ನವರಾತ್ರಿಯು ಸನಾತನ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ, ಮತ್ತು ಈ ಅವಧಿಯಲ್ಲಿ, ಒಂಬತ್ತು ದಿನಗಳ ಕಾಲ ದೇವಿ ಪೂಜೆ ಮಾಡುತ್ತಾರೆ..ಹತ್ತನೇ ದಿನದಂದು ದಸರಾ ಆಚರಿಸಲಾಗುತ್ತದೆ. ನೀವು ನವರಾತ್ರಿ ಆರಂಭಕ್ಕೂ ಮುನ್ನ ಈ ವಸ್ತುಗಳನ್ನು ಮನೆಯಿಂದ ಹೊರ ಹಾಕಿದರೆ ಎಲ್ಲವೂ ಶುಭವಾಗುವುದು.
ಈ ವರ್ಷ, ನವರಾತ್ರಿ (Navaratri) ಸೆಪ್ಟೆಂಬರ್ 22, 2025 ರಂದು ಪ್ರಾರಂಭವಾಗುತ್ತದೆ ಮತ್ತು ನವರಾತ್ರಿಯ ಈ ಒಂಬತ್ತು ದಿನಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಈ ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಜೀವನದ ಸಮಸ್ಯೆಗಳನ್ನು ನಿವಾರಿಸಲು ಮತ್ತು ಸಂಪತ್ತಿನ ಹಾದಿಯನ್ನು ತೆರೆಯಲು ಸಹಾಯವಾಗುತ್ತದೆ. ನವರಾತ್ರಿ ಪ್ರಾರಂಭವಾಗುವ ಮೊದಲು, ನಕಾರಾತ್ಮಕ ಶಕ್ತಿ (negative energy) ಪ್ರವೇಶಿಸುವುದನ್ನು ತಡೆಯಲು ಮನೆಯಿಂದ ಕೆಲವು ವಸ್ತುಗಳನ್ನು ತೆಗೆದುಹಾಕಬೇಕು.
25
ಮುರಿದ ವಿಗ್ರಹಗಳನ್ನು ತೆಗೆದುಹಾಕಿ
ನಿಮ್ಮ ಮನೆಯ ಮಂದಿರದಲ್ಲಿ ಮುರಿದ ವಿಗ್ರಹವಿದ್ದರೆ, ಶರದಿಯಾ ನವರಾತ್ರಿ ಪ್ರಾರಂಭವಾಗುವ ಮೊದಲು ಅದನ್ನು ಮನೆಯಿಂದ ತೆಗೆದು ಹರಿಯುವ ನದಿಯಲ್ಲಿ ಬಿಡಿ. ಮುರಿದ ವಿಗ್ರಹಗಳು ಮನೆಗೆ ನಕಾರಾತ್ಮಕತೆಯನ್ನು ತರುತ್ತವೆ ಮತ್ತು ಕುಟುಂಬದ ದುಃಖವನ್ನು ಹೆಚ್ಚಿಸುತ್ತವೆ.
35
ಹಳೆಯ ಶೂಗಳು ಮತ್ತು ಚಪ್ಪಲಿಗಳನ್ನು ಎಸೆಯಿರಿ
ಶರದಿಯಾ ನವರಾತ್ರಿ ಪ್ರಾರಂಭವಾಗುವ ಮೊದಲು, ನಿಮ್ಮ ಮನೆಯಿಂದ ಎಲ್ಲಾ ಹಳೆಯ ಶೂಗಳು (old shoes)ಮತ್ತು ಚಪ್ಪಲಿಗಳನ್ನು ತೆಗೆದುಹಾಕಿ. ಇವು ನಕಾರಾತ್ಮಕತೆಯ ಸಂಕೇತವಾಗಿದೆ ಮತ್ತು ಅವುಗಳನ್ನು ಮನೆಯಲ್ಲಿ ಇಡುವುದರಿಂದ ಬಡತನ ಬರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಹಾಳಾದ ಗಡಿಯಾರವು (watch and clocks) ಇದ್ದರೆ, ಅದು ದುರದೃಷ್ಟವನ್ನು ತರುತ್ತದೆ. ಆದ್ದರಿಂದ, ನವರಾತ್ರಿ ಪ್ರಾರಂಭವಾಗುವ ಮೊದಲು, ನಿಂತ ಗಡಿಯಾರಗಳನ್ನು ದುರಸ್ತಿ ಮಾಡಿಸಿ ಅಥವಾ ಮನೆಯಿಂದ ತೆಗೆದುಹಾಕಿ.
55
ಹಳೆಯ ಮತ್ತು ಹಾನಿಗೊಳಗಾದ ಪೊರಕೆಗಳು
ಲಕ್ಷ್ಮಿ ದೇವಿಯು ಪೊರಕೆಯಲ್ಲಿ ವಾಸಿಸುತ್ತಾಳೆ ಎಂದು ಹೇಳಲಾಗುತ್ತದೆ, ಆದ್ದರಿಂದ, ಮುರಿದ ಅಥವಾ ಹಾನಿಗೊಳಗಾದ ಪೊರಕೆಯನ್ನು (broom) ಮನೆಯಲ್ಲಿ ಎಂದಿಗೂ ಇಡಬಾರದು. ಆದ್ದರಿಂದ, ಶರದಿಯಾ ನವರಾತ್ರಿ ಪ್ರಾರಂಭವಾಗುವ ಮೊದಲು, ನಕಾರಾತ್ಮಕತೆಯನ್ನು ದೂರ ಮಾಡಲು ಮನೆಯಿಂದ ಮುರಿದ ಪೊರಕೆಯನ್ನು ತೆಗೆದುಹಾಕಿ.