1.ಈಶಾನ್ಯ ಮೂಲೆ...
1. ಈಶಾನ್ಯ ಮೂಲೆ: ಮನೆಯ ಈಶಾನ್ಯ ಮೂಲೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಲಕ್ಷ್ಮಿ ಮತ್ತು ಕುಬೇರ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಹೆಚ್ಚಿನ ಮನೆಗಳಲ್ಲಿ ಈ ಮೂಲೆಯಲ್ಲೇ ಪೂಜಾ ಕೋಣೆ ಇರುತ್ತದೆ. ನಿಮ್ಮ ಮನೆಯಲ್ಲಿ ಈ ದಿಕ್ಕಿನಲ್ಲಿ ಪೂಜಾ ಕೋಣೆ ಇಲ್ಲದಿದ್ದರೆ, ಆ ಮೂಲೆಯನ್ನು ಖಾಲಿ ಬಿಡಬೇಡಿ. ಆ ಸ್ಥಳದಲ್ಲಿ ನೀರಿನಿಂದ ತುಂಬಿದ ಪಾತ್ರೆಯನ್ನು ಇಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ.
2. ನೈಋತ್ಯ ಮೂಲೆ: ಮನೆಯ ನೈಋತ್ಯ ಮೂಲೆಯನ್ನೂ ಸಹ ತಪ್ಪಾಗಿಯೂ ಖಾಲಿ ಬಿಡಬಾರದು. ವಾಸ್ತು ತಜ್ಞರ ಪ್ರಕಾರ, ನೈಋತ್ಯ ಮೂಲೆಯಲ್ಲಿ ಅಲಂಕಾರಿಕ ವಸ್ತು ಅಥವಾ ಭಾರವಾದ ವಸ್ತುವನ್ನು ಇಡಬೇಕು. ಮುಖ್ಯವಾಗಿ, ಪೀಠೋಪಕರಣ, ವಾರ್ಡ್‌ರೋಬ್, ಸೋಫಾ ಅಥವಾ ದೊಡ್ಡ ಹೂವಿನ ಕುಂಡವನ್ನು ಇಡಬೇಕು.
3. ಆಗ್ನೇಯ ಮೂಲೆ: ಮನೆಯ ಆಗ್ನೇಯ ದಿಕ್ಕನ್ನು ಅಗ್ನಿ ಮೂಲೆ ಎನ್ನುತ್ತಾರೆ. ನಿಮ್ಮ ಮನೆಯಲ್ಲಿ ಆಗ್ನೇಯ ಮೂಲೆ ಖಾಲಿಯಿದ್ದರೆ ಅನೇಕ ಸಮಸ್ಯೆಗಳು ಬರುತ್ತವೆ. ಉತ್ಸಾಹ ಇರುವುದಿಲ್ಲ, ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಈ ದಿಕ್ಕಿನಲ್ಲಿ ಅಡುಗೆಮನೆ ನಿರ್ಮಿಸುವುದರಿಂದ ಶುಭ ಫಲಿತಾಂಶಗಳು ಬರುತ್ತವೆ. ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡುವುದು ಒಳ್ಳೆಯದು.