ಜಿಮ್‌ನಲ್ಲಿ ಮ್ಯೂಜಿಕ್‌ ಹಾಕೋದು ಯಾಕೆ? ಇಲ್ಲಿದೆ ಆಸಕ್ತಿದಾಯಕ 5 ಕಾರಣಗಳು

Published : Aug 29, 2026, 04:02 PM IST

ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಸಂಗೀತ ಕೇಳುವುದು ದೈಹಿಕ ಆಯಾಸದ ಮೇಲಿರುವ ಗಮನವನ್ನು ಕಡಿಮೆ ಮಾಡುತ್ತದೆ ಮತ್ತು ವರ್ಕೌಟ್ ಮಾಡುವ ಉತ್ಸಾಹವನ್ನು ಹೆಚ್ಚಿಸುತ್ತದೆ. ವ್ಯಾಯಾಮದ ಅವಧಿಯನ್ನು ಶೇಕಡಾ 20 ರಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದರೆ ಸುರಕ್ಷತೆಯ ದೃಷ್ಟಿಯಿಂದ ಹೆಡ್‌ಫೋನ್ ಸೌಂಡ್ ಮಿತವಾಗಿಡಬೇಕು.

PREV
17
ಆಸಕ್ತಿಯಿಂದ ವರ್ಕೌಟ್

ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಅನೇಕರು ಹೆಡ್‌ಫೋನ್ ಧರಿಸಿ ಇಷ್ಟವಾದ ಹಾಡುಗಳನ್ನು ಕೇಳುವುದನ್ನು ನೋಡಿರಬಹುದು. ಕೆಲವರಿಗಂತೂ ಮ್ಯೂಜಿಕ್‌ ಇಲ್ಲದೇ ವ್ಯಾಯಾಮ ಮಾಡೋದು ಅಸಾಧ್ಯವಿಲ್ಲ. ವರ್ಕೌಟ್ ಮಾಡುವಾಗ ಹಾಡು ಕೇಳುವುದು ಕೇವಲ ಟೈಮ್‌ಪಾಸ್‌ಗಾಗಿ ಮಾತ್ರವಲ್ಲ; ಇದರ ಹಿಂದೆ ವೈಜ್ಞಾನಿಕ ಮತ್ತು ಮಾನಸಿಕ ಕಾರಣಗಳೂ ಇವೆ ಎಂದು ಸಂಶೋಧನೆಗಳು ಹೇಳುತ್ತವೆ.

ಸಂಗೀತವನ್ನು ಕೇಳುತ್ತಾ ವ್ಯಾಯಾಮ ಮಾಡುವುದರಿಂದ ದೈಹಿಕ ಶ್ರಮದ ಕಡೆಗೆ ಗಮನ ಸ್ವಲ್ಪ ಕಡಿಮೆಯಾಗಿ, ಸುಲಭವಾಗಿ ಮತ್ತು ಹೆಚ್ಚು ಆಸಕ್ತಿಯಿಂದ ವರ್ಕೌಟ್ ಮಾಡಲು ಸಾಧ್ಯವಾಗುತ್ತದೆ.

27
1. ವರ್ಕೌಟ್‌ ಮಾಡುವ ಉತ್ಸಾಹ ಹೆಚ್ಚುತ್ತದೆ

ಪ್ರತಿದಿನ ಜಿಮ್‌ಗೆ ಹೋಗಿ ಒಂದೇ ರೀತಿಯ ವ್ಯಾಯಾಮ ಮಾಡುವುದು ಕೆಲವೊಮ್ಮೆ ಬೇಸರ ತರಿಸಬಹುದು. ಅಂತಹ ಸಮಯದಲ್ಲಿ ಇಷ್ಟವಾದ ಮ್ಯೂಸಿಕ್ ಕೇಳುವುದರಿಂದ ಜಿಮ್ ದಿನಚರಿ ಹೆಚ್ಚು ಆಸಕ್ತಿದಾಯಕವಾಗಿ ಬದಲಾಗುತ್ತದೆ. ಒಳ್ಳೆಯ ಹಾಡುಗಳು ನಮ್ಮ ಮೂಡ್ ಅನ್ನು ಸುಧಾರಿಸಿ, ವ್ಯಾಯಾಮ ಮಾಡಲು ಧನಾತ್ಮಕ ಶಕ್ತಿ ನೀಡುತ್ತವೆ.

37
2. ಆಯಾಸ ಕಡಿಮೆ ಎನಿಸುತ್ತದೆ

ವ್ಯಾಯಾಮ ಮಾಡುವಾಗ ದೇಹದ ಮೇಲಾಗುವ ತೀವ್ರ ಆಯಾಸದ ಕಡೆಗೆ ನಮ್ಮ ಗಮನ ಪೂರ್ಣವಾಗಿ ಇರುವುದಿಲ್ಲ. ಮ್ಯೂಸಿಕ್ ನಮಗೆ ಒಂದು ರೀತಿಯ 'ಡಿಸ್ಟ್ರಾಕ್ಷನ್' (ಗಮನ ಬೇರೆಡೆಗೆ ಸೆಳೆಯುವುದು) ಆಗಿ ಕೆಲಸ ಮಾಡುವುದರಿಂದ, ತೀವ್ರವಾದ ದೈಹಿಕ ಶ್ರಮವೂ ನಮಗೆ ಸುಲಭವಾಗಿ ಗೋಚರಿಸುತ್ತದೆ. ಇದರಿಂದ ಹೆಚ್ಚಿನ ದಣಿವಾಗದಂತೆ ದೀರ್ಘಕಾಲ ವ್ಯಾಯಾಮ ಮಾಡಬಹುದು.

