ಎಷ್ಟೇ ಪೂಜೆ, ಹರಕೆಗಳನ್ನು ಮಾಡಿದರೂ ಅನೇಕ ಯುವಕ-ಯುವತಿಯರಿಗೆ ಮದುವೆ ವಿಳಂಬವಾಗುತ್ತಿರುತ್ತದೆ. ಆದರೆ, ಇದಕ್ಕೆ ಜಾತಕ ದೋಷಕ್ಕಿಂತ ಮನೆಯಲ್ಲಿನ ವಾಸ್ತು ದೋಷವೇ ಮುಖ್ಯ ಕಾರಣವಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಅವಿವಾಹಿತರು ಮಲಗುವ ಕೋಣೆಯ ದಿಕ್ಕು ಅವರ ವಿವಾಹದ ಮೇಲೆ ನೇರ ಪರಿಣಾಮ ಬೀರುತ್ತದೆ.
ಇಂದು ಮದುವೆ ಸಹವಾಸ ಸಾಕಪ್ಪಾ ಎನ್ನುವ ಒಂದಷ್ಟು ಯುವಕ-ಯುವತಿಯರು ಇದ್ದರೆ, ಮತ್ತೊಂದಿಷ್ಟು ಮಂದಿಗೆ ಎಷ್ಟೇ ಪ್ರಯತ್ನ ಪಟ್ಟರೂ ಮದುವೆಯೇ ಆಗುತ್ತಿರುವುದಿಲ್ಲ. ಯುವಕರು ಇದ್ದರೂ ಯುವತಿ ಸಿಗ್ತಿಲ್ಲ, ಯುವತಿಯರು ಇದ್ದರೂ ಯುವಕರು ಸಿಕ್ತಿಲ್ಲ ಎನ್ನುವ ಕೊರಗು ಇದ್ದೇ ಇದೆ. ವಯಸ್ಸಾಗುತ್ತಾ ಬಂದರೂ ಮದುವೆ ಆಗುವುದೇ ಇಲ್ಲ. ಇಂದಿನ ಯುವತಿಯರ ಡಿಮಾಂಡ್ ಕೇಳಿದ್ರೆ ಮದುವೆನೇ ಬೇಡ ಎಂದು ಅದೆಷ್ಟೋ ಯುವಕರು ಹೇಳ್ತಿದ್ರೆ, ಹುಡುಗನಿಗೆ ಸಿಕ್ಕಾಪಟ್ಟೆ ಸಂಬಳ ಇದ್ದರೂ, ನನ್ನ ದುಡಿಮೆ ಕೇಳ್ತಾನೆ ಎನ್ನುವುದು ಬಹಳಷ್ಟು ಯುವತಿಯರ ಅಳಲು.
25
ಏನು ಮಾಡಿದ್ರೂ ಮದ್ವೆ ಆಗಲ್ಲ
ಮದುವೆಗಾಗಿ ಮನೆಯಲ್ಲಿ ಅಪ್ಪ-ಅಮ್ಮ ಪೂಜೆ, ಹೋಮ- ಹವನ ಮಾಡಿಸ್ತಾರೆ. ಕಂಡ ಕಂಡ ದೇವರ ಮೊರೆ ಹೋಗ್ತಾರೆ. ಜಾತಕದಲ್ಲಿ ದೋಷ ಇದೆ ಎಂದು ಪುರೋಹಿತರು, ಜ್ಯೋತಿಷಿಗಳು ಹೇಳಿದ ಮಾತಿನಂತೆ ಏನೇನೋ ಹರಕೆ ತೀರಿಸುತ್ತಾರೆ. ಮನೆ ದೇವರು, ಕುಲ ದೇವರು ಎಂದೆಲ್ಲಾ ಹರಕೆ ಹೊತ್ತುಕೊಳ್ಳುತ್ತಾರೆ, ಉರುಳು ಸೇವೆ ಮಾಡುತ್ತಾರೆ. ಹೂಂ, ಹೂಂ. ಏನು ಮಾಡಿದರೂ ಎಷ್ಟೋ ಸಂದರ್ಭದಲ್ಲಿ ಮದುವೆ ಆಗುವುದೇ ಇಲ್ಲ. ಅಷ್ಟಕ್ಕೂ ಕಂಕಣ ಭಾಗ್ಯ ಕೂಡಿ ಬಂದಾಗ ಅದನ್ನು ತಡೆಯಲು ಆಗುವುದಿಲ್ಲ. ಕಂಕಣ ಭಾಗ್ಯ ಬರುವವರೆಗೆ ಏನೇ ಪ್ರಯತ್ನ ಮಾಡಿದರೂ ಮದುವೆ ಆಗುವುದಿಲ್ಲ ಎನ್ನುವ ಮಾತು ಕೂಡ ಇದೆ.
