ವಾಸ್ತು ಪ್ರಕಾರ ಅಡುಗೆ ಮನೆಗೆ ಆಗ್ನೇಯ ದಿಕ್ಕು ಸೂಕ್ತ. ವಾಯುವ್ಯ ದಿಕ್ಕನ್ನೂ ಸಹ ಆಯ್ಕೆ ಮಾಡಿಕೊಳ್ಳಬಹುದು.
ಅಡುಗೆ ಮನೆಯಲ್ಲಿ ಕಪ್ಪು ಬಣ್ಣದ ಗ್ರ್ಯಾನೈಟ್ ಬಳಸಬೇಡಿ. ಇದು ನೆಗೆಟಿವ್ ಎನರ್ಜಿ ಸೃಷ್ಟಿಸುತ್ತದೆ.
ಕಿಚನ್ ಮೂಲೆಯಲ್ಲಿದ್ದರೆ ಉತ್ತಮ. ಮನೆ ಮಧ್ಯ ಭಾಗದಲ್ಲಿ ಇರಬಾರದು. ಅಡುಗೆ ಮನೆ ಪಕ್ಕ ಸ್ಪಲ್ಪ ಖಾಲಿ ಜಾಗ ಇರಲಿ.
ಅಡುಗೆ ಮನೆಗೆ ಬೆಳಗಿನ ಬಿಸಿಲು ಬಿದ್ದರೆ, ಮನೆಯ ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾಗಿ ಅಡುಗೆ ಮನೆಗೊಂದು ಕಿಟಿಕಿ ಇರಬೇಕು.
ಮನೆ ಮೆಟ್ಟಿಲ ಕೆಳಗೆ ಅಡುಗೆ ಮನೆ ಇರುವಂತೆ ವಿನ್ಯಾಸ ಮಾಡಬೇಡಿ.
ಅಡುಗೆ ಮನೆಗೆ ಅಂಟಿಕೊಂಡಂತೆ ಬಚ್ಚಲು, ಟಾಯ್ಲೆಟ್ ಇರಬಾರದು. ಇದು ನೆಗಟಿವ್ ಎನರ್ಜಿ ಸೃಷ್ಟಿಸುತ್ತದೆ.
ಕಿಚನ್‌ನ ಹಾಗೂ ಟಾಯ್ಲೆಟ್ ಬಾಗಿಲು ಎದರುಬದಾರಾಗಿ ಇರಲೇಬಾರದು.
ಅಡುಗೆ ಸಿಂಕ್ ಈಶಾನ್ಯ ದಿಕ್ಕಿನಲ್ಲಿ ಇರಲಿ.
ಅಡುಗೆ ಮನೆಯ ಗೋಡೆಗೆ ಕಿತ್ತಳೆ, ಕೆಂಪು, ಹಳದಿಯಂತಹ ವೈಬ್ರೆಂಟ್ ಬಣ್ಣಗಳನ್ನು ವಾಸ್ತು ಸೂಚಿಸುತ್ತದೆ.
ಮನೆಯ ಪಾಸಿಟವ್ ಬದಲಾವಣೆಗಾಗಿ ಪ್ರತಿನಿತ್ಯ ಮಲಗುವ ಮುನ್ನ ಕಿಚನ್ ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಿ.