ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಜೆಪ್ಟೋ ಡೆಲಿವರಿ ಯುವಕನೊಬ್ಬ ಮಧ್ಯರಾತ್ರಿ ಮಹಿಳೆಯರು ರಹಸ್ಯವಾಗಿ ಏನು ಆರ್ಡರ್ ಮಾಡುವ ಬಗ್ಗೆ ಮಾತನಾಡಿದ್ದಾನೆ. ಈ ವಿಡಿಯೋಗೆ ನೆಟ್ಟಿಗರಿಂದ ಪರ-ವಿರೋಧದ ಚರ್ಚೆಗಳು ವ್ಯಕ್ತವಾಗಿವೆ.
ಜೆಪ್ಟೋ ಡೆಲಿವರಿ ಮಾಡುವ ಯುವಕನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಧ್ಯರಾತ್ರಿ ಗ್ರಾಹಕರು ಹೆಚ್ಚು ಏನು ಆರ್ಡರ್ ಮಾಡ್ತಾರೆ ಎಂಬುದನ್ನು ಯುವಕ ವಿವರಿಸಿದ್ದಾನೆ. @the_deliveryboy81 ಹೆಸರಿನ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಈ ವಿಡಿಯೋ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ.
25
ಯುವಕ ಹೇಳಿದ್ದೇನು?
ರಾತ್ರಿ ನಮಗೆ ಹೆಚ್ಚು ಮಹಿಳೆಯರಿಂದ ಆರ್ಡರ್‌ಗಳು ಬರುತ್ತವೆ. ನಾವು ಆರ್ಡರ್ ರಿಸೀವ್ ಮಾಡಿದ ತಕ್ಷಣ ನಮಗೆ ಕಾಲ್ ಬರುತ್ತದೆ. ಅಣ್ಣಾ, ಬಂದು ಮನೆಯ ಬೆಲ್ ಮಾಡಬೇಡಿ. ಮನೆ ಹತ್ರ ಬರುತ್ತಿದ್ದಂತೆ ಕಾಲ್ ಮಾಡುವಂತೆ ಹೇಳುತ್ತಾರೆ. ಇಷ್ಟು ರಹಸ್ಯವಾಗಿ ರಾತ್ರಿ ಇದೆನ್ನಲ್ಲಾ ಆರ್ಡರ್ ಮಾಡ್ತಾರೆ ಎಂಬುದನ್ನು ಯುವಕ ಹೇಳಿದ್ದಾನೆ.
35
ಏನು ಆರ್ಡರ್ ಮಾಡ್ತಾರೆ?
ರಾತ್ರಿ ಹೆಚ್ಚಾಗಿ ಮಹಿಳೆಯರಿಂದಲೇ ಆರ್ಡರ್ ಬರುತ್ತವೆ. ಇವರೆಲ್ಲಾ ರಾತ್ರಿ ಚಿಪ್ಸ್, ವೇಫರ್ ಸೇರಿದಂತೆ ಕುರುಕಲು ತಿಂಡಿಯನ್ನು ಆರ್ಡರ್ ಮಾಡುತ್ತಾರೆ. ಈ ಎಲ್ಲ ಆಹಾರ ತಿನ್ನಲು ಇವರು ರಾತ್ರಿಯೆಲ್ಲಾ ಕಾಯ್ತಾರೆ. ಒಂದು ರೀತಿ ಕದ್ದು ತಿನ್ನುವಂತೆ ಇವರೆಲ್ಲಾ ಕಾಣಿಸುತ್ತಾರೆ ಎಂದು ಡೆಲಿವರಿ ಬಾಯ್ ಹೇಳಿದ್ದಾನೆ.
ಈ ವಿಡಿಯೋ ನೋಡಿದ ವೀಕ್ಷಕರು, ಕೆಲವೊಮ್ಮೆ ನಿದ್ದೆ ಬರದಿದ್ದಾಗ ಏನಾದ್ರು ತಿನ್ನುವ ಬಯಕೆಯುಂಟಾಗುತ್ತದೆ. ಹಾಗಾಗಿ ಮಹಿಳೆಯರು ಮನೆಗೆಲಸವೆಲ್ಲಾ ಮುಗಿದ್ಮೇಲೆ ತಿಂಡಿ ಆರ್ಡರ್ ಮಾಡುತ್ತಾರೆ. ಕ್ಷಮಿಸಿ ನನ್ನನ್ನು ಬೈಯಬೇಡಿ. ನಾನು ಸಹ ಈ ರೀತಿಯಲ್ಲಿ ರಾತ್ರಿ ಆರ್ಡರ್ ಮಾಡುತ್ತಾರೆ. ಹಾಗಾಗಿ ಬೈದುಕೊಳ್ಳಬೇಡಿ ಎಂದು ಮಹಿಳಾ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಓರ್ವ ಬಳಕೆದಾರು ಇದು ನಮ್ಮ ಸಮಯ. ದಿನವೆಲ್ಲಾ ಕೆಲಸ ಮಾಡಿದ ಬಳಿಕ ನಮಗೆ ಸಿಗುವ ಸಮಯ ಇದಾಗಿದೆ. ಇದು ನಮ್ಮ ವೈಯಕ್ತಿಕ ವಿಷಯ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಕೆಲವರು ರಾತ್ರಿ ಮಲಗುವ ಮುನ್ನ ಇಷ್ಟು ಕುರುಕಲು ತಿಂಡಿ ತಿನ್ನುವ ಅಭ್ಯಾಸ ಒಳ್ಳೆಯದಲ್ಲ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳುಂಟಾಗುತ್ತದೆ ಎಂದು ಸಲಹೆ ನೀಡಿದ್ದಾರೆ.