ಕೆನ್ನೆಗಳಲ್ಲಿ ಡಿಂಪಲ್ ಇದೆಯಾ? ಸಾಮಾನ್ಯ ವಿಷಯವಲ್ಲ... ಇಂತಹವರ ವ್ಯಕ್ತಿತ್ವವೇ ತುಂಬಾ ವಿಶೇಷ!

Published : Sep 04, 2026, 06:35 PM IST

Samudrika Shastra: ಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ದೇಹದ ಆಕಾರವು ಅವರ ಸ್ವಭಾವ, ನಡವಳಿಕೆ ಮತ್ತು ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಬಹಿರಂಗಪಡಿಸುತ್ತದೆ. ಅವರ ಕೆನ್ನೆಗಳ ಮೇಲಿನ ಡಿಂಪಲ್ ಸಹ ಬಹಳಷ್ಟು ವಿಷ್ಯಗಳನ್ನು ಬಹಿರಂಗಪಡಿಸುತ್ತವೆ. ನಿಮ್ಮ ಡಿಂಪಲ್ ನಿಮ್ಮ ಬಗ್ಗೆ ಏನು ಹೇಳುತ್ತೆ ನೋಡೋಣ.

PREV
16
ಕೆನ್ನೆಯ ಡಿಂಪಲ್ ಕೂಡ ಹೇಳುತ್ತವೆ ಹಲವು ಸಂಗತಿಗಳು!

ಮುಖದ ವಿವಿಧ ಅಂಗಗಳ ಆಕಾರ ಮತ್ತು ದೇಹದ ಮೇಲಿರುವ ವಿಶೇಷ ಗುರುತುಗಳ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ನಡವಳಿಕೆ ಹಾಗೂ ವ್ಯಕ್ತಿತ್ವದ ಬಗ್ಗೆ ಹಲವು ನಂಬಿಕೆಗಳನ್ನು ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ನಗುವಾಗ ಕೆನ್ನೆಯಲ್ಲಿ ಕಾಣಿಸಿಕೊಳ್ಳುವ ಸಣ್ಣ ಗುಳಿ ಅಥವಾ ಡಿಂಪಲ್‌ಗೂ ವಿಶೇಷ ಮಹತ್ವವಿದೆ. ಡಿಂಪಲ್‌ ಮುಖದ ಸೌಂದರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲ, ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವದ ಕುರಿತೂ ಕೆಲವು ಸೂಚನೆಗಳನ್ನು ನೀಡುತ್ತವೆ.

26
ಆಕರ್ಷಕವಾಗಿರುತ್ತದೆ ವ್ಯಕ್ತಿತ್ವ

ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೆನ್ನೆಗಳಲ್ಲಿ ಡಿಂಪಲ್ ಇರುವವರ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ. ತಮ್ಮ ನಗು ಮತ್ತು ಉತ್ತಮ ನಡವಳಿಕೆಯಿಂದ ಇವರು ಎದುರಿನವರ ಮೇಲೆ ಬೇಗನೆ ಪ್ರಭಾವ ಬೀರುತ್ತಾರೆ. ಜನಸಮೂಹದಲ್ಲಿದ್ದರೂ ತಮ್ಮದೇ ಆದ ವಿಶೇಷ ಗುರುತನ್ನು ಮೂಡಿಸಿಕೊಳ್ಳುವ ಗುಣ ಇವರಲ್ಲಿರುತ್ತದೆ ಮತ್ತು ಜನರು ಇವರತ್ತ ಸುಲಭವಾಗಿ ಆಕರ್ಷಿತರಾಗುತ್ತಾರೆ.

