ಇತ್ತೀಚಿನ ದಿನಗಳಲ್ಲಿ Smart phoneಗಳು ನಮ್ಮ ಜೀವನದ ಅವಿಭಾಜ್ಯ ಅಂಗ, ಬ್ಯುಸಿ ಜೀವನಶೈಲಿಯಲ್ಲಿ Phone battery ಖಾಲಿಯಾಗುವುದು ಸಾಮಾನ್ಯ ಸಮಸ್ಯೆ. ವೇಗವಾಗಿ Charge ಮಾಡಬೇಕೆಂದಿದ್ದರೆ ಕೆಲವು ಈ ಸರಳ ಸಲಹೆಗಳನ್ನು ಅನುಸರಿಸಿದರೆ ಸಾಕು.
ಮೊಬೈಲ್ ವೇಗವಾಗಿ ಚಾರ್ಜ್ ಆಗಲು ಫೋನ್, ಚಾರ್ಜರ್ ಮತ್ತು ಕೇಬಲ್ ಮೂರು ಕೂಡ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಬೇಕು. ಯಾವಾಗಲೂ ಕಂಪನಿಯ ಮೂಲ (Original) ಅಥವಾ ಪ್ರಮಾಣೀಕೃತ (Certified) ಫಾಸ್ಟ್ ಚಾರ್ಜರ್ ಬಳಸುವುದು ಉತ್ತಮ. ಕಡಿಮೆ ಗುಣಮಟ್ಟದ ಚಾರ್ಜರ್‌ಗಳು ಚಾರ್ಜಿಂಗ್ ವೇಗವನ್ನು ಕಡಿಮೆ ಮಾಡುವುದರ ಜೊತೆಗೆ ಫೋನ್‌ಗೆ ಹಾನಿಯನ್ನೂ ಉಂಟುಮಾಡಬಹುದು.
27
ವಾಲ್ ಸಾಕೆಟ್ ಬಳಸಿದರೆ ಹೆಚ್ಚು ವೇಗ
ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ USB ಪೋರ್ಟ್ ಮೂಲಕ ಚಾರ್ಜ್ ಮಾಡುವುದಕ್ಕಿಂತ ನೇರವಾಗಿ ವಾಲ್ ಸಾಕೆಟ್‌ಗೆ ಚಾರ್ಜರ್ ಸಂಪರ್ಕಿಸಿದರೆ ಹೆಚ್ಚು ವಿದ್ಯುತ್ ಪೂರೈಕೆಯಾಗುತ್ತದೆ. ಇದರ ಪರಿಣಾಮ ಫೋನ್ ವೇಗವಾಗಿ ಚಾರ್ಜ್ ಆಗುತ್ತದೆ.
37
ಫೋನ್ ಸ್ವಿಚ್ ಆಫ್ ಮಾಡಿದರೆ ಇನ್ನೂ ಉತ್ತಮ
ಚಾರ್ಜಿಂಗ್ ವೇಳೆ ಫೋನ್ ಆಫ್ ಮಾಡಿದರೆ ಬ್ಯಾಟರಿಗೆ ನೇರವಾಗಿ ವಿದ್ಯುತ್ ಹರಿದು ವೇಗವಾಗಿ ಚಾರ್ಜ್ ಆಗುತ್ತದೆ. ಕರೆಗಳು, ನೋಟಿಫಿಕೇಶನ್‌ಗಳು ಅಥವಾ ಬ್ಯಾಕ್‌ಗ್ರೌಂಡ್ ಆ್ಯಪ್‌ಗಳು ಬ್ಯಾಟರಿಯನ್ನು ಬಳಸುವುದಿಲ್ಲ.
47
ಏರ್‌ಪ್ಲೇನ್ ಮೋಡ್ ಆನ್ ಮಾಡಿ
ಫೋನ್ ಆನ್‌ನಲ್ಲೇ ಇರಬೇಕಾದರೆ ಏರ್‌ಪ್ಲೇನ್ ಮೋಡ್ ಬಳಸಬಹುದು. ಇದರಿಂದ ಮೊಬೈಲ್ ನೆಟ್‌ವರ್ಕ್, ವೈ-ಫೈ ಮತ್ತು ಬ್ಲೂಟೂತ್ ಕಾರ್ಯನಿರ್ವಹಿಸುವುದಿಲ್ಲ. ಚಾರ್ಜಿಂಗ್ ಸಮಯವು ಕಡಿಮೆಯಾಗಬಹುದು.
57
ಚಾರ್ಜಿಂಗ್ ವೇಳೆ ಫೋನ್ ಬಳಸಬೇಡಿ
ಚಾರ್ಜ್ ಆಗುತ್ತಿರುವಾಗ ವಿಡಿಯೋ ನೋಡುವುದು, ಗೇಮ್ ಆಡುವುದು ಅಥವಾ ಸೋಷಿಯಲ್ ಮೀಡಿಯಾ ಬಳಸುವುದು ಬ್ಯಾಟರಿಯ ಮೇಲೆ ಹೆಚ್ಚುವರಿ ಒತ್ತಡ ತರುತ್ತದೆ. ಇದರಿಂದ ಚಾರ್ಜಿಂಗ್ ನಿಧಾನವಾಗುವುದರ ಜೊತೆಗೆ ಫೋನ್ ಹೆಚ್ಚು ಬಿಸಿಯಾಗಬಹುದು.
67
ಫೋನ್ ಕವರ್ ತೆಗೆದು ಚಾರ್ಜ್ ಮಾಡಿ
ದಪ್ಪ ಅಥವಾ ರಬ್ಬರ್ ಕವರ್‌ಗಳು ಫೋನ್‌ನಲ್ಲಿನ ಉಷ್ಣತೆಯನ್ನು ಹೊರಹೋಗದಂತೆ ತಡೆಯುತ್ತವೆ. ಬ್ಯಾಟರಿ ಹೆಚ್ಚು ಬಿಸಿಯಾದರೆ ಚಾರ್ಜಿಂಗ್ ವೇಗ ಕಡಿಮೆಯಾಗುತ್ತದೆ. ಆದ್ದರಿಂದ ಚಾರ್ಜ್ ಮಾಡುವಾಗ ಕವರ್ ತೆಗೆದು ಇಡುವುದು ಉತ್ತಮ.
77
ಸರಿಯಾದ ಸ್ಥಳದಲ್ಲಿ ಚಾರ್ಜ್ ಮಾಡಿ
ಬೆಡ್, ಸೋಫಾ ಅಥವಾ ತಲೆಯಣೆಯ ಮೇಲೆ ಫೋನ್ ಇಟ್ಟು ಚಾರ್ಜ್ ಮಾಡುವುದನ್ನು ತಪ್ಪಿಸಿ. ಇವು ಉಷ್ಣತೆಯನ್ನು ಹಿಡಿದಿಟ್ಟುಕೊಳ್ಳುತ್ತವೆ. ಬದಲಿಗೆ ಸಮತಟ್ಟಾದ ಮೇಲ್ಮೈ ಮೇಲೆ ಫೋನ್ ಇಟ್ಟು ಚಾರ್ಜ್ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.