ತುಳಸಿ ಗಿಡವನ್ನು ಟೆರೆಸ್‌ ಮೇಲಿಟ್ಟರೆ ಎಚ್ಚರಿಕೆ ತೆಗೆದುಕೊಳ್ಳಿ, ಅಪ್ಪಿತಪ್ಪಿ ಈ ಮೂರು ಕೆಲ್ಸ ಮಾಡ್ಬೇಡಿ

Published : Jun 27, 2026, 03:04 PM IST

ಮನೆಯ ಅಂಗಳದಲ್ಲಿ ತುಳಸಿಬೆಳೆಸುವ ಪದ್ಧತಿ ನಮ್ಮಲ್ಲಿದೆ. ಆದ್ರೀಗ ಮನೆ ಮುಂದೆ ತುಳಸಿ ಗಿಡ ಬೆಳೆಸಲು ಸಾಧ್ಯವಾಗೋದಿಲ್ಲ. ಜಾಗ ಇಲ್ದಿರೋ ಕಾರಣ ಜನರು ಟೆರೆಸ್, ಬಾಲ್ಕನಿ ಮೇಲೆ ತುಳಸಿ ಗಿಡ ಬೆಳೆಸ್ತಾರೆ. ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ ತುಳಸಿ ಗಿಡ ನೆಡ್ತೇವೆ, ಆದ್ರೆ ಇದೇ ವಾಸ್ತುದೋಷಕ್ಕೆ ಕಾರಣ ಆಗ್ಬಹುದು.

PREV
14
ಸ್ವಚ್ಛತೆಯ ತೀವ್ರ ನಿರ್ಲಕ್ಷ್ಯ

ತುಳಸಿ ಗಿಡವನ್ನು ಟೆರೆಸ್ ಮೇಲೆ ಬೆಳೆಸ್ಬಾರದು ಎನ್ನುವ ನಿಯಮ ಇಲ್ಲ. ಆದ್ರೆ ತುಳಸಿ ಗಿಡ ಬೆಳೆಸಿದಾಗ ಅದ್ರ ಬಗ್ಗೆ ವಿಶೇಷ ಗಮನ ಹರಿಸಬೇಕು. ಇಲ್ಲ ಅಂದ್ರೆ ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ತುಳಸಿಯನ್ನು ಲಕ್ಷ್ಮಿ ದೇವಿ ಎಂದು ಪರಿಗಣಿಸಲಾಗುತ್ತದೆ. ಧೂಳು, ಒಣ ಎಲೆಗಳು ಅಥವಾ ಪಕ್ಷಿ ಹಿಕ್ಕೆಗಳು ಹೆಚ್ಚಾಗಿ ಟೆರೆಸ್ ಮೇಲೆ ಇರುತ್ವೆ. ತುಳಸಿ ಸಸ್ಯದ ಸುತ್ತಲಿನ ಪ್ರದೇಶವನ್ನು ಸದಾ ಸ್ವಚ್ಛವಾಗಿಡಬೇಕು. ತುಳಸಿ ಬಳಿ ಇರುವ ಕೊಳಕು ಸಕಾರಾತ್ಮಕ ಶಕ್ತಿಯನ್ನು ನಕಾರಾತ್ಮಕವಾಗಿ ಪರಿವರ್ತಿಸುತ್ತದೆ. ಕೊಳಕು, ಬಡತನ ಮತ್ತು ಅಶಾಂತಿಗೆ ಕಾರಣವಾಗುತ್ತದೆ.

24
ತಪ್ಪು ದಿಕ್ಕು

ವಾಸ್ತುವಿನಲ್ಲಿ ದಿಕ್ಕುಗಳು ಬಹಳ ಮಹತ್ವದ್ದಾಗಿವೆ. ತುಳಸಿ ಗಿಡವನ್ನು ಟೆರೆಸ್ ಮೇಲೆ ತಪ್ಪಾದ ಜಾಗದಲ್ಲಿ ಇಟ್ಟಾಗ ವಾಸ್ತು ದೋಷಗಳು ಉಂಟಾಗುತ್ತವೆ. ತುಳಸಿಯನ್ನು ಯಾವಾಗಲೂ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಟ್ಟರೆ ಅದು ನಿಮ್ಮ ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತದೆ. ಮನೆಯಲ್ಲಿ ತೊಂದರೆ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ.

34
ಒಣಗಿದ ಸಸ್ಯ

ಟೆರೆಸ್ ಮೇಲೆ ಗಿಡವನ್ನು ಬೆಳೆಸಿ ನೀವು ನಿತ್ಯ ನೀರು ಹಾಕಿಲ್ಲ ಅಂದ್ರೆ ಅದು ಪಾಪ. ಅನೇಕರು ತುಳಸಿ ಗಿಡವನ್ನು ನೆಟ್ಟು ಅದಕ್ಕೆ ನೀರು ಹಾಕಲು ಮರೆಯುತ್ತಾರೆ. ಅತಿಯಾದ ಬಿಸಿಲಿನಲ್ಲಿಡುತ್ತಾರೆ. ತುಳಸಿ ಗಿಡದ ಬಳಿ ದೀಪವನ್ನು ಬೆಳಗಿಸುವುದಿಲ್ಲ. ಇದ್ರಿಂದ ತುಳಸಿ ಗಿಡ ಒಣಗುತ್ತದೆ. ತುಳಸಿ ಗಿಡ ಒಣಗಿದ್ರೆ ಮನೆಯ ಮುಖ್ಯಸ್ಥರ ಆರೋಗ್ಯ ಮತ್ತು ಸಂಪತ್ತಿನ ಮೇಲೆ ನೇರ ಪರಿಣಾಮ ಬೀರುತ್ತದೆ. ನಿತ್ಯ ನೀರು ಹಾಕಿ, ತುಳಸಿ ಗಿಡದ ಸೇವೆ ಸಾಧ್ಯ ಇಲ್ಲ ಎನ್ನುವವರು ತುಳಸಿಗಿಡ ಬೆಳೆಸಬೇಡಿ.

44
ತುಳಸಿ ಗಿಡ ಬೆಳೆಸಿದಾಗ ಈ ಕೆಲ್ಸ ಮಾಡಿ

ನೆಲದಲ್ಲಿ ಜಾಗ ಇಲ್ಲ ಟೆರೆಸ್ ಮೇಲೆ ತುಳಸಿ ಗಿಡ ಬೆಳೆಸ್ತೀರಿ ಎಂದಾದ್ರೆ ತುಳಸಿ ಗಿಡವನ್ನು ಎತ್ತರದ ಸ್ಟ್ಯಾಂಡ್ ಮೇಲೆ ಇಡಿ. ಇದರಿಂದ ಅದು ನೆಲದೊಂದಿಗೆ ನೇರ ಸಂಪರ್ಕಕ್ಕೆ ಬರುವುದಿಲ್ಲ. ಅತಿಯಾದ ಸೂರ್ಯನ ಬೆಳಕು ಮತ್ತು ಪಕ್ಷಿಗಳಿಂದ ರಕ್ಷಿಸಲು ಛಾವಣಿಯ ಕೆಳಗೆ ಗಿಡ ಬೆಳೆಸಿ. ಸಂಜೆ ಅಲ್ಲಿ ನಿಯಮಿತವಾಗಿ ದೀಪವನ್ನು ಬೆಳಗಿಸಿ.

Read more Photos on
click me!

Recommended Stories