ವಿದ್ಯಾರ್ಥಿಯೊಬ್ಬ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನದ ಬಗ್ಗೆ ನೀತಾ ಅಂಬಾನಿಯವರನ್ನು ರೋಸ್ಟ್ ಮಾಡಿದ್ದಾನೆ. ಈ ತಮಾಷೆಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿದ್ಯಾರ್ಥಿಯ ಸಮಯಪ್ರಜ್ಞೆ ಮತ್ತು ನೀತಾ ಅಂಬಾನಿಯವರ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ.
ರಿಲಯನ್ಸ್ ಫೌಂಡೇಷನ್ನ ಅಧ್ಯಕ್ಷೆ ನೀತಾ ಅಂಬಾನಿಯವರನ್ನು ವಿದ್ಯಾರ್ಥಿಯೋರ್ವ ರೋಸ್ಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ವ ವಿದ್ಯಾರ್ಥಿಯ ಮಾತುಗಳನ್ನು ಕೇಳಿದ ನೀತಾ ಅಂಬಾನಿ ನಗುತ್ತಲೇ ಮುಖವನ್ನು ಮುಚ್ಚಿಕೊಂಡಿದ್ದಾರೆ. ವಿದ್ಯಾರ್ಥಿ ಮಾತುಗಳಿಗೆ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
25
ಮುಂಬೈ ಇಂಡಿಯನ್ಸ್ ತಂಡ
ಈ ಬಾರಿ ಐಪಿಎಲ್‌ನಲ್ಲಿ ನೀತಾ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನದಲ್ಲಿದೆ. ಆಡಿರುವ 14 ಪಂದ್ಯಗಳಲ್ಲಿ 10ರಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ಆಟದ ವೈಖರಿಗೆ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ನೀತಾ ಅಂಬಾನಿ ಅವರನ್ನು ವಿದ್ಯಾರ್ಥಿ ತಮಾಷೆ ಮಾಡಿದ್ದಾನೆ.
35
ಧೀರುಬಾಯಿ ಅಂಬಾನಿ ಇಂಟರ್‌ನ್ಯಾಷನಲ್ ಶಿಕ್ಷಣ ಸಂಸ್ಥೆ
ಧೀರುಬಾಯಿ ಅಂಬಾನಿ ಇಂಟರ್‌ನ್ಯಾಷನಲ್ ಶಿಕ್ಷಣ ಸಂಸ್ಥೆಯ ಪದವಿ ಪ್ರದಾನ ಮತ್ತು ವಾರ್ಷಿಕ ಸಮಾರಂಭದಲ್ಲಿ ನೀತಾ ಅಂಬಾನಿ ಭಾಗಿಯಾಗಿದ್ದರು. ಈ ವೇಳೆ ಕಷ್ಟದ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ತಿಳಿಸಲು ಮುಂಬೈ ಇಂಡಿಯನ್ಸ್ ತಂಡವನ್ನು ಉದಾಹರಣೆಯನ್ನಾಗಿ ನೀಡುವ ಮೂಲಕ ಗಮನ ಸೆಳೆದರು. ವಿದ್ಯಾರ್ಥಿಯ ಈ ಮಾತುಗಳು ವೇದಿಕೆ ಮೇಲಿದ್ದ ಗಣ್ಯರು ಸೇರಿದಂತೆ ಸಮಾರಂಭದಲ್ಲಿ ಭಾಗಿಯಾಗಿದ್ದ ಎಲ್ಲರನ್ನು ನಗೆಗಡಿಲಿನಲ್ಲಿ ತೇಲುವಂತೆ ಮಾಡಿತು.
ಈ ಚಿಕ್ಕ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದು, ವಿದ್ಯಾರ್ಥಿಯ ಆತ್ಮವಿಶ್ವಾಸ, ಸಮಯಪ್ರಜ್ಞೆ ಮತ್ತು ಹಾಸ್ಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಇಂತಯ ಮಾತುಗಳನ್ನಾಡುವ ತುಂಬಾ ಎಚ್ಚರಿಕೆಯಿಂದಿರಬೇಕು. ಹೇಳುವ ಪದಗಳು ಆಚೀಚೆ ಆದ್ರೂ ದೊಡ್ಡಮಟ್ಟದ ವಿವಾದಕ್ಕೆ ಕಾರಣವಾಗಬಹುದು. ಆದರೂ ಈ ವಿದ್ಯಾರ್ಥಿ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಬೇಕು ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳುತ್ತಿದ್ದಾರೆ.
55
ಶ್ರೀಮಂತ ಮಹಿಳೆ
ನೀತಾ ಅಂಬಾನಿ ದೇಶದ ಶ್ರೀಮಂತ ಮಹಿಳೆಯರ ಪೈಕಿ ಒಬ್ಬರಾಗಿದ್ದು, ಇವರ ಜೀವನಶೈಲಿ ಸದಾ ಚರ್ಚೆಯಲ್ಲಿರುತ್ತದೆ. ಪುತ್ರ ಅನಂತ್ ಅಂಬಾನಿ ಮದುವೆಯಲ್ಲಿ ನೀತಾ ಅಂಬಾನಿ ಧರಿಸಿದ್ದ ಒಂದೊಂದು ಆಭರಣಗಳು ಕೋಟಿ ಕೋಟಿ ಮೌಲ್ಯವನ್ನು ಹೊಂದಿದ್ದವು. ನಿತಾ ಅಂಬಾನಿ ಮಗಳು ಇಶಾ, ರೆಡ್ ಕಾರ್ಪೆಟ್ ಮೇಲಿನ ನಡಿಗೆ ವೈರಲ್ ಆಗಿದ್ದು, ಇವರು ಧರಿಸಿದ ಎಲ್ಲಾ ಆಭರಣಗಳು ತಾಯಿ ನೀಡಿದ್ದು ಎಂದು ಹೇಳಿಕೊಂಡಿದ್ದರು.