36
ಸ್ವಭಾವತಃ ಬೆರೆಯುವ ಗುಣದವರು

ಡಿಂಪಲ್ ಇರುವವರನ್ನು ಸಾಮುದ್ರಿಕ ಶಾಸ್ತ್ರದಲ್ಲಿ ಸಾಮಾನ್ಯವಾಗಿ ಸರಳ, ಸ್ನೇಹಪರ ಮತ್ತು ಸುಲಭವಾಗಿ ಬೆರೆಯುವ ಸ್ವಭಾವದವರು ಎಂದು ಹೇಳಲಾಗಿದೆ. ಇವರು ಹೊಸ ಜನರೊಂದಿಗೆ ಮಾತನಾಡಲು ಹೆಚ್ಚು ಸಂಕೋಚಪಡುವುದಿಲ್ಲ. ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಉತ್ತಮ ಹೊಂದಾಣಿಕೆ ಮತ್ತು ಸ್ನೇಹವನ್ನು ಬೆಳೆಸಲು ಪ್ರಯತ್ನಿಸುತ್ತಾರೆ.

46
ಸೂಕ್ಷ್ಮ ಮನಸ್ಸಿನ ಮತ್ತು ಭಾವನಾತ್ಮಕ ವ್ಯಕ್ತಿಗಳು

ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೆನ್ನೆಗಳಲ್ಲಿ ಡಿಂಪಲ್ ಇರುವವರು ತುಂಬಾ ಸೂಕ್ಷ್ಮ ಮನಸ್ಸಿನ ಮತ್ತು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ. ಇವರು ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ ಮತ್ತು ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಜೊತೆಗೆ ಕಲೆ ಹಾಗೂ ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ಇವರಿಗೆ ವಿಶೇಷ ಆಸಕ್ತಿ ಇರಬಹುದು ಎಂಬ ನಂಬಿಕೆಯೂ ಇದೆ.

56
ಅದೃಷ್ಟವಂತರಾಗಿರುತ್ತಾರೆ

ಸಾಮುದ್ರಿಕ ಶಾಸ್ತ್ರದಲ್ಲಿ ಕೆನ್ನೆಗಳಲ್ಲಿ ಡಿಂಪಲ್ ಇರುವುದು ಅದೃಷ್ಟದ ಸಂಕೇತ. ಇದನ್ನು ಶುಭ ಸೂಚನೆ ಎನ್ನಲಾಗುತ್ತದೆ ಮತ್ತು ಇಂತಹವರು ಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆ ಹೆಚ್ಚು . ಕಷ್ಟದ ಪರಿಸ್ಥಿತಿಗಳಲ್ಲಿಯೂ ಉತ್ತಮ ಅವಕಾಶಗಳನ್ನು ಹುಡುಕುವ ಸಾಮರ್ಥ್ಯ ಹೊಂದಿದ್ದು, ಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ.

66
ಸಂಬಂಧಗಳಲ್ಲಿ ಸದಾ ಜೊತೆಯಾಗಿರುತ್ತಾರೆ

ಕೆನ್ನೆಗಳಲ್ಲಿ ಡಿಂಪಲ್ ಇರುವವರು ಸಂಬಂಧಗಳ ವಿಷಯದಲ್ಲಿ ತುಂಬಾ ಭಾವನಾತ್ಮಕ ಮತ್ತು ಪ್ರೀತಿಪರರಾಗಿರುತ್ತಾರೆ. ಇವರು ತಮ್ಮ ಸಂಗಾತಿ ಮತ್ತು ಕುಟುಂಬದ ಬಗ್ಗೆ ಗಂಭೀರವಾದ ಕಾಳಜಿ ಹೊಂದಿರುತ್ತಾರೆ. ಪ್ರತಿಯೊಂದು ಸಂದರ್ಭದಲ್ಲಿಯೂ ಕುಟುಂಬ ಮತ್ತು ಆತ್ಮೀಯರ ಜೊತೆ ನಿಲ್ಲಲು ಪ್ರಯತ್ನಿಸುತ್ತಾರೆ. ಅಗತ್ಯವಿದ್ದಾಗ ಸ್ನೇಹಿತರು ಮತ್ತು ಆಪ್ತರಿಗೆ ಸಹಾಯ ಮಾಡಲು ಮುಂದಾಗುತ್ತಾರೆ.

Read more Photos on
click me!

Recommended Stories