ಪೊರಕೆಗೆ ಪೂರಕ ವಾಸ್ತು ಟಿಪ್ಸ್ ಇವು, ಏನು ಮಾಡಬೇಕು, ಏನು ಮಾಡಬಾರದು?

First Published | Apr 1, 2021, 5:38 PM IST

ಧಾರ್ಮಿಕ ಗ್ರಂಥಗಳಲ್ಲಿ ಹಾಗು ಪುರಾಣಗಳಲ್ಲಿ ಪೊರಕೆಗೆ ಮಹತ್ವಪೂರ್ಣ ಸ್ಥಾನವನ್ನು ನೀಡಲಾಗುತ್ತದೆ. ಪೊರಕೆಯನ್ನು ಲಕ್ಷ್ಮಿಯ ಪ್ರತೀಕ ಎಂದು ಹೇಳಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಕೆಲವೊಂದು ವಿಷಯಗಳ ಬಗ್ಗೆ ಗಮನ ಹರಿಸದೆ ಇದ್ದರೆ ಸಮಸ್ಯೆಗಳು ಹೆಚ್ಚುತ್ತವೆ. ಹೆಚ್ಚಿನ ಜನರು ಪೊರಕೆಯನ್ನು ಕಡೆಗಣಿಸುತ್ತಾರೆ. ಆದರೆ ಇದಕ್ಕೆ ಸಂಬಂಧಿಸಿದ ವಾಸ್ತುವನ್ನು ಗಮನಿಸದೆ ಇದ್ದರೆ ಮನೆಯಲ್ಲಿ ದಾರಿದ್ರ್ಯ ತಾಂಡವವಾಡುತ್ತದೆ. 

ಗುಡಿಸುವುದರಿಂದ ಹಿಡಿದು, ಪೊರಕೆಯನ್ನು ಇಡುವ ಜಾಗದವರೆಗೆ ಎಲ್ಲಾ ವಿಷಯಗಳನ್ನು ಗಮನಿಸುವುದು ಮುಖ್ಯ.
ಮನೆಯಲ್ಲಿ ಅಥವಾ ಕಚೇರಿಯಲ್ಲಿ ಪೊರಕೆಯನ್ನು ಬಳಸದಸಂದರ್ಭದಲ್ಲಿ ಅದನ್ನು ಕಣ್ಣಿಗೆ ಕಾಣದ ಜಾಗದಲ್ಲಿ ಇಡಿ. ದಿನವೂ ಪೊರಕೆಯನ್ನು ನೋಡುತ್ತಿದ್ದರೆ ಅದು ಉತ್ತಮವಲ್ಲ. ಹೊರಗಿಟ್ಟ ಪೊರಕೆ ಮನೆಯ ಸಕಾರಾತ್ಮಕ ಶಕ್ತಿಯನ್ನು ಹೀರುತ್ತದೆ.
Tap to resize

ಹಲವಾರು ಬಾರಿ ಪೊರಕೆ ತುಂಡಾಗಿದ್ದರೂ ಅದನ್ನ ಬಳಸುತ್ತೇವೆ.ಆದರೆ ವಾಸ್ತುವಿನ ಅನುಸಾರ ಇದು ತಪ್ಪು. ತುಂಡಾದ ಪೊರಕೆ ಬಳಸಿದರೆ ಮನೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಪೊರಕೆಯನ್ನು ಯಾವತ್ತೂ ನೇರವಾಗಿ ನಿಲ್ಲಿಸಬೇಡಿ. ನೆರವಾಗಿಟ್ಟ ಪೊರಕೆ ಅಪಶಕುನಕ್ಕೆ ಕಾರಣವಾಗುತ್ತದೆ.
ಸಂಜೆಯ ಮನೆಗುಡಿಸುವುದು ವಾಸ್ತು ಪ್ರಕಾರ ಉತ್ತಮವಲ್ಲ. ಇದರಿಂದ ಲಕ್ಷ್ಮಿ ಮನೆ ಬಿಟ್ಟು ಹೋಗುತ್ತಾಳಂತೆ.
ಸಾಧ್ಯವಾದರೆ ಪೊರಕೆಯನ್ನು ಪಶ್ಚಿಮ ದಿಕ್ಕಿನಲ್ಲಿರುವ ಕೋಣೆಯಲ್ಲಿಡಿ. ಇದರಿಂದ ಪೊರಕೆಯಿಂದಾಗಿ ಮನೆಯಲ್ಲಿ ಯಾವುದೇ ರೀತಿಯ ನೆಗೆಟಿವ್ ಎನರ್ಜಿ ಹೆಚ್ಚುವುದಿಲ್ಲ.
ಹಳೆ ಪೊರಕೆ ಬದಲು ಹೊಸ ಪೊರಕೆ ಖರೀದಿ ಮಾಡುವುದಾದರೆ ಶನಿವಾರ ಖರೀದಿಸಿ.
ಪೊರಕೆಯನ್ನು ತೊಳೆಯುವುದಾದರೆ ಅದನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು. ಕೆಟ್ಟ ನೀರಿಂದ ತೊಳೆದರೆ ಅದಕ್ಕೆ ಅವಮಾನ ಮಾಡಿದಂತೆ ಆಗುತ್ತದೆ.

Latest Videos

click me!