ಮದ್ವೆ ದಿನವೇ ಮೈಚಳಿ ಬಿಟ್ಟು ಡಾನ್ಸ್​ ಮಾಡಿದ ರೀಲ್ಸ್​ರಾಣಿ: ವಾಪಸ್​ ಹೋದ ವರನ ಮನೆಯವ್ರು- ವಿಡಿಯೋ ವೈರಲ್​

Published : Jun 06, 2026, 07:12 PM IST

ತನ್ನದೇ ಮದುವೆಯ ಮೆರವಣಿಗೆಯಲ್ಲಿ 'ಮೇರೆ ಸೈಯಾನ್ ಸೂಪರ್‌ಸ್ಟಾರ್' ಹಾಡಿಗೆ ಮೈಮರೆತು ಕುಣಿದ ವಧುವನ್ನು ನೋಡಿ ಭಾವಿ ಅತ್ತೆ-ಮಾವ ಮದುವೆಯನ್ನೇ ರದ್ದುಪಡಿಸಿದ್ದಾರೆ. ಮದುವೆ ಮುರಿದುಬಿದ್ದರೂ, ವಧುವಿನ ಈ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

PREV
16
ರೀಲ್ಸ್​ರಾಣಿಯ ಪೇಚಾಟ

ಈಗ ಎಲ್ಲೆಲ್ಲೂ ರೀಲ್ಸ್​ ಹುಚ್ಚಾಟದವರೇ ಹೆಚ್ಚು. ಯಾವುದಾದರೂ ಹಾಡು ಕೇಳಿದಾಕ್ಷಣ, ಒಂದು ಕ್ಷಣ ಅವರ ಕಾಲುಗಳು ನಿಲ್ಲುವುದೇ ಇಲ್ಲ. ಅಲ್ಲಿಯೇ ಒಂದು ರೀಲ್ಸ್​ ಮಾಡಿ, ಅದನ್ನು ಪೋಸ್ಟ್​ ಮಾಡುವವರೆಗೂ ಸಮಾಧಾನ ಆಗುವುದಿಲ್ಲ. ಈಗ ಅಂಥದ್ದೇ ರೀಲ್ಸ್​ ರಾಣಿಯೊಬ್ಬಳು ತನ್ನದೇ ಮದುವೆಯ ದಿನ ಬೇಕಾಬಿಟ್ಟೆ ಡಾನ್ಸ್​ ಮಾಡಿ ಮದುವೆ ಕ್ಯಾನ್ಸಲ್​ ಮಾಡಿಸಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

26
ಮೈಚಳಿ ಬಿಟ್ಟು ನೃತ್ಯ

ಈ ವಿಡಿಯೋದಲ್ಲಿ, ಮದುಮಕ್ಕಳ ಬಾರಾತ್​ (ಮೆರವಣಿಗೆ) ಬರುತ್ತಿದೆ. ಆ ಸಂದರ್ಭದಲ್ಲಿ "ಮೇರೆ ಸೈಯಾನ್ ಸೂಪರ್‌ಸ್ಟಾರ್" ಹಾಡಿನ ರಿಕಾರ್ಡ್​ ಹಾಕಿಬಿಟ್ಟಿದ್ದಾರೆ. ಈ ವಧುವಿಗೋ ಆ ಹಾಡಿನ ಬೀಟ್ಸ್​ ಕೇಳಿ ತಡೆದುಕೊಳ್ಳಲು ಆಗಲೇ ಇಲ್ಲ. ತಾನು ಮದುಮಗಳು ಎನ್ನೋದನ್ನೂ ಮರೆತು ಮೈಚಳಿ ಬಿಟ್ಟು ಡಾನ್ಸ್​ ಮಾಡಿದ್ದಾಳೆ.

