ಓದಿದ್ದಕ್ಕೂ ಬರೆದಿದ್ದಕ್ಕೂ ಸಂಬಂಧವೇ ಇಲ್ಲ; ರಾಹುಲ್ ಗಾಂಧಿಗೆ ಟಾಂಗ್ ಕೊಡಲು ಹೋಗಿ ಮುಖಭಂಗ! ವಿಡಿಯೋ ವೈರಲ್‌!

Published : Aug 01, 2026, 01:33 PM IST

ಪಶ್ಚಿಮ ಬಂಗಾಳದ ಸಹಾಯಕ ಪ್ರಾಧ್ಯಾಪಕಿಯೊಬ್ಬರು ರಾಹುಲ್ ಗಾಂಧಿಯವರನ್ನು ಟೀಕಿಸಿ 'X' ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಅವರ ಇಂಗ್ಲಿಷ್ ಬರಹದಲ್ಲಿದ್ದ ವ್ಯಾಕರಣ ದೋಷಗಳಿಂದಾಗಿ, ರಾಜಕೀಯ ಚರ್ಚೆಯ ಬದಲು ಅವರ ಭಾಷಾ ಜ್ಞಾನವೇ ನೆಟ್ಟಿಗರಿಂದ ತೀವ್ರ ಟ್ರೋಲ್‌ಗೆ ಒಳಗಾಗಿ ಮುಜುಗರಕ್ಕೊಳಗಾದರು.

PREV
15
ಭಾರೀ ವೈರಲ್‌ ಆದ ವಿಡಿಯೋ!

ಸಾಮಾಜಿಕ ಮಾಧ್ಯಮಗಳಲ್ಲಿ ಇತರರನ್ನು ಟೀಕಿಸಲು ಹೋಗಿ ತಾವೇ ನಗೆಪಾಟಲಿಗೀಡಾಗುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿಕೊಂಡು ಮಾಡಿದ ಪೋಸ್ಟ್ ಒಂದು ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆದರೆ, ಅವರು ಅಂದುಕೊಂಡಂತೆ ಅವರ ರಾಜಕೀಯ ವಿಮರ್ಶೆಗೆ ಬೆಂಬಲ ಸಿಗಲಿಲ್ಲ, ಬದಲಿಗೆ ಅವರು ಮಾಡಿದ ಭಾಷಾ ದೋಷಗಳಿಂದಾಗಿ ಜಾಲತಾಣಗಳಲ್ಲಿ ತೀವ್ರ ಮುಜುಗರ ಎದುರಿಸಬೇಕಾಯಿತು.

25
ಎಕ್ಸ್‌ನಲ್ಲಿ ಭಾರೀ ಮುಖಭಂಗ!

ಅರ್ಪಿತಾ ಚಟರ್ಜಿ ಎಂಬ ಮಹಿಳೆ ತಮ್ಮನ್ನು ಸಹಾಯಕ ಪ್ರಾಧ್ಯಾಪಕಿ (ಅಸಿಸ್ಟೆಂಟ್ ಪ್ರೊಫೆಸರ್) ಎಂದು ಪರಿಚಯಿಸಿಕೊಂಡು ‘X’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ತಮ್ಮ ಶೈಕ್ಷಣಿಕ ಅರ್ಹತೆಯನ್ನು ಹೇಳಿಕೊಳ್ಳುತ್ತಾ, ತಾವು ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದು, ಬಿ.ಎಡ್ ಮಾಡಿದ್ದೇನೆ ಹಾಗೂ ಪ್ರಸ್ತುತ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಈ ಶೈಕ್ಷಣಿಕ ಹಿನ್ನೆಲೆಯನ್ನು ಮುಂದಿಟ್ಟುಕೊಂಡ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ನೇರವಾಗಿ ಪ್ರಶ್ನಿಸಿದ್ದರು. ರಾಹುಲ್ ಗಾಂಧಿಯವರನ್ನು ಬೆಂಬಲಿಸುವವರನ್ನು ಕುರುಡು ಅನುಯಾಯಿಗಳು ಎಂದು ಕರೆದಿದ್ದ ಅವರು, ರಾಹುಲ್ ಬೆಂಬಲಿಗರು ಮೂರ್ಖರೇ ಮತ್ತು ಪ್ರತಿಯೊಬ್ಬರನ್ನೂ ಅದೇ ರೀತಿ ನೋಡಬೇಕೇ ಎಂಬರ್ಥದಲ್ಲಿ ತೀವ್ರವಾಗಿ ಟೀಕಿಸಿದ್ದರು.

35
ಪ್ರತಿಕ್ರಿಯೆ ಉಲ್ಟಾ ಹೊಡೆಯಲು ಕಾರಣವೇನು?

