ಕುಬೇರನಿಗೆ ಪ್ರಿಯವಾದ ಸಸ್ಯವನ್ನು ಮನೆಯಲ್ಲಿ ಬೆಳೆಸುವುದರಿಂದ ಆಗುವ ಪ್ರಯೋಜನಗಳನ್ನು ಈ ಲೇಖನ ವಿವರಿಸುತ್ತದೆ. ಈ ಸಸ್ಯವನ್ನು ಮನೆಯ ಯಾವ ದಿಕ್ಕಿನಲ್ಲಿಟ್ಟರೆ ಸಂಪತ್ತು, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಹಾಗೂ ಕುಟುಂಬದಲ್ಲಿ ಸಾಮರಸ್ಯ ನೆಲೆಸುತ್ತದೆ ಎಂಬುದನ್ನು ತಿಳಿಸಲಾಗಿದೆ.
ಮನೆ ಆವರಣ ಅಥವಾ ಹೊರಾಂಗಣದಲ್ಲಿರುವ ಸಸ್ಯ/ಗಿಡಗಳು ಕೇವಲ ಸೌಂದರ್ಯಕ್ಕಾಗಿ ಮಾತ್ರವಲ್ಲ. ವಾಸ್ತುಶಾಸ್ತ್ರದಲ್ಲಿ ಪ್ರತಿಯೊಂದು ಸಸ್ಯಕ್ಕೆ ವಿಶೇಷ ಮಹತ್ವವಿದೆ. ಮನೆಯಲ್ಲಿ ಸಕಾರಾತ್ಮಕ ಅಂಶಕ್ಕಾಗಿ ವಾಸ್ತುಶಾಸ್ತ್ರದ ಪ್ರಕಾರ, ಸಸ್ಯಗಳನ್ನಡಬೇಕು. ಇಂದು ನಾವು ಹೇಳುತ್ತಿರುವ ಪ್ಲಾಂಟ್ ಕುಬೇರದೇವನಿಗೆ ಅತ್ಯಂತ ಪ್ರಿಯವಾದದ್ದು ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
25
ಇದು ಮನಿಪ್ಲಾಂಟ್ ಅಲ್ಲ
ಕುಬೇರಾಕ್ಷಿ ಎಂದು ಕರೆಯಲ್ಪಡುವ ಈ ಸಸ್ಯ ಮನೆಯಲ್ಲಿದ್ರೆ ಸಂಪತ್ತು, ಸಮೃದ್ಧಿ ಜೊತೆ ಅದೃಷ್ಟವೂ ನಿಮ್ಮ ಜೊತೆಯಲ್ಲಿರುತ್ತದೆ. ಈ ಸಸ್ಯ ಮನಿ ಪ್ಲಾಂಟ್‌ನಂತೆ ಸಂಪತ್ತು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ. ಇದನ್ನು ಅದೃಷ್ಟದ ಸಸ್ಯ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಯಾವುದು ಈ ಸಸ್ಯ ಎಂದು ನೋಡೋಣ ಬನ್ನಿ.
35
ಜೇಡ್ ಸಸ್ಯ
ವಾಸ್ತು ಪ್ರಕಾರ, ಜೇಡ್ ಸಸ್ಯವನ್ನು ಮನೆಯ ಸೂಕ್ತ ಸ್ಥಳದಲ್ಲಿಟ್ರೆ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ. ಜೇಡ್ ಸಸ್ಯ ಬೆಳೆಸೋದರಿಂದ ಮನೆಯಲ್ಲಿ ಶಾಂತಿ ಮತ್ತು ಆರ್ಥಿಕ ಸಮೃದ್ಧಿಯುಂಟಾಗುತ್ತದೆ. ಈ ಜೇಡ್ ಸಸ್ಯವನ್ನು ಮನೆಯ ಉತ್ತರ ದಿಕ್ಕಿನಲ್ಲಿಟ್ಟು ಬೆಳೆಸಬೇಕು. ಉತ್ತರ ದಿಕ್ಕು ಕುಬೇರನಿಗೆ ಸಂಬಂಧಿಸಿದ್ದಾಗಿದೆ. ಆದಷ್ಟು ಸೂರ್ಯನ ಬೆಳಕು ಬೀಳುವ ಜಾಗದಲ್ಲಿಡಲು ಪ್ರಯತ್ನಿಸಿ ಅಥವಾ ಬೆಳಗ್ಗೆ ಮನೆ ಹೊರಗೆ ಕೆಲ ಸಮಯ ಸೂರ್ಯನ ಬೆಳಕಿನಲ್ಲಿಡಿ. ಎಲೆಗಳ ಮೇಲೆ ಧೂಳು ಸಂಗ್ರಹವಾಗದಂತೆ ನೋಡಿಕೊಳ್ಳಿ.
