ಇದು Gen Z ಡೇಟಿಂಗ್ ನಿಘಂಟು: ಪ್ರೀತಿಯ ಹೊಸ ಟ್ರೆಡಿಂಗ್ ಭಾಷೆ ನಿಮಗೆ ಗೊತ್ತೇ?

Published : Aug 08, 2026, 04:39 PM IST

ಇಂದಿನ ಜೆನ್ ಜಿ ಕಾಲದಲ್ಲಿ ಪ್ರೀತಿ ಮತ್ತು ಸಂಬಂಧಗಳಿಗೆ 'ಸಿಚುವೇಷನ್‌ಶಿಪ್', 'ಘೋಸ್ಟಿಂಗ್' ಮುಂತಾದ ಹೊಸ ಪದಗಳು ಬಂದಿವೆ. ಈ ಲೇಖನವು ಇಂತಹ ಆಧುನಿಕ ಡೇಟಿಂಗ್ ಪದಗಳ ಅರ್ಥವನ್ನು ವಿವರಿಸುತ್ತದೆ ಮತ್ತು ಯಾವುದೇ ಸಂಬಂಧದಲ್ಲಿ ನಂಬಿಕೆ ಮತ್ತು ಗೌರವದ ಮಹತ್ವವನ್ನು ಒತ್ತಿಹೇಳುತ್ತದೆ.

PREV
111
ಪ್ರೀತಿಯ ಭಾಷೆ ತಿಳಿಯುವುದೇ..?

ಕಾಲ ಬದಲಾದಂತೆ ಪ್ರೀತಿ ಮಾಡುವ ರೀತಿ, ಅದನ್ನು ವ್ಯಕ್ತಪಡಿಸುವ ಶೈಲಿ ಎಲ್ಲವೂ ಬದಲಾಗಿದೆ. ಒಂದು ಕಾಲದಲ್ಲಿ ಪ್ರೀತಿ ಅಂದರೆ ಪತ್ರಗಳು, ಕಣ್ಣಲ್ಲೇ ಮಾತನಾಡುವುದು ಅಥವಾ ಮನೆಯವರ ಒಪ್ಪಿಗೆಗಾಗಿ ಕಾಯುವುದು ಇತ್ತು. ಆದರೆ ಇಂದಿನ 'ಜೆನ್ ಜಿ' (Gen Z) ಕಾಲದಲ್ಲಿ ಡೇಟಿಂಗ್ ಎಂಬುದು ದೊಡ್ಡ ಡಿಕ್ಷನರಿಯನ್ನೇ ಸೃಷ್ಟಿಸಿದೆ. ಸೋಶಿಯಲ್ ಮೀಡಿಯಾ ಮತ್ತು ಡೇಟಿಂಗ್ ಆ್ಯಪ್‌ಗಳ ಹಾವಳಿಯಿಂದಾಗಿ ಪ್ರೀತಿ ಮತ್ತು ಸಂಬಂಧಗಳಿಗೆ ಹೊಸ ಹೊಸ ಹೆಸರುಗಳು ಬಂದಿವೆ.

ನಿಮ್ಮ ಲೈಫ್‌ನಲ್ಲಿ ಯಾರಾದರೂ ಇದ್ದಾರೆಯೇ? ಅಥವಾ ನೀವು ಯಾರನ್ನಾದರೂ ಇಷ್ಟಪಡುತ್ತಿದ್ದೀರಾ? ಹಾಗಿದ್ದರೆ ಈ ಡೇಟಿಂಗ್ ಪದಗಳ ಅರ್ಥ ಮತ್ತು ಅವುಗಳ ಹಿಂದಿನ ಗುಟ್ಟು ನಿಮಗೆ ತಿಳಿದಿರಲೇಬೇಕು.

211
ಸಿಚುವೇಷನ್‌ಶಿಪ್ (Situationship): ಸಂಬಂಧವೋ? ಅಲ್ಲವೋ?