35
ಮನೆಯಲ್ಲಿನ ಚಿಕ್ಕ ದೋಷ
ಇವೆಲ್ಲವುಗಳ ಹೊರತಾಗಿ, ಮನೆಯಲ್ಲಿನ ಒಂದು ಚಿಕ್ಕ ದೋಷದಿಂದ ಮದುವೆಯಲ್ಲಿ ವಿಳಂಬ ಆಗುವ ಸಾಧ್ಯತೆ ಹೆಚ್ಚು ಎನ್ನುವುದು ವಾಸ್ತು ಶಾಸ್ತ್ರಜ್ಞರ ಮಾತು. ಮದುವೆಯ ವಿಷಯವನ್ನು ನೋಡುವುದಾದರೆ ಮನೆಯಲ್ಲಿನ ಸೌತ್ ವೆಸ್ಟ್ (South West) ಅಂದರೆ ನೈಋತ್ಯ ದಿಕ್ಕನ್ನು ನೋಡಲಾಗುತ್ತದೆ. ಅದೆಷ್ಟೋ ಮನೆಗಳಲ್ಲಿ ಈ ಮೂಲೆಯಲ್ಲಿ ಬೆಡ್ರೂಮ್ ಇದ್ದರೆ ಅಲ್ಲಿ ಮದುವೆಯಾಗದೇ ಇರುವವರು ಮಲಗಿದರೆ, ಅವರಿಗೆ ಮದುವೆಯಲ್ಲಿ ಸಿಕ್ಕಾಪಟ್ಟೆ ವಿಳಂಬವಾಗುತ್ತದೆ. ಏಕೆಂದರೆ, ಈ ಕೋಣೆ ಇರುವುದು ಮನೆಯ ಹಿರಿಯರು ಅರ್ಥಾತ್ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವವರು, ಎಲ್ಲಾ ಜವಾಬ್ದಾರಿ ವಹಿಸಿಕೊಳ್ಳುವವರು ಇಲ್ಲಿ ಮಲಗಬೇಕು.
ಇನ್ನು, ಅವಿವಾಹಿತ ಹೆಣ್ಣುಮಕ್ಕಳಾಗಿದ್ದರಂತೂ ಈಶಾನ್ಯ ಮೂಲೆ ಅಂದರೆ North East ಬೆಡ್ರೂಮ್ನಲ್ಲಿ ಮಲಗಲೇಬಾರದು. ಹೀಗೆ ಮಲಗುವ ಹೆಣ್ಣುಮಕ್ಕಳಿಗೆ ಮದುವೆಯಾಗುವುದೇ ಕಷ್ಟ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಇಲ್ಲಿ ಚಿಕ್ಕ ಮಕ್ಕಳನ್ನು ಮಲಗಿಸಬಹುದು ಅಷ್ಟೇ.
55
ಹಾಗಿದ್ದರೆ ಎಲ್ಲಿ ಮಲಗಬೇಕು?
ವಾಸ್ತು ಶಾಸ್ತ್ರದ ಪ್ರಕಾರ, ಅವಿವಾಹಿತ ಮಕ್ಕಳಿಗೆ ಸೂಕ್ತವಾದ, ಅತ್ಯಂತ ಸೂಕ್ತವಾದ ಮಲಗುವ ಕೋಣೆ ವಾಯವ್ಯ (North West) ಮೂಲೆಯಾಗಿದೆ, ಏಕೆಂದರೆ ಇದು ಉತ್ತಮ ಆರೋಗ್ಯ, ಶಿಕ್ಷಣ ಮತ್ತು ವಿವಾಹದ ನಿರೀಕ್ಷೆಗಳನ್ನು ಉತ್ತೇಜಿಸುತ್ತದೆ. ಪರ್ಯಾಯವಾಗಿ, ಪೂರ್ವ ಅಥವಾ ಪಶ್ಚಿಮದ ಕೊಠಡಿಗಳು ಚಿಕ್ಕ ಮಕ್ಕಳಿಗೆ ಸೂಕ್ತವಾಗಿವೆ. ಮಕ್ಕಳು ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಹಾಕಿ ಮಲಗುವಂತೆ ಹಾಸಿಗೆಯನ್ನು ಇಡಬೇಕು.