ಈ ಎಮ್ಮೆ ಮಗುವಿನಷ್ಟೇ ಹಠಮಾರಿ! ಟಿವಿ ನೋಡದೆ ಒಂದು ಹನಿ ಹಾಲು ಕೊಡುವುದಿಲ್ಲ; Video

Published : Jul 08, 2026, 09:09 AM IST

ಸಾಮಾಜಿಕ ಜಾಲತಾಣದಲ್ಲಿ ಎಮ್ಮೆಯೊಂದು ವೈರಲ್ ಆಗಿದೆ. ಈ ಎಮ್ಮೆಗೆ ಟಿವಿ ತೋರಿಸಿದರೆ ಮಾತ್ರ ಹಾಲು ಕೊಡುತ್ತದೆ, ಇಲ್ಲದಿದ್ದರೆ ಹಠ ಹಿಡಿಯುತ್ತದೆ. ಈ ವಿಚಿತ್ರ ಎಮ್ಮೆಯ ವಿಡಿಯೋಗೆ ಲಕ್ಷಾಂತರ ವೀಕ್ಷಣೆಗಳು ಬಂದಿವೆ.

PREV
14
ಹಠಮಾರಿ ಎಮ್ಮೆ

ಮಕ್ಕಳಿಗೆ ಊಟ ಮಾಡಿಸಬೇಕಾದ್ರೆ ಅವರ ಕೈಗೆ ಮೊಬೈಲ್ ನೀಡಬೇಕು ಅಥವಾ ಟಿವಿಯಲ್ಲಿ ಅವರಿಷ್ಟದ ಕಾರ್ಟೂನ್ ಪ್ರೋಗ್ರಾಂ ಪ್ಲೇ ಆಗುತ್ತಿರಬೇಕು. ಈ ರೀತಿ ವಿಷಯಗಳಿಗೆ ಇಂದಿನ ಮಕ್ಕಳು ಅಡಿಕ್ಟ್ ಆಗಿದ್ದಾರೆ. ಇದೇ ರೀತಿಯಲ್ಲಿ ಎಮ್ಮೆಯೊಂದು ಟಿವಿ ನೋಡಲು ಅಡಿಕ್ಟ್ ಆಗಿದೆ. ಟಿವಿ ನೋಡಿದ್ರೆ ಮಾತ್ರ ಈ ಎಮ್ಮೆ ಹಾಲು ನೀಡುತ್ತದೆ.

24
ಟಿವಿ ಬೇಕೇ ಬೇಕು

ಟಿವಿ ನೋಡುವ ಎಮ್ಮೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟಿವಿ ಆನ್ ಮಾಡಿ ಮನೆ ಮುಂದೆ ಎಮ್ಮೆಯನ್ನು ನಿಲ್ಲಿಸಬೇಕು. ಟಿವಿ ನೋಡುತ್ತಿರುವಾಗ ಮಾತ್ರ ಈ ಎಮ್ಮೆ ಹಾಲು ಕೊಡುತ್ತೆ ಎಂದು ವರದಿಯಾಗಿದೆ. ಈ ವಿಡಿಯೋ ನೋಡಿದ ಜನರು ತರೇಹವಾರಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ವೈರಲ್ ವಿಡಿಯೋದಲ್ಲಿ ಏನಿದೆ ಎಂದು ನೋಡೋಣ ಬನ್ನಿ.

34
ವೈರಲ್ ವಿಡಿಯೋ

ಓರ್ವ ವ್ಯಕ್ತಿ ಮಹಿಳೆಯನ್ನು ಎಮ್ಮೆ ಏಕೆ ಹಾಲು ಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಾನೆ. ಈಗ ಈ ಎಮ್ಮೆ ಹಾಲು ಕೊಡುವುದಿಲ್ಲ ಎಂದು ಮಹಿಳೆ ಹೇಳಿದಾಗ, ಆ ವ್ಯಕ್ತಿ, ಹಾಗಾದ್ರೆ ಯಾವಾಗ ಹಾಲು ಸಿಗಬಹುದು ಅಂತಾನೆ. ಆಗ ಮಹಿಳೆ, ಇದು ಟಿವಿ ನೋಡಿದ ನಂತರವೇ ಹಾಕು ಕೊಡುತ್ತೆ ಅಂತಾರೆ. ಮುಂದೆ ಎಮ್ಮೆ ಮನೆ ಮುಂದೆ ನಿಂತು ಟಿವಿ ನೋಡುತ್ತಿರುವ ವಿಡಿಯೋ ನೋಡಬಹುದು.

44
ವಿಡಿಯೋಗೆ ಲಕ್ಷಾಂತರ ವ್ಯೂವ್

ಎಮ್ಮೆ ಗಮನವೆಲ್ಲಾ ಟಿವಿ ಮೇಲಿದ್ದಾಗ ಮಹಿಳೆ ಹಾಲು ಕರೆದುಕೊಳ್ಳುತ್ತಾರೆ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು, ಎಮ್ಮೆಯನ್ನು ಹಠಮಾರಿ ಮಕ್ಕಳಿಗೆ ಹೋಲಿಕೆ ಮಾಡಿ ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋಗೆ ಲಕ್ಷಾಂತರ ವ್ಯೂವ್ ಬಂದಿವೆ.

Read more Photos on
click me!

Recommended Stories