ಆದರೆ, ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಟೀಕಿಸಲು ಹೊರಟ ಅರ್ಪಿತಾ ಅವರ ಪೋಸ್ಟ್‌ಗೆ ಜನರಿಂದ ಸಿಕ್ಕ ಪ್ರತಿಕ್ರಿಯೆ ಸಂಪೂರ್ಣ ಉಲ್ಟಾ ಆಯಿತು. ಅವರು ಎತ್ತಿದ ರಾಜಕೀಯ ವಿಷಯಕ್ಕಿಂತ ಹೆಚ್ಚಾಗಿ, ಅವರು ಬರೆದಿದ್ದ ಇಂಗ್ಲಿಷ್ ವಾಕ್ಯಗಳಲ್ಲಿದ್ದ ಬೃಹತ್ ವ್ಯಾಕರಣ ದೋಷಗಳು ನೆಟ್ಟಿಗರ ಕಣ್ಣಿಗೆ ಬಿದ್ದವು. ಒಬ್ಬ ಸಹಾಯಕ ಪ್ರಾಧ್ಯಾಪಕಿ, ಅದರಲ್ಲೂ ಹಲವು ಉನ್ನತ ಪದವಿಗಳನ್ನು ಹೊಂದಿದ್ದೇನೆ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಈ ಮಟ್ಟದ ಕಳಪೆ ಇಂಗ್ಲಿಷ್ ಬರೆದಿರುವುದನ್ನು ಕಂಡ ಸಾಮಾಜಿಕ ಜಾಲತಾಣದ ಬಳಕೆದಾರರು, ಅವರ ರಾಜಕೀಯ ಟೀಕೆಯನ್ನು ಪಕ್ಕಕ್ಕಿಟ್ಟು ಅವರ ಭಾಷಾ ಜ್ಞಾನವನ್ನೇ ಪ್ರಶ್ನಿಸಲು ಪ್ರಾರಂಭಿಸಿದರು.

45
ನೆಟ್ಟಿಗರು ಗರಂ!

ಅರ್ಪಿತಾ ಅವರ ಈ ಪೋಸ್ಟ್ ವಿರುದ್ಧ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಒಬ್ಬ ಬಳಕೆದಾರರು, ನಿಮ್ಮ ಬಳಿ ಎರಡು ಸ್ನಾತಕೋತ್ತರ ಪದವಿಗಳಿರಬಹುದು, ಆದರೆ ಸಣ್ಣ ಪೋಸ್ಟ್‌ನಲ್ಲೂ ಸರಿಯಾದ ಇಂಗ್ಲಿಷ್ ಬರೆಯಲು ಬರದಿರುವುದು ನಿಮ್ಮ ಮೂರ್ಖತನವನ್ನು ತೋರಿಸುತ್ತದೆ, ಕೇವಲ ಸರ್ಟಿಫಿಕೇಟ್ ಇದ್ದರೆ ಸಾಲದು ಅದಕ್ಕೆ ತಕ್ಕಂತ ಕೌಶಲ್ಯವೂ ಇರಬೇಕು ಎಂದು ತರಾಟೆಗೆ ತೆಗೆದುಕೊಂಡರು. ಮತ್ತೊಬ್ಬ ಬಳಕೆದಾರರಂತೂ, ಮೇಡಂ ನಿಮ್ಮ ಪದವಿಗಳು ಮತ್ತು ನೀವು ಬರೆದಿರುವ ಸಾಲುಗಳನ್ನು ನೋಡಿದರೆ ನೀವು ಸಾಕ್ಷರರು ಹೌದು, ಆದರೆ ನಿಜವಾದ ಅರ್ಥದಲ್ಲಿ ಶಿಕ್ಷಿತರಲ್ಲ ಎಂಬುದು ಸಾಬೀತಾಗುತ್ತದೆ ಎಂದು ನೇರವಾಗಿಯೇ ತಿರುಗೇಟು ನೀಡಿದರು. ಇನ್ನೊಬ್ಬರು, ಉನ್ನತ ಪದವಿಗಳು ಜ್ಞಾನ ಅಥವಾ ಸ್ವತಂತ್ರ ವಿಮರ್ಶಾತ್ಮಕ ಚಿಂತನೆಯನ್ನು ನೀಡುವುದಿಲ್ಲ ಎಂಬುದಕ್ಕೆ ಈ ಪೋಸ್ಟ್ ಉದಾಹರಣೆ ಎಂದು ಅಭಿಪ್ರಾಯಪಟ್ಟರು.

55
ಇಂಗ್ಲಿಷ್ ಕ್ಲಾಸ್‌ ತೆಗೆದುಕೊಂಡ ಪ್ರೊಫೆಸರ್!

ಇತರರನ್ನು ಸಾರ್ವಜನಿಕವಾಗಿ ಪ್ರಶ್ನಿಸುವಾಗ ಅಥವಾ ವಿಮರ್ಶಿಸುವಾಗ ನಮ್ಮ ಸ್ವಂತ ಜ್ಞಾನ ಮತ್ತು ಭಾಷೆಯ ಸ್ಪಷ್ಟತೆ ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆ ಅತ್ಯುತ್ತಮ ಉದಾಹರಣೆಯಾಗಿದೆ. ರಾಜಕೀಯವಾಗಿ ರಾಹುಲ್ ಗಾಂಧಿಯವರನ್ನು ಕೆಳಗಿಳಿಸಲು ಹೋದ ಪ್ರೊಫೆಸರ್, ಕೊನೆಗೆ ತಮ್ಮದೇ ವ್ಯಾಕರಣ ತಪ್ಪಿನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರಿಂದ 'ಇಂಗ್ಲಿಷ್ ಕ್ಲಾಸ್' ತಗೆದುಕೊಳ್ಳುವ ಪರಿಸ್ಥಿತಿಗೆ ಸಿಲುಕಿದರು.

Read more Photos on
click me!

Recommended Stories