ಇಬ್ಬರು ವ್ಯಕ್ತಿಗಳು ಡೇಟಿಂಗ್ ಮಾಡುತ್ತಿರುತ್ತಾರೆ. ಒಟ್ಟಿಗೆ ಸುತ್ತುತ್ತಾರೆ. ಆದರೆ ನಾವಿಬ್ಬರು ಪ್ರಿಯಕರ-ಪ್ರಿಯತಮೆಯೇ? ಎಂದು ಕೇಳಿದರೆ ಯಾರ ಬಳಿಯೂ ಉತ್ತರವಿಲ್ಲ! ಇಂತಹ ಯಾವುದೇ ಕಮಿಟ್‌ಮೆಂಟ್ ಇಲ್ಲದ ಸ್ಪಷ್ಟತೆ ಇಲ್ಲದ ಸಂಬಂಧವನ್ನು 'ಸಿಚುವೇಷನ್‌ಶಿಪ್' ಎನ್ನಲಾಗುತ್ತದೆ. ಇದು ಸ್ನೇಹಕ್ಕಿಂತ ಹೆಚ್ಚು ಆದರೆ ಪ್ರೀತಿಗಿಂತ ಕಡಿಮೆ ಎನ್ನಬಹುದು.

311
ಬೆಂಚಿಂಗ್ (Benching): ಬ್ಯಾಕಪ್ ಪ್ಲಾನ್!

ಕ್ರೀಡೆಯಲ್ಲಿ ಹೇಗೆ ಆಟಗಾರರನ್ನು 'ಬೆಂಚ್' ಮೇಲೆ ಕುರಿಸುತ್ತಾರೋ ಹಾಗೆಯೇ ಡೇಟಿಂಗ್‌ನಲ್ಲಿ ಕೂಡ! ಒಬ್ಬ ವ್ಯಕ್ತಿಗೆ ನಿಮ್ಮ ಮೇಲೆ ಅಷ್ಟಾಗಿ ಆಸಕ್ತಿ ಇರುವುದಿಲ್ಲ, ಆದರೆ ನಿಮ್ಮನ್ನು ಬಿಟ್ಟು ಕೊಡಲು ಇಷ್ಟವಿರುವುದಿಲ್ಲ. ಅವರು ಬೇರೆ ಯಾರನ್ನಾದರೂ ಹುಡುಕುತ್ತಿರುತ್ತಾರೆ, ಅಲ್ಲಿಯವರೆಗೆ ನಿಮ್ಮನ್ನು 'ಬ್ಯಾಕಪ್' ಆಗಿ ಇಟ್ಟುಕೊಳ್ಳುವುದೇ 'ಬೆಂಚಿಂಗ್'.

411
ಬ್ರೆಡ್‌ಕ್ರಂಬಿಂಗ್ (Breadcrumbing): ಬರೀ ಆಸೆ ತೋರಿಸುವುದು

ಬ್ರೆಡ್ ತುಣುಕುಗಳನ್ನು ಹಾಕಿ ಪಕ್ಷಿಗಳನ್ನು ಸೆಳೆಯುವಂತೆ, ಇಲ್ಲಿ ಕೇವಲ ಅಲ್ಪ ಅಟೆನ್ಷನ್ ನೀಡಲಾಗುತ್ತದೆ. ಆಗೊಮ್ಮೆ ಈಗೊಮ್ಮೆ ಹಾಯ್ ಎನ್ನುವುದು, ಸ್ಟೋರಿಗೆ ರಿಯಾಕ್ಟ್ ಮಾಡುವುದು ಆದರೆ ಡೇಟಿಂಗ್ ಅಥವಾ ಕಮಿಟ್‌ಮೆಂಟ್ ಬಗ್ಗೆ ಎಂದಿಗೂ ಮಾತನಾಡದಿರುವುದಕ್ಕೆ 'ಬ್ರೆಡ್‌ಕ್ರಂಬಿಂಗ್' ಎನ್ನುತ್ತಾರೆ.

511
ಘೋಸ್ಟಿಂಗ್ (Ghosting): ಹೇಳದೆ ಕೇಳದೆ ಮಾಯ!

