ಮನಸ್ಸಿಗೆ ಶಾಂತಿ, ಮನೆಗೆ ಸಕಾರಾತ್ಮಕ ಶಕ್ತಿ ನೀಡುವ ಬಿಳಿ ಬಣ್ಣ

First Published | Dec 12, 2020, 10:28 AM IST

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ಮನೆಗಳ ಬಗ್ಗೆ ನೀವು ಎಂದಾದರೂ ಗಮನ ಹರಿಸಿದ್ದೀರಾ? ಇವೆಲ್ಲವೂ ಹೆಚ್ಚಾಗಿ ಬಿಳಿ ಗೋಡೆಗಳನ್ನು ಹೊಂದಿವೆ!  ಬಿಳಿ ಗೋಡೆಗಳು ಮನೆಯ ಒಳಾಂಗಣ ಸೌಂದರ್ಯವನ್ನು ಹೆಚ್ಚಿಸುತ್ತವೆ. ಬಿಳಿ ಬಣ್ಣವು ಉತ್ತಮ, ಸೊಗಸಾದ ಮತ್ತು ಅತ್ಯಂತ ಸುಂದರವಾಗಿ  ಕಾಣುತ್ತದೆ.  ಏಕೆಂದರೆ ಇತರ  ಬಣ್ಣವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಆದರೆ ಬಿಳಿ ಬಣ್ಣ ಕ್ಲಾಸ್ ಲುಕ್ ನೀಡುತ್ತದೆ. 

ಯಾವೆಲ್ಲಾ ಕಾರಣಕ್ಕಾಗಿ ಮನೆಗೆ ಹೆಚ್ಚಾಗಿ ಬಿಳಿ ಬಣ್ಣವನ್ನು ಬಳಿಯುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಇಲ್ಲ ಎಂದಾದ್ರೆ ಓದಿ... ಮನೆಗೆ ಬಿಳಿ ಬಣ್ಣ ಹಚ್ಚುವ ಬಗ್ಗೆ ಮಾಹಿತಿ ಇಲ್ಲಿದೆ...
ಬಿಳಿ ಬಣ್ಣವು ಶುದ್ಧತೆ, ಸೊಬಗು ಮತ್ತು ಸಕಾರಾತ್ಮಕತೆಗೆ ಸಮಾನಾರ್ಥಕವಾಗಿದೆ. ಬಿಳಿ ಬಣ್ಣವು ಪರಿಪೂರ್ಣತೆಯನ್ನು ಸೂಚಿಸುತ್ತದೆ! ಬಿಳಿ ಗೋಡೆಗಳು ನಿಮ್ಮ ಕಲ್ಪನೆಯ ಕ್ಯಾನ್ವಾಸ್ ಆಗುತ್ತವೆ, ಅದರಲ್ಲಿ ನೀವು ಇಂಟೀರಿಯರ್ ಡೆಕೋರೇಟರ್ ಮೂಲಕ ಚಂದವಾದ ಚಿತ್ರಗಳನ್ನು ತುಂಬಬಹುದು.ಆದರೆ ಬಿಳಿ ಗೋಡೆಗಳ ಹೊಳಪನ್ನು ಕಾಪಾಡಿಕೊಳ್ಳಲು, ಹೆಚ್ಚು ಶ್ರಮ ಮತ್ತು ಹೂಡಿಕೆ ಬೇಕಾಗುತ್ತದೆ.
Tap to resize

