Vastu Tips : ಬೆಳ್ ಬೆಳ್ಗೆ ಇವನ್ನೆಲ್ಲ ನೋಡಿ ದಿನ ಹಾಳು ಮಾಡ್ಕೋಬೇಡಿ!

First Published Mar 7, 2022, 9:37 AM IST

ನೀವು ಬೆಳಿಗ್ಗೆ ಎದ್ದ ತಕ್ಷಣ ನರಿ ಮುಖ ನೋಡಿದರೆ ಅದೃಷ್ಟ ಬರುತ್ತದೆ, ದೇವರ ಮುಖ ನೋಡಿದರೆ ದಿನ ಚೆನ್ನಾಗಿರುತ್ತದೆ ಎಂಬುದನ್ನೆಲ್ಲ ಕೇಳಿದ್ದೀರಿ. ಆದರೆ, ಏನನ್ನು ನೋಡಿದರೆ ದಿನ ಹಾಳಾಗುತ್ತದೆ, ದುರದೃಷ್ಟ ಬೆನ್ನು ಹತ್ತುತ್ತದೆ ಎಂಬುದು ಗೊತ್ತಿರಲಿಕ್ಕಿಲ್ಲ. ವಾಸ್ತುವಿನಲ್ಲಿ ಬೆಳಿಗ್ಗೆ ಎದ್ದೊಡನೆ ನೋಡಬಾರದ ವಿಷಯಗಳ ಬಗ್ಗೆ ತಿಳಿಸಲಾಗಿದೆ. 
 

ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ದಿನದಲ್ಲಿ ಬೇಡದ್ದು ಘಟಿಸಿದರೆ ಅದರ ಹಿಂದೆ ನಮ್ಮದೇ ಕೆಲ ತಪ್ಪುಗಳಿರುತ್ತವೆ. ಬೆಳಗ್ಗೆ ಯಾವಾಗಲೂ ತಾಜಾತನದಿಂದಿರುತ್ತೇವೆ. ಕೆಲಸಗಳು ಸರಾಗವಾಗಿ ಆಗುತ್ತವೆ. ತಲೆ ಚೆನ್ನಾಗಿ ಕೆಲಸ ಮಾಡುತ್ತದೆ. ಆದರೆ, ಬೆಳಗ್ಗೆ ಎದ್ದ ತಕ್ಷಣ ಈ  ತಪ್ಪುಗಳನ್ನು ಮಾಡಿದರೆ, ನಂತರ ನಿಮ್ಮ ದಿನ ಕೆಟ್ಟದಾಗಿರಬಹುದು. 

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸವನ್ನು ತಪ್ಪಿಸಿ

ಹೆಚ್ಚಿನವರು ಮೊದಲು ಎದ್ದ ತಕ್ಷಣ ಕನ್ನಡಿ (mirror) ನೋಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ ನಾವು ಇದನ್ನು ಮಾಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ನಾವು ಬೆಳಗ್ಗೆ ಎದ್ದಾಗ ಕನ್ನಡಿ ನೋಡುವುದರಿಂದ ನಮ್ಮ ದೇಹದಲ್ಲಿ ನಕಾರಾತ್ಮಕ ಶಕ್ತಿಯ ಪರಿಣಾಮ ಉಂಟಾಗುತ್ತದೆ. ದೊಡ್ಡ ಪರಿಣಾಮ ನಮ್ಮ ಮುಖದ ಮೇಲೆ ಕಾಣಿಸಿಕೊಳ್ಳುತ್ತದೆ.

ಎದ್ದ ತಕ್ಷಣ ಕನ್ನಡಿಯನ್ನು ನೋಡಿದರೆ ರಾತ್ರಿಯಿಂದ ತುಂಬಿರಬಹುದಾದ ನಕಾರಾತ್ಮಕ ಶಕ್ತಿ ನಮ್ಮನ್ನಾವರಿಸುತ್ತದೆ. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ಮೊದಲು ಮುಖ, ಬಾಯಿ ತೊಳೆದು ನಂತರ ಕನ್ನಡಿಯನ್ನು ನೋಡಿ. ಮನೆಯ ವಾಸ್ತು ದೋಷವನ್ನು ಕರ್ಪೂರದಿಂದ ಸರಿಪಡಿಸಿ, ಧನವೃದ್ಧಿಯಾಗಲಿದೆ. 

