ಶನಿದೇವನನ್ನು ಮೆಚ್ಚಿಸಲು, ಮನೆಯಲ್ಲಿ ನೆಡಿ ಶಂಖಪುಷ್ಪ ಹೂವಿನ ಗಿಡ

Published : Dec 09, 2022, 05:01 PM ISTUpdated : Dec 09, 2022, 05:23 PM IST

ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ  ಶಂಖಪುಷ್ಪ ಹೂವು ನೆಡುವ ಮೂಲಕ, ವಿಷ್ಣು ಮತ್ತು ತಾಯಿ ಲಕ್ಷ್ಮಿ ಸಂತೋಷಪಡುತ್ತಾರೆ, ಇದನ್ನು ವಿಷ್ಣುಪ್ರಿಯ ಎಂದೂ ಕರೆಯಲಾಗುತ್ತೆ. ಮನೆಯಲ್ಲಿ ನೀಲಿ ಶಂಖಪುಷ್ಪ ಹೂವನ್ನು ನೆಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.  

PREV
18
ಶನಿದೇವನನ್ನು ಮೆಚ್ಚಿಸಲು, ಮನೆಯಲ್ಲಿ ನೆಡಿ ಶಂಖಪುಷ್ಪ ಹೂವಿನ ಗಿಡ

ವಾಸ್ತು ಶಾಸ್ತ್ರದ (Vaastu) ಪ್ರಕಾರ, ಮನೆಯಲ್ಲಿರುವ ಎಲ್ಲದರಿಂದಲೂ ನಕಾರಾತ್ಮಕ ಅಥವಾ ಧನಾತ್ಮಕ ಶಕ್ತಿಯು ಹೊರಬರುತ್ತದೆ. ಇಷ್ಟೇ ಅಲ್ಲ, ಮನೆಯಲ್ಲಿ ನೆಟ್ಟ ಮರಗಳು ಮತ್ತು ಸಸ್ಯಗಳು ವ್ಯಕ್ತಿಯ ಆರೋಗ್ಯ (Health), ಪ್ರಗತಿಯ (Progress) ಮೇಲೂ ಪರಿಣಾಮ ಬೀರುತ್ತವೆ. ಈ ಮರಗಳು ಮತ್ತು ಸಸ್ಯಗಳು ಎಷ್ಟು ವೇಗವಾಗಿ ಬೆಳೆಯುತ್ತವೆಯೋ, ಅಷ್ಟು ವೇಗವಾಗಿ ಧನಾತ್ಮಕ ಶಕ್ತಿಯ ಪ್ರಸರಣವು ಮನೆಯಲ್ಲಿ ಸಂತೋಷ (Happiness) ಮತ್ತು ಸಮೃದ್ಧಿ (Prosperity) ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ, ಭಗವಾನ್ ಶಿವ, ವಿಷ್ಣು ಮತ್ತು ತಾಯಿ ಲಕ್ಷ್ಮಿ ಮನೆಗೆ ಆಗಮಿಸುತ್ತಾರೆ. ಈ ಸಸ್ಯಗಳಲ್ಲಿ ಅಪರಾಜಿತಾ ಸಸ್ಯವೂ ಒಂದು. ಅಪರಾಜಿತಾ ಸಸ್ಯವು ಅನೇಕ ರೀತಿಯ ಹೂವುಗಳನ್ನು ಹೊಂದಿದೆ. ಆದರೆ ಮನೆಯಲ್ಲಿ ನೀಲಿ ಹೂವುಗಳೊಂದಿಗೆ ಅಪರಾಜಿತಾ ಸಸ್ಯವನ್ನು ನೆಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

28

ನೀಲಿ  ಶಂಖಪುಷ್ಪ ಹೂವನ್ನು ಪೂಜೆಗೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತೆ. ಇದನ್ನು ಮಾತೆ ದುರ್ಗೆಯ ಅವತಾರವೆಂದು ಪರಿಗಣಿಸಲಾಗಿದೆ. ಇದನ್ನು ಪ್ರತಿದಿನ ಪೂಜಾ ಸಮಯದಲ್ಲಿ ಬಳಸಲಾಗುತ್ತೆ. ಭಗವಾನ್ ವಿಷ್ಣು  ಶಂಖಪುಷ್ಪ ಹೂವನ್ನು ತುಂಬಾ ಪ್ರೀತಿಸುತ್ತಾರೆ. ಈ ಹೂವನ್ನು ಅರ್ಪಿಸುವ ಮೂಲಕ, ಭಗವಾನ್ ವಿಷ್ಣು (Lord Vishnu) ಸಂತೋಷವಾಗ್ತಾನೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತೆ ಎನ್ನುವ ನಂಬಿಕೆ ಇದೆ.  