ಇದು ಇಂದಿನ ಡೇಟಿಂಗ್ ಜಗತ್ತಿನಲ್ಲಿ ಅತ್ಯಂತ ಸಾಮಾನ್ಯ ಮತ್ತು ನೋವಿನ ಸಂಗತಿ. ನಿನ್ನೆವರೆಗೂ ಚೆನ್ನಾಗಿ ಮಾತನಾಡುತ್ತಿದ್ದವರು, ಇಂದು ಫೋನ್ ಇಲ್ಲ, ಮೆಸೇಜ್ ಇಲ್ಲ, ಬ್ಲಾಕ್ ಕೂಡ ಮಾಡಿರಲ್ಲ ಆದರೆ ಯಾವುದೇ ರಿಪ್ಲೈ ಕೊಡಲ್ಲ. ಹೀಗೆ ಯಾವುದೇ ವಿವರಣೆ ನೀಡದೆ ಸಂಬಂಧದಿಂದ ಹಠಾತ್ತನೆ ಮರೆಯಾಗುವುದೇ 'ಘೋಸ್ಟಿಂಗ್'.

611
ಲವ್ ಬಾಂಬಿಂಗ್ (Love Bombing): ಅತಿಯಾದ ಪ್ರೀತಿಯ ಸುರಿಮಳೆ

ಸಂಬಂಧದ ಆರಂಭದಲ್ಲೇ ಅತಿಯಾದ ಪ್ರಶಂಸೆ, ಗಂಟೆಗಟ್ಟಲೆ ಮಾತು, ದುಬಾರಿ ಉಡುಗೊರೆಗಳನ್ನು ನೀಡಿ ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕುವುದನ್ನು ಲವ್ ಬಾಂಬಿಂಗ್ ಎನ್ನಲಾಗುತ್ತದೆ. ಇದು ಕೆಲವೊಮ್ಮೆ ಪ್ರೀತಿಯಂತೆ ಕಂಡರೂ, ವಾಸ್ತವದಲ್ಲಿ ಎದುರಿಗಿರುವ ವ್ಯಕ್ತಿಯನ್ನು ಕಂಟ್ರೋಲ್ ಮಾಡಲು ಬಳಸುವ ತಂತ್ರವೂ ಆಗಿರಬಹುದು.

711
ಸಾಫ್ಟ್ ಲಾಂಚ್ ಮತ್ತು ಹಾರ್ಡ್ ಲಾಂಚ್ (Soft & Hard Launch)
  • ಸಾಫ್ಟ್ ಲಾಂಚ್: ನಿಮ್ಮ ಪಾರ್ಟ್‌ನರ್ ಫೋಟೋ ಹಾಕುವಾಗ ಅವರ ಮುಖ ತೋರಿಸದೆ ಕೇವಲ ಕೈಗಳು, ಕಾಫಿ ಕಪ್‌ ಅಥವಾ ಅವರ ನೆರಳು ತೋರಿಸಿ "ಯಾರೋ ವಿಶೇಷ ವ್ಯಕ್ತಿ ಇದ್ದಾರೆ" ಎಂಬ ಸುಳಿವು ನೀಡುವುದು.
  • ಹಾರ್ಡ್ ಲಾಂಚ್: ಪಾರ್ಟ್‌ನರ್ ಜೊತೆಗಿನ ಫೋಟೋ ಹಾಕಿ ಅಧಿಕೃತವಾಗಿ ಪ್ರೀತಿಯನ್ನು ಅನೌನ್ಸ್ ಮಾಡುವುದು.
811
ಜಾಂಬೀಯಿಂಗ್ (Zombieing): ಮತ್ತೆ ಬಂದ ಪ್ರೇತ!

