ಕೋಲ್ಕತ್ತಾದ ವ್ಯಕ್ತಿಯೊಬ್ಬರ ಬಾಲ್ಕನಿಯ ಹೂವಿನ ಕುಂಡದಲ್ಲಿ ಬಳಕೆಯಾದ ಕಾಂಡೋಮ್ ಪತ್ತೆಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯಾಗಿ ಪೋಸ್ಟ್ ಹಂಚಿಕೊಂಡ ಅವರು, ತಮ್ಮ ಮೇಲಿನ ಮಹಡಿಯ ನಿವಾಸಿಗಳು ಶೃಂಗಾರದ ಕುರುಹುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತಮ್ಮ ಮನೆ ಬಾಲ್ಕನಿಯಲ್ಲಿ ಬಳಕೆಯಾದ ಕಾಂಡೋಮ್ ಬಿದ್ದಿದ್ದು, ಈ ಸಂಬಂಧ ಪೋಸ್ಟ್ ಮಾಡಿಕೊಂಡಿರುವ ಸುನಿಲ್ ಭಂಡಾರಿ ಎಂಬವರು, ಪ್ರೀತಿಯ ಮೇಲಿನ ಮಹಡಿಯ ನಿವಾಸಿಗಳೇ, ನಿಮ್ಮ ಶೃಂಗಾರದ ಕುರುಹುಗಳನ್ನು ನಿಮ್ಮಲ್ಲಿಯೇ ಇಟ್ಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
25
ಹೂವಿನ ಕುಂಡದಲ್ಲಿ ಅನೀರಿಕ್ಷಿತ ವಸ್ತು
ಸುರೇಶ್ ಭಂಡಾರಿ ಕೋಲ್ಕತ್ತಾ ಮೂಲದ ಡಿಜಿಟಲ್ ಕ್ರಿಯೇಟರ್ ಆಗಿದ್ದಾರೆ. ಮೇಲಿನ ಫ್ಲ್ಯಾಟ್‌ನಿಂದ ಬಂದ ಕಾಂಡೋಮ್ ಸುರೇಶ್ ಅವರು ಇರಿಸಿರುವ ಹೂವಿನ ಕುಂಡದಲ್ಲಿ ಬಿದ್ದಿದೆ. ಇದು ನಮ್ಮ ನೆಚ್ಚಿನ ಸ್ಥಳವಾಗಿದ್ದು, ಇಲ್ಲಿನ ಸಸ್ಯಗಳನ್ನು ನಾವು ಚೆನ್ನಾಗಿ ಆರೈಕೆ ಮಾಡುತ್ತೇವೆ. ಈ ನನ್ನ ಸಂದೇಶ ನಮ್ಮ ಮನೆ ಮೇಲಿರುವ ಎಲ್ಲಾ ಫ್ಲ್ಯಾಟ್ ನಿವಾಸಿಗಳಿಗೆ ಎಂದು ಸುದೀರ್ಘ ಮತ್ತು ತಮಾಷೆಯಾಗಿ ಬರೆದುಕೊಂಡಿದ್ದಾರೆ.
35
ನಮ್ಮ ಸಸ್ಯಗಳಿಗೆ ಗೊಬ್ಬರ ಬೇಕೇ ಹೊರತು, ವೀರ್ಯವಲ್ಲ
ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ಶೃಂಗಾರ ಸುಖವನ್ನು ಅನುಭವಿಸಿದ್ದಕ್ಕೆ ನಿಮಗೆ ಅಭಿನಂದನೆಗಳು. ಇಷ್ಟು ನೇರವಾಗಿ ಬಳಕೆಯಾದ ಕಾಂಡೋಮ್ ನಮ್ಮ ಬಾಲ್ಕನಿಯಲ್ಲಿ ಬಂದಿರೋದು ನೋಡಿದ್ರೆ ಇದರಲ್ಲಿ ನಿಮ್ಮ ಪೂರ್ಣಪ್ರಮಾಣದ ಶ್ರಮವಿದೆ. ಈ ಜೀವನದ ಹೆದ್ದಾರಿಯಲ್ಲಿ ಹಲವು ಮೈಲುಗಳನ್ನು ಕ್ರಮಿಸಿರುವ ಓರ್ವ ಹಿರಿಯನಾಗಿ ನಿಮಗೆ ಸಣ್ಣದಾದ ಸಲಹೆ ನೀಡಲು ಬಯಸುತ್ತಿದ್ದೇನೆ. ನಮ್ಮ ಗಿಡಗಳು ಸಾವಯವ ಗೊಬ್ಬರ ಇಷ್ಟಪಡುತ್ತವೆಯೇ ಹೊರತು ನಿಮ್ಮ ವೀರ್ಯವನಲ್ಲ. ನಮ್ಮ ಸಸ್ಯಗಳು ಎಂದಿಗೂ ಇಂತಹ ಗೊಬ್ಬರ ನಿರೀಕ್ಷೆ ಮಾಡಿಲ್ಲ ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ.