36
ಭಾರಿ ಡಾನ್ಸ್​

ಇಡೀ ಪೆಂಡಲ್ ಭೂಕಂಪದಿಂದ ಅಪ್ಪಳಿಸಿದಂತೆ ಭಾಸವಾಗುವ ರೀತಿಯಲ್ಲಿ ಡಾನ್ಸ್ ಮಾಡಿದ್ರೆ, ಆಕೆಯ ಸ್ನೇಹಿತೆಯರೂ ಅವಳಿಗೆ ಆಥ್​ ನೀಡಿದರು. ಅಲ್ಲಿ ಇದ್ದವರೆಲ್ಲರೂ ವ್ಹಾರೆವ್ಹಾ ಎಂದರು.

46
ಅತ್ತೆ-ಮಾವ ಶಾಕ್​

ಆದರೆ, ಈಕೆಯ ಭಾವಿ ಅತ್ತೆ-ಮಾವ ಅಲ್ಲಿಗೆ ಬಂದು ತಮ್ಮ ಭಾವಿ ಸೊಸೆಯ ಆವಾಂತರ ನೋಡಿ ಬೆಚ್ಚಬಿದ್ದರು. ಈಕೆ ಭಾರಿ ಅಪಾಯಕಾರಿ ನೃತ್ಯವನ್ನು ಪ್ರದರ್ಶಿಸುತ್ತಿದ್ದಾಳೆ ಎಂದು ಹೇಳಿದ ಅತ್ತೆ-ಮಾವ ಇಂಥವಳು ತಮ್ಮ ಮನೆಯ ಸೊಸೆಯಾಗಿ ಬಂದ್ರೆ ಅಷ್ಟೇ ಕಥೆ ಎಂದು ವಾಪಸ್​ ಹೋಗಿಯೇ ಬಿಟ್ಟರು! ಮಂಟಪಕ್ಕೆ ಬರಬೇಕಿದ್ದ ವರನ ಮೆರವಣಿಗೆ ವಾಪಸ್ ಹೋಯಿತು!

56
ರೀಲ್ಸ್​ ಹಿಟ್​

ಮದುವೆಯೇನೋ ಮುರಿದು ಬಿತ್ತು. ಆದರೆ ಈ ವಧುವಿನ ಅದೃಷ್ಟ ಇನ್ನೊಂದು ರೀತಿ ಖುಲಾಯಿಸಿದೆ. ಈಕೆ ಇಲ್ಲಿಯವರೆಗೆ ಮಾಡಿದ್ದ ರೀಲ್ಸ್​ಗಳು ಇಷ್ಟು ಹಿಟ್​ ಆಗಿದ್ಯೋ ಇಲ್ವೋ ಗೊತ್ತಿಲ್ಲ. ಆದರೆ ಮದುವೆ ಮನೆಯ ರೀಲ್ಸ್​ ಮಾತ್ರ ಸಿಕ್ಕಾಪಟ್ಟೆ ಹಿಟ್​ ಆಗಿಹೋಗಿದೆ.

66
ನೆಟ್ಟಿಗರ ಅಭಿಪ್ರಾಯ

ಮದುವೆ ಕ್ಯಾನ್ಸಲ್​ ಆದ್ರೂ ರೀಲ್ಸ್​ರಾಣಿಗೆ ತನ್ನ ಡಾನ್ಸ್​ ಈ ಪರಿ ವ್ಯೂವ್ಸ್​ ಕಂಡಿದ್ದು ನೋಡಿ ಖುಷಿಯಾಗಿದ್ಯೋ ಗೊತ್ತಿಲ್ಲ. ಒಟ್ಟಿನಲ್ಲಿ ರೀಲ್ಸ್​ಪ್ರೇಮಿಗಳೆಲ್ಲಾ ಕೊನೆಯ ಪಕ್ಷ ತಮ್ಮ ಮದುವೆಯ ದಿನವಾದರೂ ಸ್ವಲ್ಪ ಕೈಕಾಲು ಆಡಿಸದೇ ಬಿಗಿಯಾಗಿ ಇಟ್ಟುಕೊಳ್ಳೋದನ್ನು ಕಲಿಯಿರಿ ಎಂದು ಕಮೆಂಟ್ಸ್​ ಸುರಿಮಳೆ ಆಗ್ತಿದೆ.

Read more Photos on
click me!

Recommended Stories