ಕನಸಿನ ಮನೆ ಖರೀದಿಸುವ ಮುನ್ನ ಈ ವಾಸ್ತು ಸಲಹೆ ಪಾಲಿಸಿ

First Published | Mar 2, 2021, 3:10 PM IST

ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಜನರು ವಿವಿಧ ಕೆಲಸಗಳಿಂದ ದೂರ ಉಳಿದಿದ್ದರು. ಜನರು ಕರೋನಾ ಅವಧಿಯಲ್ಲಿ ತಮ್ಮ ಕನಸಿನ ಮನೆಯನ್ನು ಖರೀದಿಸುವ ಯೋಜನೆಯನ್ನು ಮುಂದೂಡಿದರು. ಕರೋನಾದಿಂದ ಈಗ ಚೇತರಿಸಿಕೊಳ್ಳುತ್ತಿರುವ ಕಾರಣ, ಜನರು ತಮ್ಮ ಕನಸಿನ ಮನೆಯನ್ನು ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಡೆವಲಪರ್ಗಳೂ ತಮ್ಮ ಆಸ್ತಿಯನ್ನು ಜನರಿಗೆ ತೋರಿಸುತ್ತಾರೆ. ಇದು ಮನೆ ಖರೀದಿದಾರರಿಗೆ ಹೊಸ ಅನುಭವವೂ ಹೌದು.

ಕನಸಿನ ಮನೆಯನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಮೊದಲು ವಾಸ್ತುವಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು, ಇದರಿಂದ ಯಾವುದೇ ವಾಸ್ತು ದೋಷಗಳಿದ್ದರೆಪ್ರಗತಿಗೆ ಅಡ್ಡಿಯಾಗುವುದಿಲ್ಲ. ಮನೆ ಅಥವಾ ಫ್ಲ್ಯಾಟ್ ಖರೀದಿಸುವಾಗ ಯಾವ ಯಾವ ವಾಸ್ತು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ತಿಳಿಯಿರಿ...
ಕನಸಿನ ಮನೆಯನ್ನು ನಿರ್ಮಿಸಲು ಕನಿಷ್ಠ ಮೂರು ಆಯ್ಕೆಗಳನ್ನು ಆರಿಸಿ. ಮನೆಯ ಎಲ್ಲಾ ಆಯಾಮಗಳನ್ನು ಮೌಲ್ಯಮಾಪನ ಮಾಡಲು ವಾಸ್ತು ತಜ್ಞರ ಸಲಹೆಯನ್ನು ಪಡೆದುಕೊಳ್ಳಿ ಮತ್ತು ನಂತರ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿ.
Tap to resize

ಯಾವಾಗಲೂ ಉತ್ತರ, ಈಶಾನ್ಯ ಅಥವಾ ಪೂರ್ವದಿಕ್ಕಿನಲ್ಲಿ ಮುಖ್ಯ ದ್ವಾರವಿರುವ ಮನೆ ಅಥವಾ ಫ್ಲ್ಯಾಟ್ ಅನ್ನು ಆಯ್ಕೆ ಮಾಡಿ. ವಾಸ್ತು ಪ್ರಕಾರ ಇದು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ.
ಮನೆಯಲ್ಲಿ ಬೆಳಗಿನ ಸೂರ್ಯನ ಕಿರಣಗಳು ಇರಬೇಕು. ಯಾವುದೇ ಸುಖಿ ಮನೆಗೆ ಇದು ಮುಖ್ಯ. ಬೆಳಗಿನ ಕಿರಣಗಳು ಮನೆಗೆ ಬರುತ್ತವೆಯೇ ಹೊರತು ಸಂಜೆಯ ಕಿರಣಗಳಲ್ಲ.
ಮನೆಯ ಉತ್ತರದಿಂದ ಪೂರ್ವಕ್ಕೆ ಹೆಚ್ಚು ಮುಕ್ತವಾದ ಸ್ಥಳವನ್ನು ಹೊಂದಿರಬೇಕು.
ಮನೆಯ ಅಡುಗೆ ಮನೆ ಆಗ್ನೇಯದಲ್ಲಿರಬೇಕು, ನೈಋತ್ಯದಲ್ಲಿ ಮಾಸ್ಟರ್ ಬೆಡ್ ರೂಂಗಳು ಮತ್ತು ವಾಯುವ್ಯದಲ್ಲಿ ಮಕ್ಕಳ ಕೋಣೆಗಳು ಇರಬೇಕು.
ಪೂಜಾ ಸ್ಥಳ ಅಥವಾ ದೇವರ ಗುಡಿ ಉತ್ತರದ ಪೂರ್ವಭಾಗದಲ್ಲಿರಬೇಕು.
ಮನೆಯ ಅಥವಾ ಫ್ಲ್ಯಾಟ್ ಗಾತ್ರಚೌಕ ಅಥವಾ ಆಯತಾಕಾರದಲ್ಲಿರಬೇಕು. ವಾಸ್ತು ಪ್ರಕಾರ, ಅಂತಹ ಮನೆಗಳು ಮತ್ತು ಫ್ಲ್ಯಾಟ್ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಮನೆ ಅಥವಾ ಫ್ಲ್ಯಾಟ್ ಖರೀದಿಸಿದಾಗಲೆಲ್ಲ ವಾಸ್ತು ತಜ್ಞರ ಅಭಿಪ್ರಾಯ ಪಡೆದುಕೊಳ್ಳಿ. ಹೀಗೆ ಮಾಡುವುದರಿಂದ ಕನಸಿನ ಮನೆ ವಾಸ್ತು ದೋಷಗಳಿಂದ ಮುಕ್ತವಾಗುತ್ತದೆ ಮತ್ತು ಕುಟುಂಬಸಂತೋಷವಾಗಿರುತ್ತದೆ.

Latest Videos

click me!