ನಿಮ್ಮ ಬಾಲ್ಕನಿಯಿಂದ ರಾಕೇಟ್ ರೀತಿ ವಿಲೇವಾರಿ ಮಾಡುವ ಬದಲಾಗಿ ಹತ್ತಿರದ ಕಸದಬುಟ್ಟಿಯನ್ನು ಬಳಕೆ ಮಾಡಲು ನಿಮಗೆ ಗೌರವಪೂರ್ವಕವಾಗಿ ಶಿಫಾರಸ್ಸು ಮಾಡುತ್ತೇನೆ. ಈ ಅನಿರೀಕ್ಷಿತ ವಸ್ತು ನೋಡಿದಾಗಿನಿಂದ ಇಡೀ ದಿನ ಇರಿಸುಮುರಿಸು ಉಂಟಾಗುತ್ತಿದೆ. ನನ್ನ ಹೆಂಡ್ತಿ, ನಿಮಗೆ ಇದು ನೆನಪಿದೆಯಾ ಎಂದು ಕೇಳಿದಳು. ನನ್ನ ವಯಸ್ಸಿನ ವ್ಯಕ್ತಿಗೆ ಇದರ ಅಗತ್ಯವೂ ಇರಲಿಲ್ಲ, ಇದಕ್ಕೆ ನಾನು ಅರ್ಹನೂ ಅಲ್ಲ ಎಂದು ಸುರೇಶ್ ಭಂಡಾರಿ ಹೇಳಿಕೊಂಡಿದ್ದಾರೆ.
55
ನಿಮ್ಮ ಶೃಂಗಾರದ ಪುರಾತತ್ವ ಪುರಾವೆ ನಮಗೆ ಬೇಡ
ನೀವು ಯಾವುದೇ ಹಿಂಜರಿಕೆ, ಭಯವಿಲ್ಲದೇ ರೊಮಾನ್ಸ್ ಮಾಡಿ. ಪ್ರತಿಯೊಂದು ಕ್ಷಣವನ್ನು ಮನಸಾರೆ ಆನಂದಿಸಿ ಎಂಜಾಯ್ ಮಾಡಿ. ಆದ್ರೆ ದಯವಿಟ್ಟು ನಿಮ್ಮ ಶೃಂಗಾರದ 'ಪುರಾತತ್ವ ಪುರಾವೆಗಳನ್ನು' ನಿಮ್ಮ ಬಳಿ (ಮನೆಯಲ್ಲಿಯೇ) ಇಟ್ಟುಕೊಂಡು ವಿಲೇವಾರಿ ಮಾಡೋದನ್ನು ಕಲಿತುಕೊಳ್ಳಿ. ನಿಮ್ಮ ಗುರಿ ಸರಿಯಾಗಿರಲಿ, ಉತ್ಸಾಹ ಶಾಶ್ವತವಾಗಿರಲಿ. ನಿಮ್ಮ ಮನೆಯ ಕಸ ಸರಿಯಾದ ಕಸದ ಬುಟ್ಟಿಯನ್ನೇ ಸೇರಿಕೊಳ್ಳಲಿ ಎಂದು ಸಲಹೆ ನೀಡಿ ಅಪಾರ ಮೆಚ್ಚುಗೆ, ಅಸೂಯೆ ಮತ್ತು ಸ್ವಲ್ಪ ಬೆನ್ನುನೋವಿನೊಂದಿಗೆ ನಿಮ್ಮ ಸಹ-ನಿವಾಸಿ ಎಂದು ತಮಾಷೆ ಮಾಡಿದ್ದಾರೆ.