ನಿಮ್ಮನ್ನು ಘೋಸ್ಟ್ ಮಾಡಿ (ಮಾಯವಾಗಿ) ಹೋದ ವ್ಯಕ್ತಿ ಹಲವು ತಿಂಗಳುಗಳ ನಂತರ ಏನೂ ತಿಳಿಯದವನಂತೆ ಅಕಸ್ಮಾತ್ತಾಗಿ "ಹಾಯ್, ಹೇಗಿದ್ದೀಯಾ?" ಎಂದು ಮೆಸೇಜ್ ಮಾಡಿದರೆ ಅದನ್ನು 'ಜಾಂಬೀಯಿಂಗ್' ಎನ್ನಲಾಗುತ್ತದೆ. ಸತ್ತವನು ಎದ್ದು ಬಂದಂತೆ ಎಂದರ್ಥ!

911
ಪಾಕೆಟಿಂಗ್ (Pocketing): ಪ್ರೀತಿಯನ್ನು ಜೇಬು ಒಳಗೆ ಇಡುವುದು

ಪಾರ್ಟ್‌ನರ್ ನಿಮ್ಮನ್ನು ಪ್ರೀತಿಸುತ್ತಾರೆ. ಆದರೆ ತನ್ನ ಫ್ರೆಂಡ್ಸ್‌ಗೆ ತೋರಿಸಲ್ಲ, ಫ್ಯಾಮಿಲಿಗೆ ಹೇಳಲ್ಲ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಕೂಡ ಎಲ್ಲಿಯೂ ನಿಮ್ಮ ಬಗ್ಗೆ ಹೇಳಿಕೊಳ್ಳಲ್ಲ. ನಿಮ್ಮನ್ನು ತನ್ನ ಪ್ರಪಂಚದಿಂದ ಸೀಕ್ರೆಟ್ ಆಗಿ ಇಡುವುದೇ 'ಪಾಕೆಟಿಂಗ್'.

1011
ರೆಡ್ ಫ್ಲ್ಯಾಗ್ಸ್ (Red Flags) vs ಗ್ರೀನ್ ಫ್ಲ್ಯಾಗ್ಸ್ (Green Flags)
  • ರೆಡ್ ಫ್ಲ್ಯಾಗ್ಸ್ (ಅಪಾಯದ ಸಂಕೇತಗಳು): ಅತಿಯಾದ ಅನುಮಾನ, ನಿಮ್ಮ ಮೇಲೆ ನಿಯಂತ್ರಣ ಹೇರುವುದು, ಸುಳ್ಳು ಹೇಳುವುದು, ನಿಮ್ಮ ವೈಯಕ್ತಿಕ ಸ್ಪೇಸ್ ನೀಡದಿರುವುದು.
  • ಗ್ರೀನ್ ಫ್ಲ್ಯಾಗ್ಸ್ (ಒಳ್ಳೆಯ ಸಂಕೇತಗಳು): ಪರಸ್ಪರ ಗೌರವ, ನೇರವಾದ ಮಾತುಕತೆ (Communication), ನಂಬಿಕೆ, ಮತ್ತು ನಿಮ್ಮ ಯಶಸ್ಸನ್ನು ಕಂಡು ಸಂತೋಷ ಪಡುವುದು.
1111
ಗೌರವ ಮುಖ್ಯ

ಹೆಸರುಗಳು ಹೊಸದಾಗಿರಬಹುದು, ಟ್ರೆಂಡ್‌ಗಳು ಬದಲಾಗಬಹುದು. ಆದರೆ ಪ್ರೀತಿ ಎಂಬ ಸುಂದರ ಬಾಂಧವ್ಯಕ್ಕೆ ಎಂದಿಗೂ ಅಡಿಪಾಯವಾಗಿರುವುದು ನಂಬಿಕೆ! ಗೌರವ ಮತ್ತು ಪ್ರಾಮಾಣಿಕತೆ ಮಾತ್ರ. ಸೋಶಿಯಲ್ ಮೀಡಿಯಾದಲ್ಲಿ ತೋರಿಸುವ ಸುಳ್ಳು ಪ್ರೀತಿಗಿಂತ, ನಿಜ ಜೀವನದಲ್ಲಿ ಇಬ್ಬರೂ ಎಷ್ಟು ಪರಸ್ಪರ ಗೌರವಿಸುತ್ತೀರಿ ಎಂಬುದೇ ಮುಖ್ಯ.

Read more Photos on
click me!

Recommended Stories