 ಬೆಳಿಗ್ಗೆ ಎದ್ದ ತಕ್ಷಣ ತೊಳೆಯಲಿಟ್ಟಿರುವ ಪಾತ್ರೆಗಳನ್ನು ನೋಡಬೇಡಿ, ಎಂಜಲು  ಪಾತ್ರೆಗಳನ್ನು ನೋಡಬಾರದು. ಆದ್ದರಿಂದ ರಾತ್ರಿ ಅಡುಗೆ ಮನೆಯನ್ನು ಶುಚಿಗೊಳಿಸಿ ಮಲಗಬೇಕು ಎಂದು ಹೇಳಲಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಎಂಜಲು ಪಾತ್ರೆಗಳನ್ನು ನೋಡುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿಯ (positive energy)ಸಂವಹನ ಕಡಿಮೆಯಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ ಬೆಳಿಗ್ಗೆ ಎದ್ದ ತಕ್ಷಣ (shadow of others) ನಮ್ಮ ಅಥವಾ ಬೇರೆಯವರ ನೆರಳನ್ನು ನೋಡಬಾರದು. ವಾಸ್ತು ಪ್ರಕಾರ ಇದನ್ನು ಸರಿ ಎಂದು ಪರಿಗಣಿಸಲಾಗುವುದಿಲ್ಲ. 

ವಾಸ್ತು ಪ್ರಕಾರ ಇದನ್ನು ರಾಹುವಿನ ರಾಶಿ ಎಂದು ಕರೆಯುತ್ತಾರೆ. ವಾಸ್ತು ಶಾಸ್ತ್ರದ (vastu shastra) ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ಎಂದಿಗೂ ನಿಂತ  ಗಡಿಯಾರವನ್ನು ನೋಡಬಾರದು. ವಾಸ್ತವವಾಗಿ, ನಡೆಯುತ್ತಿರುವ ಗಡಿಯಾರ ನೋಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಬಂದ್ ಆದ ಗಡಿಯಾರವು ಕೆಟ್ಟ ಸಮಯವನ್ನು ಸೂಚಿಸುತ್ತದೆ. 

ನೀವು ಬೆಳಿಗ್ಗೆ ಎದ್ದು ಬಂದ್ ಆಗಿರುವ ಗಡಿಯಾರವನ್ನು ನೋಡಿದರೆ, ಆಗ ನೀವು ಯಾರೊಂದಿಗಾದರೂ ಜಗಳವಾಡಬಹುದು ಮತ್ತು ನಿಮ್ಮ ಇಡೀ ದಿನ ಹಾಳಾಗುತ್ತದೆ. ಆದುದರಿಂದ ಸಾಧ್ಯವಾದಷ್ಟು ಅಂತಹ ಬಂದ್ ಆಗಿರುವ ಗಡಿಯಾರವನ್ನು ಬೆಡ್ ರೂಮ್ ನಲ್ಲಿ (bed room) ಇಡೋದನ್ನು ತಪ್ಪಿಸಿ. 
 

Image: Getty Images

ಹಿಂಸಾತ್ಮಕ ಪ್ರಾಣಿಗಳ (wild animal) ಚಿತ್ರಗಳನ್ನು ಎಂದಿಗೂ ನೋಡಬೇಡಿ. ಹೆಚ್ಚಿನ ಮನೆಗಳು ಪ್ರಾಣಿಗಳ ಚಿತ್ರವನ್ನು ಮನೆಯಲ್ಲಿಡುತ್ತವೆ.  ಆದಾಗ್ಯೂ, ನೀವು ಬೆಳಿಗ್ಗೆ ಎದ್ದಾಗ ಅಂತಹ ಚಿತ್ರಗಳನ್ನು ನೋಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ ಈ ಚಿತ್ರಗಳನ್ನು ನೋಡುವ ಮೂಲಕ ನಿಮ್ಮ ಇಡೀ ದಿನ ಸಮಸ್ಯೆಯಿಂದ ಕೂಡಿರುವ ಸಾಧ್ಯತೆ ಇದೆ.  

Latest Videos

click me!