ಕೆಲವರಿಗೆ ಎಷ್ಟೇ ದುಡಿದ್ರೂ ಹಣ ಉಳಿತಾಯವಾಗಲ್ಲ. ದುಡಿದ ಹಣವೆಲ್ಲಾ ಖರ್ಚು ಆಗಿ ಹೋಗುತ್ತದೆ. ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಕಾರಣಗಳಿವೆ. ವಾಸಿಸುವ ಮನೆಯನ್ನು ಶಕ್ತಿಕೇಂದ್ರ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಲಕ್ಷ್ಮೀದೇವಿಯ ಆಶೀರ್ವಾದ ಇದ್ರೆ ಹಣ ಉಳಿತಾಯವಾಗುತ್ತದೆ.
26
ಆರ್ಥಿಕ ಸಮಸ್ಯೆ ಮತ್ತು ಮಾನಸಿಕ ಒತ್ತಡ
ಕೆಲವೊಮ್ಮೆ ಮನೆಯ ಸದಸ್ಯರು ಮಾಡುವ ಸಣ್ಣ ಸಣ್ಣ ತಪ್ಪುಗಳು ಆರ್ಥಿಕ ಸಮಸ್ಯೆ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದ ಕೆಲವು ಸಲಹೆಗಳನ್ನು ಪಾಲನೆ ಮಾಡಿದ್ರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ವಾತಾವರಣ ನಿರ್ಮಾಣವಾಗುತ್ತದೆ. ಹಾಗೆಯೇ ಲಕ್ಷ್ಮೀ ದೇವಿಯ ಆಶೀರ್ವಾದದಿಂದ ಹಣ, ಸಂಪತ್ತು ನೆಲೆಸುತ್ತದೆ.
36
1.ಮನೆಯ ಸ್ವಚ್ಛತೆ, ಸೂರ್ಯನ ಬೆಳಕು
ವಾಸ್ತು ಪ್ರಕಾರ ಮನೆಯ ಸ್ವಚ್ಛತೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮನೆಯಲ್ಲಿ ವಸ್ತುಗಳು ಅಸ್ತವ್ಯಸ್ಥವಾಗಿದ್ರೆ, ಚದುರಿಕೊಂಡಿದ್ರೆ, ಮುರುಕುಲು ವಸ್ತುಗಳಿದ್ರೆ ಇವುಗಳು ನಕಾರಾತ್ಮಕ ಶಕ್ತಿ ಆಕರ್ಷಿಸುತ್ತವೆ. ಹಾಗಾಗಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾಗೆಯೇ ಮನೆಯೊಳಗೆ ಸೂರ್ಯನ ಬೆಳಕು ಪ್ರವೇಶಿಸುವಾಗ ಬಾಗಿಲು ಮತ್ತು ಕಿಟಕಿ ಜೋಡಿಸಿಕೊಳ್ಳಬೇಕು. ಈಶಾನ್ಯದಿಂದ ಬೆಳಕು ಮತ್ತು ಗಾಳಿ ಪ್ರವೇಶಿಸೋದನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ.
ಮನೆಯನ್ನು ಸ್ವಚ್ಛವಾಗಿಟ್ಟುಕೊಂಡ್ರೆ ಮಾತ್ರವಲ್ಲ ಪರಿಮಳಯುಕ್ತ ವಾತಾವರಣ ಹೊಂದಬೇಕಾಗುತ್ತೆ. ಹಾಗಾಗಿ ಮನೆಯಲ್ಲಿ ವಾಸ್ತು ಪ್ರಕಾರ, ಧೂಪದ್ರವ್ಯ, ಅಗರಬತ್ತಿ ಬಳಕೆ ಮಾಡಬೇಕು. ಇದರಿಂದ ಮನೆ ಪರಿಮಳಯುಕ್ತವಾಗುತ್ತದೆ. ಇಂದು ಮಲ್ಲಿಗೆ ಸೇರಿದಂತೆ ವಿವಿಧ ಹೂವಿನ ಪರಿಮಳ ಹೊಂದಿರುವ ಅಗರಬತ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬಳಸಬಹುದು. ಮನೆಯಲ್ಲಿ ಹೂಗಳನ್ನಿಡುವವುದು ಶುಭಕರ ಎಂದು ಪರಿಗಣಿಸಲಾಗುತ್ತದೆ.
56
3.ತಾಮ್ರ ಮತ್ತು ಹಿತ್ತಳೆಯ ಪಾತ್ರೆಗಳು
ವಾಸ್ತು ಶಾಸ್ತ್ರದಲ್ಲಿ ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳ ಬಳಕೆಯನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ. ಈ ಲೋಹದ ಪಾತ್ರೆಗಳು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಗುಣ ಹೊಂದಿವೆ. ಈ ಹಿಂದೆ ಹಿತ್ತಾಳೆ ಮತ್ತು ತಾಮ್ರದ ಲೋಹಗಳ ಪಾತ್ರೆಗಳನ್ನೇ ಅಡುಗೆಮನೆಯಲ್ಲಿ ಬಳಕೆ ಮಾಡಲಾಗುತ್ತಿತ್ತು. ಇಂದು ಈ ಪಾತ್ರೆಗಳು ದೇವರಮನೆ ಮತ್ತು ಪೂಜಾಕೈಂಕರ್ಯಗಳಿಗೆ ಸೀಮಿತವಾಗಿವೆ.
66
4.ದೇವರ ಕೊಠಡಿ ಅಥವಾ ಪ್ರಾರ್ಥನಾ ಕೋಣೆ
ದೇವರ ಕೋಣೆ ಯಾವಾಗಲೂ ವಾಸ್ತು ಪ್ರಕಾರವಿರುವಂತೆ ನೋಡಿಕೊಳ್ಳಬೇಕು. ಪ್ರಾರ್ಥನಾ ಕೋಣೆ ಯಾವಾಗಲೂ ಶಾಂತ, ಶುದ್ಧ ಮತ್ತು ಪವಿತ್ರ ಸ್ಥಾನದಲ್ಲಿರಬೇಕು. ವಾಸ್ತುಪ್ರಕಾರ, ಈಶಾನ್ಯ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಪ್ರಾರ್ಥನ ಕೊಠಡಿ ಇರುವಂತೆ ನೋಡಿಕೊಳ್ಳಿ. ಸರಿಯಾದ ದಿಕ್ಕಿನಲ್ಲಿರುವ ಪ್ರಾರ್ಥನಾ ಕೊಠಡಿಯುವ ಮಾನಸಿಕ ಶಾಂತಿ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ನೀಡುತ್ತದೆ.