ರೆಡ್ಡಿಟ್‌ನ 'TwoXIndia' ಸಮುದಾಯದಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಹಲವು ನೆಟ್ಟಿಗರು ಉದ್ಯೋಗಿಗೆ ಬೆಂಬಲವಾಗಿ ನಿಂತು ಉದ್ಯೋಗದಾತರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನೋಟಿಸ್ ಅವಧಿಯು ಹಸ್ತಾಂತರಕ್ಕಾಗಿಯೇ ಹೊರತು ಹೊಸ ಕೆಲಸಗಳನ್ನು ಸ್ವೀಕರಿಸುವುದಕ್ಕಲ್ಲ, ಇದು ನಿಮ್ಮ ಕೊನೆಯ ದಿನ ಎಂಬುದನ್ನು ನೆನಪಿಸಿ ಬಾಕಿ ಕೆಲಸಗಳನ್ನು ಹೊಸಬರಿಗೆ ಹಸ್ತಾಂತರಿಸಿ ಎಂದು ಒಬ್ಬ ಬಳಕೆದಾರರು ಸಲಹೆ ನೀಡಿದರು. ಮ್ಯಾನೇಜರ್‌ಗಳು ಉದ್ಯೋಗಿಗಳನ್ನು ಒದ್ದೆ ಬಟ್ಟೆಯಿಂದ ನೀರು ಹಿಂಡಿದಂತೆ ಕೊನೆಯ ಹಂತದವರೆಗೂ ಹಿಂಡಿ ಹಿಂಡಿ ಕೆಲಸ ತೆಗೆಯುತ್ತಾರೆ ಎಂದು ಮತ್ತೊಬ್ಬರು ಟೀಕಿಸಿದರು. ಇನ್ನು ಕೆಲವರಂತೂ, ಅಧಿಕೃತವಾಗಿ ಕೆಲಸ ಮುಗಿದ ನಂತರವೂ ಕೆಲಸ ಮಾಡುವುದು ಅಪಾಯಕಾರಿ, ಒಂದು ವೇಳೆ ನಿಮ್ಮ ಕೆಲಸದಲ್ಲಿ ಏನಾದರೂ ತಪ್ಪಾದರೆ ಕಂಪನಿಯು ನಿಮ್ಮ ಮೇಲೆಯೇ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇರುತ್ತದೆ, ಆದ್ದರಿಂದ ತಕ್ಷಣವೇ ಕೆಲಸ ನಿಲ್ಲಿಸಿ ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.