ಭಾರತೀಯ ಸೇನೆಯ ಬಲಿಷ್ಠ ಯುದ್ಧ ಟ್ಯಾಂಕ್‌ಗಳ ಕಾರ್ಯಕ್ಷಮತೆ ಹೆಚ್ಚಿಸಿದ ಬೆಂಗಳೂರಿನ ಆಲ್ಫಾ-ಎಲ್ಸೆಕ್‌ ಸಂಸ್ಥೆ!

Published : Mar 02, 2026, 02:45 PM IST

ಬೆಂಗಳೂರು ಮೂಲದ ಆಲ್ಫಾ-ಎಲ್ಸೆಕ್ ಸಂಸ್ಥೆಯು ಭಾರತೀಯ ಸೇನೆಯ 96 ಟಿ-72 ಯುದ್ಧ ಟ್ಯಾಂಕ್‌ಗಳಿಗೆ 'ಥರ್ಮಲ್ ಇಮೇಜಿಂಗ್ ಫೈರ್ ಕಂಟ್ರೋಲ್ ಸಿಸ್ಟಮ್' ಅನ್ನು ಯಶಸ್ವಿಯಾಗಿ ಅಳವಡಿಸಿದೆ. ಈ ತಂತ್ರಜ್ಞಾನವು, ರಾತ್ರಿಯ ಸಮಯದಲ್ಲಿಯೂ ಚಲಿಸುವ ಗುರಿಗಳನ್ನು ಪತ್ತೆಹಚ್ಚಿ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯ ನೀಡುತ್ತದೆ.

PREV
15
ಬೆಂಗಳೂರು ಮೂಲದ Alpha-Elsec

ಭಾರತೀಯ ಸೇನೆಯ ಬಲಿಷ್ಠ ಟಿ-72 (T-72) ಯುದ್ಧ ಟ್ಯಾಂಕ್‌ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರು ಮೂಲದ 'ಆಲ್ಫಾ-ಎಲ್ಸೆಕ್ ಡಿಫೆನ್ಸ್ & ಏರೋಸ್ಪೇಸ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ (Alpha-Elsec) ರಕ್ಷಣಾ ಸಂಸ್ಥೆಯು ತನ್ನ ತಂತ್ರಜ್ಞಾನದ ಮೂಲಕ ಬಲ ತುಂಬಿದೆ.

25
ಥರ್ಮಲ್ ಇಮೇಜಿಂಗ್ ಫೈರ್ ಕಂಟ್ರೋಲ್ ಸಿಸ್ಟಮ್

ಸೇನೆಯ 96 ಟಿ-72 ಟ್ಯಾಂಕ್‌ಗಳಿಗೆ ಅತ್ಯಾಧುನಿಕ 'ಥರ್ಮಲ್ ಇಮೇಜಿಂಗ್ ಫೈರ್ ಕಂಟ್ರೋಲ್ ಸಿಸ್ಟಮ್' (TIFCS) ಅಳವಡಿಸುವ ಕಾರ್ಯವನ್ನು ಕಂಪನಿಯು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

35
ಏನಿದು ಎಟಿಟಿ ತಂತ್ರಜ್ಞಾನ?

ಈ ಹೊಸ ತಂತ್ರಜ್ಞಾನವು ಯುದ್ಧ ಟ್ಯಾಂಕ್‌ಗಳಿಗೆ ರಾತ್ರಿಯ ಸಮಯದಲ್ಲಿ ನಿಖರವಾಗಿ ಗುರಿ ಗುರುತಿಸಲು ಮತ್ತು ದಾಳಿ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆಟೋಮ್ಯಾಟಿಕ್ ಟಾರ್ಗೆಟ್ ಟ್ರ್ಯಾಕರ್ (ATT) ವ್ಯವಸ್ಥೆಯು ಚಲಿಸುವ ಗುರಿಗಳನ್ನು ಸ್ವಯಂಚಾಲಿತವಾಗಿ ಹಿಂಬಾಲಿಸಿ, ಕ್ಷಿಪ್ರವಾಗಿ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಹಿಂದೆ ಇಸ್ರೇಲ್‌ನಿಂದ ನೇರವಾಗಿ ಆಮದು ಮಾಡಿಕೊಳ್ಳಲಾಗುತ್ತಿದ್ದ ಈ ವ್ಯವಸ್ಥೆಯನ್ನು ಈಗ 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ಬೆಂಗಳೂರಿನಲ್ಲೇ ತಯಾರಿಸಿರುವುದು ವಿಶೇಷ.

45
ಯಶಸ್ವಿ ಪರೀಕ್ಷೆ

ಭಾರತೀಯ ಸೇನೆಯು ಇತ್ತೀಚೆಗೆ ನಡೆಸಿದ ಫೈರಿಂಗ್ ವ್ಯಾಲಿಡೇಶನ್ ಪ್ರಯೋಗಗಳಲ್ಲಿ ಈ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಈ ಕುರಿತು ಮಾತನಾಡಿದ ಆಲ್ಫಾ-ಎಲ್ಸೆಕ್ ಸಿಇಒ ನಟರಾಜ್ ಕೃಷ್ಣಪ್ಪ ಅವರು, "ಸುಮಾರು 120 ನೈಪುಣ್ಯ ಹೊಂದಿದ ವೃತ್ತಿಪರರ ತಂಡದೊಂದಿಗೆ ನಾವು ಈ ಸಾಧನೆ ಮಾಡಿದ್ದೇವೆ. ಇದು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಗೆ ಸಾಕ್ಷಿಯಾಗಿದೆ," ಎಂದು ತಿಳಿಸಿದ್ದಾರೆ.

55
ಆಲ್ಫಾ-ಎಲ್ಸೆಕ್ ಸಂಸ್ಥೆಗೆ ದೊಡ್ಡ ಮಟ್ಟದ ಆರ್ಡರ್‌ ಭರವಸೆ

ಈ ಯೋಜನೆಯ ಯಶಸ್ಸಿನ ಬೆನ್ನಲ್ಲೇ ಆಲ್ಫಾ-ಎಲ್ಸೆಕ್ ಸಂಸ್ಥೆಗೆ ಭಾರತೀಯ ರಕ್ಷಣಾ ಪಡೆಗಳಿಂದ ಮತ್ತಷ್ಟು ದೊಡ್ಡ ಮಟ್ಟದ ಆರ್ಡರ್‌ಗಳು ಲಭಿಸುವ ಸಾಧ್ಯತೆ ದಟ್ಟವಾಗಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories