ಕೇವಲ 44 ರೂಪಾಯಿಗೆ ಇಡೀ ವರ್ಷ ಜಿಯೋ ಸಿಮ್ ಆಕ್ಟಿವ್ ಆಗಿಡಬಹುದು ಎಂಬ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಈ ಲೇಖನ ಪರಿಶೀಲಿಸುತ್ತದೆ. ಈ ಸುದ್ದಿ ಸಂಪೂರ್ಣ ಸುಳ್ಳಾಗಿದ್ದು, ಸಿಮ್ ಸಕ್ರಿಯವಾಗಿಡಲು ಬೇಸಿಕ್ ಪ್ಲಾನ್ ರೀಚಾರ್ಜ್ ಕಡ್ಡಾಯವಾಗಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.
ದುಬಾರಿ ದುನಿಯಾದಲ್ಲಿ ಹಣ ಉಳಿತಾಯ ಮಾಡೋದು ಹೇಗೆ ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸಾಮಾನ್ಯವಾಗಿ ಇಂದು ಬಹುತೇಕರು ಡಬಲ್ ಸಿಮ್ ಬಳಕೆ ಮಾಡುತ್ತಾರೆ. ಒಂದು ಸಿಮ್‌ನ್ನು ಸೆಕೆಂಡರಿಯಾಗಿ ಬಳಕೆ ಮಾಡುತ್ತಿದ್ರೂ ದುಬಾರಿ ಬೆಲೆಯ ರೀಚಾರ್ಜ್‌ಗಳನ್ನು ಮಾಡಬೇಕಾಗುತ್ತದೆ.
25
44 ರೂಪಾಯಿಯಲ್ಲಿ ರಿಲಯನ್ಸ್ ಜಿಯೋ ಸಿಮ್ ಆಕ್ಟಿವ್
ಕಳೆದ ಕೆಲವು ದಿನಗಳಿಂದ ಕೇವಲ 44 ರೂಪಾಯಿಯಲ್ಲಿ ರಿಲಯನ್ಸ್ ಜಿಯೋ ಸಿಮ್‌ನ್ನು ಇಡೀ ವರ್ಷ ಆಕ್ಟಿವೇಟ್ ಆಗಿಟ್ಟುಕೊಳ್ಳಬಹುದು ಎಂಬ ಸಂದೇಶದ ವಿಡಿಯೋ ಹರಿದಾಡುತ್ತಿದೆ. ಈ 44 ರೂ.ಯ ರೀಚಾರ್ಜ್ ಕುರಿತ ಅಸಲಿ ಸತ್ಯ ಏನು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
35
ವೈರಲ್ ಆಗಿರುವ 44 ರೂಪಾಯಿ ಪ್ಲಾನ್ ಏನು?
ಒಂದು ನಿರ್ದಿಷ್ಟ ಸಮಯದವರೆಗೆ ಬೇಸಿಕ್ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳದಿದ್ರೆ ಸಿಮ್ ನಿಷ್ಕ್ರಿಯಗೊಳಿಸಲಾಗುತ್ತದೆ. ಒಮ್ಮೆ ನಿಷ್ಕ್ರಿಯಗೊಂಡ ನಂತರ ಆ ಸಂಖ್ಯೆ ಬೇರೆ ಟೆಲಿಕಾಂ ಕಂಪನಿಗೂ ಹೋಗುತ್ತದೆ. ಹಾಗಾಗಿ ಸಿಮ್ ಆಕ್ಟಿವೇಟ್ ಆಗಿಟ್ಟುಕೊಳ್ಳೋದು ಇಂದು ಅನಿವಾರ್ಯವಾಗಿದೆ. ಇಂಟರ್‌ನೆಟ್ ಬಳಕೆ ಮಾಡದಿದ್ರೂ ಡೇಟಾವುಳ್ಳ ರೀಚಾರ್ಜ್ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕಾಗುತ್ತದೆ. ವೈರಲ್ ಆಗಿರುವ 44 ರೂಪಾಯಿ ಪ್ಲಾನ್ ಏನು ಎಂದು ನೋಡೋಣ ಬನ್ನಿ.
ಜಿಯೋ ಹೆಚ್ಚುವರಿ ಡೇಟಾ ಪಡೆದುಕೊಳ್ಳಲು 11 ರೂ. ಪ್ಲಾನ್ ನೀಡುತ್ತಿದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡು ಇಂಟರ್‌ನೆಟ್ ಬಳಸಿದ್ರೆ ಸಿಮ್ ಮುಂದಿನ ಮೂರು ತಿಂಗಳವರೆಗೆ ಆಕ್ಟಿವ್ ಆಗಿರುತ್ತದೆ. ಹೀಗೆ ಒಂದು ವರ್ಷದಲ್ಲಿ ನಾಲ್ಕು ಬಾರಿ ರೀಚಾರ್ಜ್ ಮಾಡಿಕೊಂಡ್ರೆ ನಿಮ್ಮ ಸಿಮ್ ಆಕ್ಟಿವ್ ಆಗಿರುತ್ತೆ ಎಂಬ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೈರಲ್ ನ್ಯೂಸ್ ನಿಜವೇ ಎಂಬುದರ ಮಾಹಿತಿ ಇಲ್ಲಿದೆ.
55
ಬೇಸಿಕ್ ಪ್ಲಾನ್ ರೀಚಾರ್ಜ್ ಕಡ್ಡಾಯ
ಸಿಮ್ ಆಕ್ಟಿವ್ ಆಗಿಟ್ಟುಕೊಳ್ಳಬೇಕಾದ್ರೆ ಬೇಸಿಕ್ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. 11 ರೂಪಾಯಿ ಡೇಟಾ ಪ್ಲಾನ್ ಆಕ್ಟಿವ್ ಆಗಬೇಕಾದ್ರೆ ಬೇಸಿಕ್ ಪ್ಲಾನ್ ಇರಬೇಕಾಗುತ್ತದೆ. ಕೇವಲ ಡೇಟಾ ಪ್ಲಾನ್‌ನಿಂದ ಸಿಮ್ ಆಕ್ಟಿವ್ ಆಗಿಟ್ಟುಕೊಳ್ಳಲು ಸಾಧ್ಯವಿಲ್ಲ. ಯಾವುದೇ ಕಂಪನಿಯ ಸಿಮ್ ಸಕ್ರಿಯವಾಗಿಟ್ಟುಕೊಳ್ಳಲು ಬೇಸಿಕ್ ಪ್ಲಾನ್ ಬೇಕಾಗುತ್ತದೆ. ಹಾಗಾಗಿ ವೈರಲ್ ಆಗುತ್ತಿರುವ ಸುದ್ದಿ ಸುಳ್ಳು ಎಂಬುವುದು ದೃಢಪಟ್ಟಿದೆ.