ಕ್ಯಾನ್ವಾಸ್ ನಂತಹ ದೊಡ್ಡ ಬಿಳಿ ಗೋಡೆಯ ಮೇಲೆ ಒಂದೇ ಚೌಕಟ್ಟಿನ ಮೇರುಕೃತಿ ಚಿತ್ರಕಲೆ ಕೂಡ ಬಣ್ಣದ ಗೋಡೆಗಿಂತ ಹೆಚ್ಚು ಅದ್ಭುತವಾಗಿ ಕಾಣುತ್ತದೆ. ನಿಮ್ಮ ಅಲಂಕಾರಕ್ಕಾಗಿ ನೀವು ರಚಿಸಲು ಬಯಸುವ ಹಿನ್ನೆಲೆಗೆ ಬಿಳಿ ಗೋಡೆಗಳು ಸಾಕಷ್ಟು ಒತ್ತು ನೀಡುತ್ತವೆ. ಜೊತೆಗೆ ನೀವು ಮಾಡಿದ ಚಿತ್ರ ಎದ್ದು ಕಾಣುವಂತೆ ಮಾಡುತ್ತದೆ.
ಬಿಳಿ ಬಣ್ಣವು ಎಲ್ಲಾ ಬಣ್ಣಗಳನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ, ದೀಪಗಳ ನೆರಳು ಮತ್ತು ದೀಪಗಳನ್ನು ಬಿಳಿ ಗೋಡೆಗಳ ಮೇಲೆ ಅತ್ಯುತ್ತಮವಾಗಿ ತೋರಿಸಲಾಗುತ್ತದೆ. ಇದರಿಂದ ಮನೆಯೊಳಗೇ ಅದ್ಭುತವಾಗಿ ಬೆಳಕು ಹರಿಯುತ್ತದೆ.
ಲಿವಿಂಗ್ ರೂಮ್ ಗೆ ಬಿಳಿ ಬಣ್ಣ ಬಳಿಯಿರಿ. ಇದು ಸಂಬಂಧಗಳನ್ನು ಬೆಸೆಯುವ ತಾಣವಾಗಿರುವುದರಿಂದ ಬಿಳಿ ಬಣ್ಣವು ಮನೆಯವರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ದೇವರ ಕೋಣೆಗೂ ನೀವು ಬಿಳಿ ಬಣ್ಣವನ್ನು ಹಚ್ಚಿದರೆ ಉತ್ತಮ. ಯಾಕೆಂದರೆ ಇಲ್ಲಿ, ಧ್ಯಾನ, ಭಕ್ತಿ ಪೂಜೆ ಮಾಡಲಾಗುತ್ತದೆ. ಈ ಸಮಯದಲ್ಲಿ ಮನಸಿಗೆ ಶಾಂತಿ ನೀಡಲು ಬಿಳಿ ಬಣ್ಣ ಉತ್ತಮ.
ಬಣ್ಣ ಬಣ್ಣದ ಪೈಂಟ್ ಗೋಡೆಗೆ ಹಚ್ಚಿದರೆ ಅದರ ಎದುರು ಇಡುವಂತಹ ವಸ್ತು ಹೆಚ್ಚು ಆಕರ್ಷಕವಾಗಿ ಕಾಣುವುದಿಲ್ಲ. ಆದ್ರೆ ಬಿಳಿ ಬಣ್ಣದ ಪೈಂಟ್ ಮಾಡಿದ್ದರೆ ಅದರ ಮುಂದೆ ನೀವು ಯಾವುದೇ ರೀತಿಯ ವಿಂಟೇಜ್ ವಸ್ತುಗಳನ್ನು ಇಟ್ಟರೆ ಅದು ಅದ್ಭುತವಾಗಿ ಕಾಣುತ್ತದೆ.
ಬಣ್ಣವು ಶುದ್ಧತೆಯ ಪ್ರತೀಕವಾದುದರಿಂದ ಬಿಳಿ ಗೋಡೆಗಳು ಮನೆಗೆ ಅತ್ಯಂತ ‘ಉತ್ತಮ’ ಮತ್ತು ‘ಅಚ್ಚುಕಟ್ಟಾದ’ ಲುಕ್ ನೀಡುತ್ತವೆ. ಇದು ನೈಸರ್ಗಿಕ ಬೆಳಕಿನ ಪ್ರತಿಫಲಕವಾಗಿದ್ದು, ಕೊಠಡಿಗಳಿಗೆ ಸಾಕಷ್ಟು ಬೆಳಕನ್ನು ಒದಗಿಸುತ್ತದೆ.
ಕನಿಷ್ಠ ಡಿಸೈನ್ ಜನಪ್ರಿಯತೆಯು ಇತ್ತೀಚಿನ ಟ್ರೆಂಡಿಂಗ್ ಆಗಿದೆ. ಬಿಳಿ ಗೋಡೆಗಳು ಅದಕ್ಕೆ ಸೂಕ್ತವಾದ ಹಿನ್ನೆಲೆಯನ್ನು ಒದಗಿಸುತ್ತದೆ. ಬಿಳಿ ಬಣ್ಣವು ಗೋಡೆಗಳನ್ನು ಅಲಂಕಾರಿಕವಾಗಿ ಅಚ್ಚುಕಟ್ಟಾಗಿ ಕಾಣುವಂತೆ ಮಾಡುತ್ತದೆ. ಹೀಗಾಗಿ, ಆಧುನಿಕ ಮನೆಗೂ ಬಿಳಿ ಗೋಡೆಗಳು ಪರಿಪೂರ್ಣ ಆಯ್ಕೆಯಾಗಿದೆ.
ಬಿಳಿ ಗೋಡೆಗಳನ್ನು ಹೊಂದುವ ಉತ್ತಮ ಭಾಗವೆಂದರೆ, ಕಲಾಕೃತಿಗಳು, ದೀಪಗಳು ಅಥವಾ ಇತರ ಅಲಂಕಾರಿಕ ವಸ್ತುಗಳ ಮೂಲಕ ನಿಮ್ಮ ಕೋಣೆಗೆ ಯಾವುದೇ ರೀತಿಯ ಬಣ್ಣವನ್ನು ಸೇರಿಸಲು ನೀವು ಬಯಸಿದರೆ, ನೀವು ಸುಲಭವಾಗಿ ಸೇರಿಸಬಹುದು
ಬಿಳಿ ಗೋಡೆಗಳನ್ನು ಹೊಂದಿರುವ ದೊಡ್ಡ ಅನುಕೂಲವೆಂದರೆ ಅದು ಕೋಣೆಯನ್ನು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ಡಾರ್ಕ್ ಬಣ್ಣದ ಗೋಡೆಗಳು ಕೋಣೆಯು ಚಿಕ್ಕದಾಗಿಚಿಕ್ಕದಾಗಿ ಕಾಣುವಂತೆ ಮಾಡುತ್ತದೆ.

Latest Videos

click me!