ಕಳೆದ ವರ್ಷ ಪೂರ್ತಿಯಾಗಿ ನೆಗೆಟಿವಿಯಲ್ಲೇ ಕಳೆದು ಹೋಯಿತು, ಕೊರೋನಾ, ಕೆಲಸ ಕಳೆದುಕೊಳ್ಳುವಿಕೆ, ಅಶಾಂತಿ, ನೆಮ್ಮದಿ ಇಲ್ಲದೇ ಹಲವು ಜನ ಮಾನಸಿಕವಾಗಿ ಕುಗ್ಗಿದರು. ಈ ವರ್ಷ ಸುಖಮಯವಾಗಿರಲು ತಪ್ಪದೇ ವಾಸ್ತು ನಿಯಮಗಳನ್ನು ನಿಮ್ಮದಾಗಿಸಿ.
ಮನೆಯ ಸ್ವಚ್ಛತೆ: ಈ ವರ್ಷ ಮನೆಯ ಸ್ವಚ್ಛತೆಗೆ ವಿಶೇಷ ಗಮನ ನೀಡಿ. ಅದರಲ್ಲೂ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಟ್ಟು ಕೊಳ್ಳುವುದು ಮುಖ್ಯ. ಜೊತೆಗೆ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ ಚಿಹ್ನೆ ಇರುವಂತೆ ನೋಡಿಕೊಳ್ಳಿ.
ಈ ಶುಭ ವಸ್ತುಗಳನ್ನು ಮನೆಗೆ ತನ್ನಿ: ಮನೆಯ ಆಗ್ನೇಯ ದಿಕ್ಕಿನಲ್ಲಿ ಹರಳಿನ ಉಂಡೆಯನ್ನು ಇರಿಸಿದರೆ ಒಳ್ಳೆಯದು. ಒಂದು ಲೋಹದ ಅಥವಾ ಬೆಳ್ಳಿಆನೆಯನ್ನು ಮನೆಯಲ್ಲಿ ಇಡಬಹುದು. ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಿಸಲು ಈ ವಸ್ತುಗಳು ಕೆಲಸ ಮಾಡುತ್ತದೆ.
ತುಳಸಿ ಅಥವಾ ಮನಿ ಪ್ಲಾಂಟ್: ಯಾವುದೇ ಒಳಾಂಗಣ ಗಿಡವನ್ನು ಮನೆಯಲ್ಲಿಟ್ಟರೆ ಒಳ್ಳೆಯದು. ತುಳಸಿ ಗಿಡಗಳನ್ನು ಅಥವಾ ಮನಿ ಪ್ಲಾಂಟ್ ಕೂಡ ನೆಡಬಹುದು. ಈ ಸಸ್ಯಗಳು ಮನೆಯಲ್ಲಿ ಇರುವುದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗಿದೆ.
ಪರ್ಸ್ ಖಾಲಿ ಮಾಡಬೇಡಿ: ಪರ್ಸ್ ಅಥವಾ ವಾಲೆಟ್ ನಲ್ಲಿ ಸ್ವಲ್ಪ ಹಣ ಇಡಿ. ಪರ್ಸ್ ಖಾಲಿಯಾಗಿ ಉಳಿಯುವುದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ವಾಲೆಟ್ ಅಥವಾ ಕಪಾಟಿನ ಬಳಿ ಸುಗಂಧ ದ್ರವ್ಯ ಅಥವಾ ಪೊರಕೆಯನ್ನು ಎಂದೂ ಇಡಬಾರದು.
ಲಾಫಿಂಗ್ ಬುದ್ಧ: ಲಾಫಿಂಗ್ ಬುದ್ಧನನ್ನು ಮನೆಗೆ ತರರುವುದು ಹೊಸ ವರ್ಷದ ಹುಮ್ಮಸ್ಸನ್ನು ಹೆಚ್ಚಿಸುತ್ತದೆ. ಲಾಫಿಂಗ್ ಬುದ್ಧ ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿರಲಿ. ಮನೆಯಲ್ಲಿ ಅದನ್ನು ಇಟ್ಟುಕೊಳ್ಳುವುದರಿಂದ ಹಣ ಕಡಿಮೆ ಆಗುವುದಿಲ್ಲ ಎಂದು ನಂಬಲಾಗಿದೆ.
ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವೂ ಇದೆ. ಮನೆಯ ಉತ್ತರ ಭಾಗದಲ್ಲಿ ಅನಗತ್ಯ ವಸ್ತುಗಳನ್ನು ಇಡಬೇಡಿ. ಮನೆಯ ಈಶಾನ್ಯ ದಿಕ್ಕಿನಲ್ಲಿ ನೀರು ತುಂಬಿದ ತೆಂಗಿನಕಾಯಿಯನ್ನು ಕಟ್ಟಿ ಇಡುವುದು ಸಹ ಉತ್ತಮ ಎನ್ನಲಾಗುತ್ತದೆ.