ನವರಾತ್ರಿ ವೇಳೆ ಈ ವಸ್ತುಗಳನ್ನು ಮನೆಯಲ್ಲಿಟ್ರೆ ಆರ್ಥಿಕ ನಷ್ಟ ಖಚಿತ

First Published | Oct 17, 2023, 5:41 PM IST

ಈ ನವರಾತ್ರಿಯಂದು ನೀವು ತಾಯಿಯ ಸಂಪೂರ್ಣ ಕೃಪೆಯನ್ನು ಪಡೆಯಲು ಬಯಸಿದರೆ,  ಮೊದಲು ಮನೆಯಿಂದ ಕೆಲವು ವಸ್ತುಗಳನ್ನು ಹೊರತೆಗೆಯಿರಿ. 
 

ನವರಾತ್ರಿ ಹಬ್ಬ ಈಗಾಗಲೇ ಆರಂಭವಾಗಿದೆ, ಆದರೆ ದೇವಿಯ ಕೃಪೆ ನಿಮ್ಮ ಮೇಲೆ ಮತ್ತು ನಿಮ್ಮ ಮನೆಯ ಮೇಲೆ ಸದಾ ಇರಬೇಕು ಎಂದು ನೀವು ಭಾವಿಸಿದರೆ ಇವತ್ತೆ ತಪ್ಪದೇ ಮನೆಯಿಂದ ಈ ವಸ್ತುಗಳನ್ನು ಹೊರಹಾಕಿ. ಹೀಗೆ ಮಾಡಿದರೆ ಮನೆಯಲ್ಲಿ ಎಂದಿಗೂ ಹಣದ ಕೊರತೆಯೇ ಇರೋದಿಲ್ಲ. 
 

ಮುರಿದ ಕನ್ನಡಿ (broken mirror)
ಮುರಿದ ಗಾಜು ಮತ್ತು ಕನ್ನಡಿ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಹಾಗಾಗಿ,  ಖಂಡಿತವಾಗಿಯೂ ನಿಮ್ಮ ಮನೆಯಿಂದ ಮುರಿದ ಗಾಜು ಮತ್ತು ಕನ್ನಡಿ ಇದ್ದರೆ ತೆಗೆದುಹಾಕಿ. ಇದರಿಂದ ದೇವಿಯ ಕೃಪೆಯೂ ನಿಮ್ಮ ಮೇಲಿರುತ್ತೆ. 

Tap to resize

ಮುರಿದ ಪ್ರತಿಮೆಗಳು (broken statue)
ದೇವರ ಮುರಿದ ಪ್ರತಿಮೆಗಳು ಮತ್ತು ಹಾನಿಗೊಳಗಾದ ಛಾಯಾಚಿತ್ರಗಳನ್ನು ಹರಿಯುವ ನೀರಿಗೆ ಎಸೆಯಬೇಕು. ನವರಾತ್ರಿಯ ಸಮಯದಲ್ಲಿ ಅಂತಹ ವಿಗ್ರಹಗಳು ಮತ್ತು ಚಿತ್ರಗಳನ್ನು ಮನೆಯಲ್ಲಿ ಇಡಬಾರದು.  

ಈರುಳ್ಳಿ ಬೆಳ್ಳುಳ್ಳಿ (onion and garlic)
ನವರಾತ್ರಿಯ ಸಮಯದಲ್ಲಿ ಸಾತ್ವಿಕ ಆಹಾರವನ್ನು ಸೇವಿಸಬೇಕು. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಮನೆಯಲ್ಲಿ ಇಡಬಾರದು. ಹಾಗಾಗಿ ನವರಾತ್ರಿ ಸಮಯದಲ್ಲಿ, ಮನೆಯನ್ನು ಸ್ವಚ್ಛಗೊಳಿಸುವಾಗ, ಈರುಳ್ಳಿ ಬೆಳ್ಳುಳ್ಳಿ ಹೊರ ಹಾಕಿ. ಅಥವಾ ಅದನ್ನು ಮನೆಗೆ ತರೋದೇ ಬೇಡ. 
 

ನಿಂತ ಗಡಿಯಾರ (Clock)
ಸ್ಥಗಿತಗೊಂಡ ಗಡಿಯಾರಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ. ಅದು ಮನೆಯಲ್ಲಿ ವಾಸಿಸುವುದು ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಇದನ್ನು ಮನೆಯಿಂದ ಹೊರ ಹಾಕೋದು ಉತ್ತಮ.

ತುಂಡಾದ ಚಪ್ಪಲಿಗಳು ಮತ್ತು ಬೂಟುಗಳು (broken slippers)
ಹಾನಿಗೊಳಗಾದ ಬೂಟು ಮತ್ತು ಚಪ್ಪಲಿಗಳನ್ನು ಮನೆಯಲ್ಲಿ ಇಡಬಾರದು. ಅವು ಮನೆಗೆ ಬಡತನವನ್ನು ತರುತ್ತವೆ. ಮನೆಯನ್ನು ಸ್ವಚ್ಚ ಮಾಡೋವಾಗ ಅವುಗಳನ್ನು ಮನೆಯಿಂದ ಹೊರ ಹಾಕೋದು ಉತ್ತಮ. 

ಹಾಳಾದ ಪಾತ್ರೆಗಳು (broken slippers)
ಮನೆಯಲ್ಲಿ ಇರಿಸಲಾದ ಮುರಿದ ಪಾತ್ರೆಗಳು ಬಡತನವನ್ನು ಆಹ್ವಾನಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಸಾಧ್ಯವಾದಷ್ಟು ಬೇಗ ಈ ವಸ್ತುಗಳನ್ನು ಮನೆಯಿಂದ ಹೊರ ಹಾಕಿ. ಇದು ನಿಮಗೂ ಒಳ್ಳೆಯದು.

ಕೆಟ್ಟ ಆಹಾರ (worst food)
ಮನೆಯಲ್ಲಿ ಏನಾದರೂ ಕೆಟ್ಟ ಅಥವಾ ಹಳಸಿದ ಆಹಾರ ಇದ್ದರೆ, ಅದನ್ನು ಮನೆಯಿಂದ ಹೊರಹಾಕಿ. ಈ ದಿನಗಳಲ್ಲಿ, ಮನೆಯಲ್ಲಿ ಯಾವುದೇ ಕೆಟ್ಟ ಆಹಾರ ಪದಾರ್ಥಗಳನ್ನು ಇಡಬೇಡಿ ಎಂಬುದನ್ನು ನೆನಪಿನಲ್ಲಿಡಿ. 
 

Latest Videos

click me!