ಸ್ಪ್ಯಾಮ್ ವಿರುದ್ಧ ಏರ್‌ಟೆಲ್ ತನ್ನ ಹೋರಾಟ ಮುಂದುವರಿಸಿದೆ. ಏರ್‌ಟೆಲ್ ಇದೀಗ ವಾಟ್ಸಾಪ್, ಟೆಲಿಗ್ರಾಮ್, ಫೇಸ್‌ಬುಕ್, ಇನಸ್ಟಾಗ್ರಾಮ್, ಎಸ್ಎಂಎಸ್ ರೀತಿಯ ಓಟಿಟಿಗಳು, ಇಮೇಲ್ ಗಳು, ಬ್ರೌಸರ್ ಸೇರಿದಂತೆ ವೇದಿಕೆಗಳು ಮತ್ತು ಓವರ್-ದಿ-ಟಾಪ್(ಓಟಿಟಿ) ಆಪ್ಸ್ ಮತ್ತು ಎಲ್ಲಾ ಸಂವಹನ ವೇದಿಕೆಗಳಾದ್ಯಂತ ರಿಯಲ್ ಟೈಮ್ ನಲ್ಲಿ ನಕಲಿ ಮತ್ತು ಮೋಸದ ಜಾಲತಾಣಗಳನ್ನು ಪತ್ತೆಮಾಡುವ ಮತ್ತು ನಿರ್ಬಂಧಿಸುವ ನವೀನ ತಂತ್ರಜ್ಞಾನ ಪರಿಹಾರವೊಂದನ್ನು ಪರಿಚಯಿಸುತ್ತಿದೆ.