ಮೊಬೈಲ್ ಬಳಕೆದಾರರಿಗೆ ಇದೀಗ ತಮ್ಮ ಡೇಟಾ ಸುರಕ್ಷತೆಗೆ ಬಗ್ಗೆ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. ಯಾವ ಆ್ಯಪ್ ಸುರಕ್ಷಿತ, ಯಾವುದು ಅಲ್ಲ ಅನ್ನೋದು ಪತ್ತೆ ಹಚ್ಚುವುದೇ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಿಸುತ್ತಿದೆ. ಇದರ ಬೆನ್ನಲ್ಲೇ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇದೀಗ ಕ್ಯಾಂಡಿ ಕ್ರಶ್, ಟಿಂಡರ್ ಆ್ಯಪ್‌ಗಳಿಂದ ಡೇಟಾ ಲೀಕ್ ಆಗುತ್ತಿದೆ ಅನ್ನೋ ಮಾಹಿತಿ ಬಬಹಿರಂಗವಾಗಿದೆ. ಲಕ್ಷಾಂತರ ಜನ ಈ ಆ್ಯಪ್‌ಗಳನ್ನ ಬಳಸುತ್ತಿದ್ದಾರೆ. ಇದೀಗ ಈ ಹಗರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.
ಒಂದು ಕಾಲದಲ್ಲಿ ಗೇಮ್ಸ್ ಅಂದ್ರೆ ನಾಲ್ಕು ಜನ ಸೇರಿ ಆಡ್ತಿದ್ವಿ. ಈಗ ಫ್ರೀ ಫೈರ್, ಪಬ್‌ಜಿ ತರಹದ ಗೇಮ್ಸ್ ಬಂದಿವೆ. ಇವುಗಳಿಂದ ಅಪಾಯ ಇದೆ ಅಂತ ಪಬ್‌ಜಿ ಬ್ಯಾನ್ ಮಾಡಿದ್ದಾರೆ. ಆದ್ರೆ ಇನ್ನೂ ಅಪಾಯಕಾರಿ ಗೇಮ್ಸ್ ಇವೆ. ಭಾರತದಲ್ಲೂ ಗೇಮ್ಸ್ ಆ್ಯಪ್‌ಗಳು ಅತ್ಯಂತ ಜನಪ್ರಿಯವಾಗಿದೆ. ಆದರೆ ಈ ಆ್ಯಪ್ ಡೇಟಾ ಸೋರಿಕೆ ಮಾಡುತ್ತಿದೆಯಾ, ಗೌಪ್ಯತೆ ಕಾಪಾಡಿಕೊಂಡಿದೆಯಾ ಅನ್ನೋ ಮಾಹಿತಿ ಸಾಮಾನ್ಯವಾಗಿ ಬಳಕೆದಾರರಿಗೆ ಸಿಗುವುದಿಲ್ಲ. ಆದರೆ ವರದಿಗಳ ಪ್ರಕಾರ ಡೇಟಾ ಲೀಕ್ ಇದೀಗ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಜನಪ್ರಿಯ ಆ್ಯಪ್‌ಗಳು, ಗೇಮ್‌ಗಳು ಸೇಫ್ ಅಲ್ಲ ಅಂತ 404 ಮೀಡಿಯಾ ರಿಪೋರ್ಟ್ ಹೇಳಿದೆ. ಕೆಲವು ಆ್ಯಪ್‌ಗಳು ನಮ್ಮ ಲೊಕೇಶನ್ ಟ್ರ್ಯಾಕ್ ಮಾಡುತ್ತಿದೆ ಎಂದು ವರದಿ ಮಾಡಿದೆ. ಈ ಕ್ಯಾಂಡ್ ಕ್ರಶ್, ಟಿಂಡರ್ ಸೇರಿದಂತೆ ಕೆಲ ಆ್ಯಪ್‌ಗಳು ಬಳಕೆದಾರರ ವೈಯುಕ್ತಿಕ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದೆ ಎಂದಿದೆ.
ಕ್ಯಾಂಡಿ ಕ್ರಶ್, ಟಿಂಡರ್ ಆ್ಯಪ್‌ಗಳ ಡೇಟಾ ಲೀಕ್ ಆಗಿದೆ. ಗ್ರೇವಿ ಅನಾಲಿಟಿಕ್ಸ್ ಮೂಲಕ ಹ್ಯಾಕರ್‌ಗಳು ಡೇಟಾ ಕದ್ದಿದ್ದಾರೆ. ವೈಟ್ ಹೌಸ್, ಕ್ರೆಮ್ಲಿನ್, ವ್ಯಾಟಿಕನ್ ಸೇರಿದಂತೆ ಹಲವು ಜಾಗಗಳ ಲೊಕೇಶನ್ ಡೇಟಾ ಕೂಡ ಲೀಕ್ ಆಗಿದೆ ಎಂದು ವರದಿ ಹೇಳುತ್ತಿದೆ. ಹೀಗಾಗಿ ಇದೀಗ ಬಳಕೆದಾರರ ಆತಂಕ ಹೆಚ್ಚಾಗಿದೆ. ಯಾಕ ಮಾಹಿತಿಗಳು ಲೀಕ್ ಆಗಿದೆ ಅನ್ನೋ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಗ್ರೇವಿ ಅನಾಲಿಟಿಕ್ಸ್ ತರಹದ ಪ್ಲಾಟ್‌ಫಾರಮ್‌ಗಳು ಯೂಸರ್ ಡೇಟಾ ಕದಿಯುತ್ತವೆ. ನಿಮ್ಮ ಡೇಟಾ ಸೇಫ್ ಇರಬೇಕು ಅಂದ್ರೆ ಆ್ಯಪ್‌ಗಳಿಗೆ ಬೇಕಾದಷ್ಟು ಮಾತ್ರ ಪರ್ಮಿಷನ್ ಕೊಡಿ. ಐಫೋನ್ ಉಪಯೋಗಿಸ್ತಿದ್ರೆ "Ask Apps Not to Track" ಫೀಚರ್ ಉಪಯೋಗಿಸಿ.