38

ಶಂಖಪುಷ್ಪ ಹೂವನ್ನು ಹಿಂದೂ ಧರ್ಮದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಶನಿದೇವನು (Shani) ಈ ಹೂವನ್ನು ಅರ್ಪಿಸಿದರೆ ಸಂತೋಷಪಡುತ್ತಾನೆ. ಶಿವನು ಸಹ ಶಂಖಪುಷ್ಪ ಹೂವನ್ನು ತುಂಬಾ ಪ್ರೀತಿಸುತ್ತಾನೆ. ಶಿವನಿಗೆ  ಶಂಖಪುಷ್ಪ ಹೂವುಗಳನ್ನು ಅರ್ಪಿಸೋದರಿಂದ ವೈವಾಹಿಕ ಜೀವನದಲ್ಲಿ ಸಂತೋಷವನ್ನು ತರುತ್ತೆ ಎಂಬ ನಂಬಿಕೆಯಿದೆ.

48

ಮನೆಯಲ್ಲಿ  ಶಂಖಪುಷ್ಪ ಹೂವನ್ನು ನೆಡುವ ಮೂಲಕ, ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿ (Goddess Lakshmi) ಸಂತೋಷವಾಗಿರುತ್ತಾರೆ. ಇದನ್ನು ವಿಷ್ಣುಪ್ರಿಯ ಎಂದೂ ಕರೆಯುತ್ತಾರೆ. ಶಂಖಪುಷ್ಪ ಹೂವು ಸಾಮಾನ್ಯವಾಗಿ ಬಿಳಿ ಮತ್ತು ನೀಲಿ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಆದರೆ ಮನೆಯಲ್ಲಿ ನೀಲಿ  ಶಂಖಪುಷ್ಪ ಹೂವನ್ನು ನೆಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. 

58

ಪ್ರತಿ ಸೋಮವಾರ ಮತ್ತು ಶನಿವಾರ, ಹರಿಯುವ ನೀರಿನಲ್ಲಿ 3  ಶಂಖಪುಷ್ಪ ಹೂವುಗಳನ್ನು ಹಾಕಿ. ಇದನ್ನು ಮಾಡೋದರಿಂದ, ಸಂಪತ್ತನ್ನು ಪಡೆಯಲಾಗುತ್ತೆ ಮತ್ತು ಕುಟುಂಬದಲ್ಲಿ ಎಂದಿಗೂ ಹಣದ(Money) ಕೊರತೆ ಇರೋದಿಲ್ಲ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.

68

ಶಂಖಪುಷ್ಪ ಸಸ್ಯದ ಬೇರಿನ ಪುಡಿಯನ್ನು ತಯಾರಿಸಿ ಹಸುವಿನ ಹಾಲು ಮತ್ತು ಹಸುವಿನ ತುಪ್ಪದೊಂದಿಗೆ ತಿನ್ನೋದರಿಂದ, ಹೊಟ್ಟೆಯ (Stomach) ಕಿರಿಕಿರಿ ಮತ್ತು ಅಜೀರ್ಣದಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ.

78

10 ಗ್ರಾಂ  ಶಂಖಪುಷ್ಪ ಎಲೆಗಳನ್ನು 500 ಮಿಲಿ ನೀರಿನಲ್ಲಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ. ಫಿಲ್ಟರ್ ಮಾಡಿದ ನೀರಿನಿಂದ ಗಾರ್ಗಲ್ ಮಾಡಿ. ಇದನ್ನು ಮಾಡೋದರಿಂದ, ಟಾನ್ಸಿಲ್  ಮತ್ತು ಗಂಟಲು(Throat) ಸಮಸ್ಯೆಗಳು ನಿವಾರಣೆಯಾಗುತ್ತವೆ.

88
ಅಪರಾಜಿತಾ ಸಸ್ಯವನ್ನು ಯಾವ ದಿಕ್ಕಿನಲ್ಲಿ ನೆಡಬೇಕು?

ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಅಪರಾಜಿತ ಸಸ್ಯವನ್ನು ನೆಡುವುದು ಶುಭಕರ. ಭಗವಾನ್ ಗಣೇಶನು (Lord Ganesh) ಈಶಾನ್ಯದಲ್ಲಿ ಉತ್ತರ ಮತ್ತು ಪೂರ್ವದೊಂದಿಗೆ ನೆಲೆಸಿದ್ದಾನೆ, ಲಕ್ಷ್ಮಿ ದೇವಿಯ ಜೊತೆಗೆ ಕುಬೇರನು ನೆಲೆಸಿದ್ದಾನೆ. ಹಾಗಾಗಿ, ಈ ದಿಕ್ಕಿನಲ್ಲಿ ಅಪರಾಜಿತಾ ಸಸ್ಯವನ್ನು ನೆಡುವುದು ಮನೆಯಲ್ಲಿ ಆದಾಯದ ಹೆಚ್ಚಳದೊಂದಿಗೆ ಪ್ರಗತಿಗೆ ಕಾರಣವಾಗುತ್ತದೆ.

Read more Photos on
click me!

Recommended Stories