47
3. ಹೆಚ್ಚು ಸಮಯ ವ್ಯಾಯಾಮಕ್ಕೆ ಸಹಕಾರಿ

ತಮಗೆ ಇಷ್ಟವಾದ ಹಾಡುಗಳನ್ನು ಕೇಳುತ್ತಾ ವರ್ಕೌಟ್‌ ಮಾಡೋದ್ರಿಂದ ವ್ಯಾಯಾಮ ಬೇಗನೆ ನಿಲ್ಲಿಸುವ ಆಲೋಚನೆ ಬರುವುದಿಲ್ಲ. ಇತ್ತೀಚಿನ (2026ರ) ಸಂಶೋಧನಾ ವರದಿ ಪ್ರಕಾರ ತಮ್ಮ ನೆಚ್ಚಿನ ಮ್ಯೂಸಿಕ್ ಕೇಳುತ್ತಾ ಸೈಕ್ಲಿಂಗ್ ಮಾಡಿದವರು, ಯಾವುದೇ ಸಂಗೀತವಿಲ್ಲದೆ ನಿಶ್ಯಬ್ದ ವಾತಾವರಣದಲ್ಲಿ ವ್ಯಾಯಾಮ ಮಾಡಿದವರಿಗಿಂತ ಸುಮಾರು ಶೇಕಡಾ 20 ರಷ್ಟು ಹೆಚ್ಚು ಸಮಯದವರೆಗೆ ವರ್ಕೌಟ್ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

57
4. ವ್ಯಾಯಾಮಕ್ಕೆ ಸರಿಯಾದ ಲಯ ಸಿಗುತ್ತದೆ

ಹಾಡಿನ ಬೀಟ್‌ಗೆ ಅನುಗುಣವಾಗಿ ಕದಲಿಕಗಳನ್ನು ಮಾಡುವುದರಿಂದ ವ್ಯಾಯಾಮದ ವೇಗವನ್ನು ಸ್ಥಿರವಾಗಿ ಕಾಯ್ದುಕೊಳ್ಳಬಹುದು. ವಿಶೇಷವಾಗಿ ರನ್ನಿಂಗ್, ವಾಕಿಂಗ್ ಮತ್ತು ಸೈಕ್ಲಿಂಗ್‌ನಂತಹ ವ್ಯಾಯಾಮಗಳಿಗೆ ಸಂಗೀತವು ಉತ್ತಮ ರಿದಮ್ ಒದಗಿಸುತ್ತದೆ.

67
5. ಮಾನಸಿಕ ಸ್ಥಿತಿ (Mood) ಉತ್ತಮ

5. ಮಾನಸಿಕ ಸ್ಥಿತಿ (Mood) ಉತ್ತಮ

77
5. ಮಾನಸಿಕ ಸ್ಥಿತಿ (Mood) ಉತ್ತಮ

ಜಿಮ್‌ನಲ್ಲಿ ಹಾಡು ಕೇಳುವಾಗ ಶಬ್ದದ ತೀವ್ರತೆಯನ್ನು (Volume) ಮಿತವಾಗಿಟ್ಟುಕೊಳ್ಳುವುದು ಮುಖ್ಯ. ವಿಶೇಷವಾಗಿ ಭಾರವಾದ ತೂಕ ಎತ್ತುವಾಗ ಅಥವಾ ಇತರರೊಂದಿಗೆ ವರ್ಕೌಟ್ ಮಾಡುವಾಗ ಸುತ್ತಮುತ್ತಲಿನ ಪರಿಸ್ಥಿತಿಯ ಅರಿವಿರಬೇಕು. ಅತಿಯಾದ ಸೌಂಡ್‌ನಿಂದಾಗಿ ಯಾರಾದರೂ ನೀಡುವ ಎಚ್ಚರಿಕೆಗಳು ಅಥವಾ ಭದ್ರತಾ ಸೂಚನೆಗಳು ಕೇಳಿಸದೆ ಹೋಗುವ ಅಪಾಯ ಇರುತ್ತದೆ. ವ್ಯಾಯಾಮದ ಸಮಯದಲ್ಲಿ ಸಂಗೀತದ ಪ್ರಭಾವವು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ವ್ಯಾಯಾಮದ ತೀವ್ರತೆಗೆ ಅನುಗುಣವಾಗಿ ಬದಲಾಗಬಹುದು.

Read more Photos on
click me!

Recommended Stories