
ಇತ್ತೀಚಿನ iPhone ಮತ್ತು Android ಫೋನ್‌ಗಳಲ್ಲಿ Optimized Charging, Adaptive Charging ಹಾಗೂ Charge Limit ಮುಂತಾದ ಫೀಚರ್‌ಗಳಿವೆ. ಇವು ಬ್ಯಾಟರಿ 100% ಆಗದಂತೆ ನಿರ್ವಹಿಸಿ ಬ್ಯಾಟರಿಯ ಕಾಪಾಡಲು ಸಹಾಯ ಮಾಡುತ್ತವೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.