ವೃತ್ತಿ, ವ್ಯವಹಾರದಲ್ಲಿ ಪ್ರಗತಿ ಕಾಣಲು ಮನೆಯಲ್ಲಿ ಜೇಡ್ ಸಸ್ಯ ಬೆಳೆಸಿ. ವಾಸ್ತು ತತ್ವಶಾಸ್ತ್ರದ ಪ್ರಕಾರ, ಉತ್ತರ ಮತ್ತು ಪೂರ್ವ ದಿಕ್ಕು ಜೇಡ್ ಬೆಳೆವಣಿಗೆಗೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಈ ಗಿಡ ಒಣಗದಂತೆ ನೋಡಿಕೊಳ್ಳೋದು ಸಹ ಅತ್ಯಂತ ಮುಖ್ಯವಾಗುತ್ತದೆ. ಕುಟುಂಬ ಸದಸ್ಯರು ಜೊತೆಯಾಗಿ ಹೆಚ್ಚು ಸಮಯ ಕಳೆಯುವ ಸ್ಥಳದಲ್ಲಿಯೂ ಜೇಡ್ ಪಾಟ್ ಇಟ್ಟುಕೊಳ್ಳಬಹುದಾಗಿದೆ. ಹೀಗೆ ಮಾಡೋದರಿಂದ ಕುಟುಂಬ ಸದಸ್ಯರ ನಡುವೆ ಪ್ರೀತಿ, ಸಾಮರಸ್ಯ ಹೆಚ್ಚಾಗುತ್ತದೆ.
55
ಈ ಸ್ಥಳಗಳಲ್ಲಿ ಇರಿಸಬೇಡಿ
ಈ ಸಸ್ಯವನ್ನು ಮಲಗುವ ಕೋಣೆ, ಸ್ನಾನಗೃಹ, ಶೌಚಾಲಯ ಅಥವಾ ಅಡುಗೆಮನೆಯಲ್ಲಿಡಬಾರದು. ಈ ಸಸ್ಯವನ್ನು ಸಾಕಷ್ಟು ಗಾಳಿ ಮತ್ತು ಬೆಳಕನ್ನು ಪಡೆಯುವ ಮತ್ತು ನಿಯಮಿತವಾಗಿ ಆರೈಕೆ ಮಾಡಬಹುದಾದ ಸ್ಥಳದಲ್ಲಿ ಇಡುವುದು ಉತ್ತಮ. ಸಂಪತ್ತು ಮತ್ತು ಅದೃಷ್ಟದೊಂದಿಗೆ ಈ ಸಸ್ಯವನ್ನು ಹೋಲಿಕೆ ಮಾಡುವ ಕಾರಣ, ಇದನ್ನು ಶುಭಕರ ಎಂದು ಉಲ್ಲೇಖಿಸಲಾಗುತ್ತದೆ.
ಇದಕ್ಕೆ ಪದೇ ಪದೇ ನೀರು ಹಾಕುವ ಅಗತ್ಯವಿಲ್ಲ. ಮಣ್ಣು ಒಣಗಿದಾಗ ನೀರು ಹಾಕಬೇಕು.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.