ಈ ವರ್ಷ, ದೀಪಾವಳಿಯನ್ನು ಅಕ್ಟೋಬರ್ 20, 2025 ರಂದು ಆಚರಿಸಲಾಗುತ್ತದೆ ಮತ್ತು ದೀಪಾವಳಿಗೆ ಮೊದಲು ಮನೆಗಳನ್ನು ಸ್ವಚ್ಛಗೊಳಿಸುವುದು ಸಾಮಾನ್ಯವಾಗಿದೆ. ದೀಪಾವಳಿಗೆ (deepavali) ಮೊದಲು ಮನೆಯ ಪ್ರತಿಯೊಂದು ಮೂಲೆಯನ್ನು ಸ್ವಚ್ಛಗೊಳಿಸುವುದರಿಂದ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದು ಸುಲಭ. ಸ್ವಚ್ಚವಾಗಿರುವ ಮನೆಗೆ ಲಕ್ಷ್ಮೀ ದೇವಿಯೂ ಆಗಮಿಸುತ್ತಾಳೆ. ಅದರಲ್ಲೂ ನೀವು ಕ್ಲೀನ್ ಮಾಡುವಾಗ ಕೆಲವೊಂದು ವಸ್ತುಗಳು ನಿಮಗೆ ಸಿಕ್ಕರೆ, ಶೀಘ್ರದಲ್ಲಿ ಲಕ್ಷ್ಮೀ ದೇವಿಯ ಆಗಮನ ಆಗುತ್ತೆ ಅನ್ನೋದನ್ನು ಸೂಚಿಸುತ್ತೆ.